ಪವಿತ್ರ ಕಾವೇರಿ ತೀರ್ಥೋದ್ಭವ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗಿ…

ಮಡಿಕೇರಿ : ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಕ್ಟೋಬರ್ 17ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನಾಳೆ ಮಧ್ಯಾಹ್ನ ಕಾವೇರಿ ಉಗಮಸ್ಥಳ ತಲಕಾವೇರಿಯಲ್ಲಿ ನಡೆಯಲಿರುವ ತೀರ್ಥೋದ್ಭವ ವೀಕ್ಷಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 12.30ಕ್ಕೆ ಭಾಗಮಂಡಲಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ನಂತರ ತಲಕಾವೇರಿಗೆ ತೆರಳಲಿದ್ದಾರೆ. ಪೂಜಾ ಕಾರ್ಯ ಹಾಗೂ ತೀರ್ಥೋದ್ಭವ ವೀಕ್ಷಣೆ ಬಳಿಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆಂದು ಡಿಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.
ಕಾವೇರಿ ತೀರ್ಥೋದ್ಭವ – ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್ ಹರಿದು ವಿಕೃತಿ – ಕ್ರಮಕ್ಕೆ ಆಗ್ರಹ

ಭಾಗಮಂಡಲ : ನಾಡಿನ ಜೀವನದಿ ಕಾವೇರಿಯ ತವರು ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಜಾತ್ರೋತ್ಸವ ಅ.17ರಂದು ನಡೆಯಲಿದೆ. ಈ ಸಂಬಂಧ ಭಕ್ತಾದಿಗಳಿಗೆ ಸ್ವಾಗತ ಕೋರಿ ಕಾರುಗುಂದದಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಗೌಡ ಸಮಾಜಗಳ ಒಕ್ಕೂಟ ವತಿಯಿಂದ ವಿವಿಧೆಯಲ್ಲಿ ಸ್ವಾಗತದ ಬ್ಯಾನರ್ ಅಳವಡಿಸಲಾಗಿತ್ತು. ಕಾರುಗುಂದ ವ್ಯಾಪ್ತಿಯಲ್ಲಿ ರಸ್ತೆ ಬದಿ ಅಳವಡಿಸಲಾಗಿದ್ದ ಬ್ಯಾನರ್ ಅನ್ನು ಹರಿದು ಹಾಕಲಾಗಿದೆ. ಈ ಕೃತ್ಯವನ್ನು ವಿವಿಧ ಗೌಡ ಸಮಾಜಗಳು ಖಂಡಿಸಿದ್ದು, ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪೊಲೀಸ್ ಇಲಾಖೆ […]