ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

Power Cut

ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-3 ಕೆ.ಎಸ್.ಆರ್.ಟಿ.ಸಿ ಮತ್ತು ವಿಎಫ್-7 ಹೆಗ್ಗಳ ಫೀಡರ್‍ಗಳಲ್ಲಿ ಸೆಪ್ಟೆಂಬರ್, 11 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಫೀಡರ್ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ಮೀನುಪೇಟೆ, ಸುಣ್ಣದ ಬೀದಿ, ಖಾಸಗಿ ಬಸ್ ನಿಲ್ದಾಣ, ಪೋಲಿಸ್ ಸ್ಠೇಷನ್ ಹಿಂಬಾಗ, ಆರ್ಜಿ, ಪೆರಂಬಾಡಿ, ಹೆಗ್ಗಳ, ತೋರ, ರಾಮನಗರ, ಬಟ್ಟಮಕ್ಕಿ, ಎಡಮಕ್ಕಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು […]

ವೀರಾಜಪೇಟೆ ಗಣೇಶೋತ್ಸವ ಡಿಜೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ – ದೂರು ಹಿಂಪಡೆಯಲು ಮೊಹಮ್ಮದ್‌ ನಯಾಜ್‌ ಮನವಿ

ವೀರಾಜಪೇಟೆ : ವೀರಾಜಪೇಟೆ ಗಣೇಶೋತ್ಸವದಲ್ಲಿ ಧ್ವನಿವರ್ದಕ ಬಳಸಿದ ಸಂಬಂಧ ದಾಖಲಾಗಿರುವ ದೂರುಗಳನ್ನು ಹಿಂಪಡೆಯಬೇಕೆಂದು ಸ್ನೇಹಿತರ ಒಕ್ಕೂಟ ಮನವಿ ಮಾಡಿದೆ. ವರ್ಷಂಪ್ರತಿ ವೀರಾಜಪೇಟೆಯಲ್ಲಿ ನಡೆಯುವ ಐತಿಹಾಸಿಕ ಗೌರಿ ಗಣೇಶ ವಿಸರ್ಜನೋತ್ಸವ ಜಾತಿ ಮತ ಭೇದವಿಲ್ಲದೆ ಸರ್ವ ಜನಾಂಗದವರು ಕೂಡಿ ಒಗ್ಗೂಡಿ ಆಚರಿಸುತ್ತಾರೆ. ಈ ಸಂಭ್ರಮದ ಬಗ್ಗೆ ರಾಜ್ಯದ ಕೆಲವು ಮಾಧ್ಯಮಗಳು ಅಶಾಂತಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಯಾವುದೇ ಪೂರಕವಾದ ಸಾಕ್ಷಿ ಇರುವುದಿಲ್ಲ. ಉತ್ಸವದಲ್ಲಿ ಸರ್ವ ಜನಾಂಗದವರು ಕುಣಿದು ಕುಪ್ಪಳಿಸಿ ಊರ ಹಬ್ಬದಂತೆ ಸಂಭ್ರಮಿಸಿದ್ದಾರೆ. ಇದರಿಂದ ಯಾರಿಗೂ ಸಮಸ್ಯೆಯಾಗಿರುವುದಿಲ್ಲ. […]

ಮಡಿಕೇರಿ ತಾಲೂಕು ಬಂಟರ ಸಂಘದ ವತಿಯಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅ.26ಕ್ಕೆ

ಮಡಿಕೇರಿ : ಮಡಿಕೇರಿ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಅ.26ರಂದು ನಡೆಯಲಿದೆ. ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ತಾಲೂಕು ಮಹಿಳಾ ಘಟಕ, ಯುವ ಬಂಟ್ಸ್‌ ಅಸೋಸಿಯೇಷನ್‌, ನಗರ ಬಂಟರ ಸಂಘ, ನಗರ ಮಹಿಳಾ ಘಟಕ, ವಿರಾಜಪೇಟೆ, ಸೋಮವಾರಪೇಟೆ ತಾಲೂಕು ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಶೈಕ್ಷಣಿಕವಾಗಿ ಸಾಧನೆಗೈದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು […]

ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ – ನಂದಿಮೊಟ್ಟೆ ಜೀಪ್‌ ಚಾಲಕರ ವಿರುದ್ಧ ಪ್ರಕರಣ ದಾಖಲು..!

ಮಡಿಕೇರಿ : ನಗರದ ಹೊರವಲಯದ ನಂದಿಮೊಟ್ಟೆಯಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಂದಲಪಟ್ಟಿಗೆ ಬಾಡಿಗೆ ತೆರಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರವಾಸಿ ಕುಟುಂಬ ಹಾಗೂ ಸ್ಥಳೀಯ ಜೀಪ್‌ ಚಾಲಕರ ನಡುವೆ ಗಲಾಟೆ ನಡೆದು, ಈ ವೇಳೆ ಅಲ್ಲಿನ ಚಾಲಕರು ಕೆಲವರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಬಳಿಕ ಹಲ್ಲೆಗೊಳಗಾದ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ದಾಖಲೆ ಸಹಿತವಾಗಿ ಪೊಲೀಸ್‌ ಠಾಣೆಯಲ್ಲಿ ದೂರು […]