ದುಬೈಯಲ್ಲಿ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಅದ್ಧೂರಿಯಾಗಿ ಜರುಗಿದ ಮೀಲಾದುನ್ನಭಿ

ಅಬುದಾಬಿ : ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಕುಂಜಿಲ ಜಮಾತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಮೀಲಾದುನ್ನಭಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಆಗಸ್ಟ್ 30 ರಂದು ದೇರಾ ದುಬೈಯಲ್ಲಿರುವ ಟ್ರಿಪಲ್ ಹೈಟ್ ಹೋಟೆಲ್ ಸಭಾಂಗಣದಲ್ಲಿ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಗಳ್ ಅವರ ದುಆದೊಂದಿಗೆ ಮೀಲಾದ್ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು, ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ, […]
ಹೃದಯಾಘಾತದಿಂದ ಮೃತಪಟ್ಟ ಪಿಡಿಒ..!

ಸೋಮವಾರಪೇಟೆ : ಹೃದಯಾಘಾತದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು(PDO) ಕೊನೆಯುಸಿರೆಳೆದಿದ್ದಾರೆ. ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮನಮೋಹನ್ ಮೃತ ಅಧಿಕಾರಿ. ಇವರು ಪ್ರಸ್ತುತ ನಿಯೋಜನೆ ಮೇಲೆ ವಿರಾಜಪೇಟೆ ತಾಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.