ಕೊಡಗಿನಲ್ಲಿ ಮದ್ಯ ಮಾರಾಟ ನಿಷೇಧ: ಯಾವಾಗ? ಎಲ್ಲೆಲ್ಲಿ?

ಮಡಿಕೇರಿ ನಗರದಲ್ಲಿ ಹಾಗೂ ವಿರಾಜಪೇಟೆ ನಗರದಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ದತ್ತವಾದ ಅಧಿಕಾರದಂತೆ ಆಗಸ್ಟ್, 29 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮಡಿಕೇರಿ ನಗರದ ವ್ಯಾಪ್ತಿಯಲ್ಲಿ, ಸೆಪ್ಟೆಂಬರ್, 06 ರಂದು ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್, 07 ರ ಬೆಳಗ್ಗೆ 10 ಗಂಟೆಯವರೆಗೆ ವಿರಾಜಪೇಟೆ ನಗರ ಹಾಗೂ ಅದರ ಸುತ್ತಮುತ್ತಲಿನ ಸುಮಾರು […]
ಮಡಿಕೇರಿ-ವೀರಾಜಪೇಟೆ ಹೆದ್ದಾರಿ ಬದಿಯಲ್ಲಿ ಮತ್ತೆ ಭೂಕುಸಿತ..!

ಮಡಿಕೇರಿ : ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಲ್ಪಿಸುವ ಶಕ್ತಿ ನಗರ ಬಳಿ ರಸ್ತೆ ಬದಿ ಭೂಕುಸಿತವಾಗಿದೆ. ಕೆಲವು ದಿನದ ಹಿಂದೆ ಈ ಜಾಗದಲ್ಲಿ ಕುಸಿತವಾಗಿತ್ತು. ಅಲ್ಲಿ ಹೆಚ್ಚಿನ ಕುಸಿತವಾಗದಂತೆ ತಡೆಯಲು ಸ್ಯಾಂಡ್ ಬ್ಯಾಗ್ ಜೋಡಿಸಿಡಲಾಗಿತ್ತು. ಆದರೆ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಿ ಮತ್ತೆ ಕುಸಿತ ಸಂಭವಿಸಿದೆ. ಜೋಡಿಸಿಡಲಾಗಿದ್ದ ಮರಳಿನ ಮೂಟೆಗಳು ಕೆಳ ಬದಿಗೆ ಜಾರಿ ಹೋಗಿವೆ. ಅಲ್ಲಿನ ರಸ್ತೆ ಕಡಿದಾಗಿದ್ದು, ಹೆಚ್ಚಿನ ವಾಹನ ಸಂಚಾರ ಈ ಮಾರ್ಗದಲ್ಲಿರುವುದರಿಂದ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದೆ. […]
ಗಣೇಶೋತ್ಸವದಲ್ಲಿ ಡಿಜೆ ನಿರ್ಬಂಧ – ಮೊದಲ ದಿನ ಮಿಶ್ರ ಪ್ರತಿಕ್ರಿಯೆ – ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದ ಸಮಿತಿಗಳು..!

ಮಡಿಕೇರಿ : ಈ ಬಾರಿಯ ಗೌರಿ ಗಣೇಶೋತ್ಸವ ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಡಿಜೆ, ಸೌಂಡ್ಸ್ ಬಳಕೆ ವಿಚಾರವಾಗಿ ಹೆಚ್ಚಾಗಿ ಚರ್ಚೆಗೊಳಪಟ್ಟಿದೆ. ನಿಯಮ ಬಾಹಿರವಾಗಿ ಡಿಜೆ ಬಳಕೆ ಮಾಡದಂತೆ ಪೊಲೀಸ್ ಇಲಾಖೆ ಈಗಾಗಲೇ ಎಚ್ಚರಿಕೆಯನ್ನು ಕೊಟ್ಟಿದೆ. ಈ ನಡುವೆ ಗಣೇಶೋತ್ಸವದ ಮೊದಲ ದಿನ ಕೊಡಗು ಜಿಲ್ಲೆಯಲ್ಲಿ ಗಣೇಶೋತ್ಸವ ಸಮಿತಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಜೆ ಬಳಸಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನಿಯಮ ಉಲ್ಲಂಘಿಸಿದರೆ ಆಯೋಜಕರು ಹಾಗೂ ಡಿಜೆ ವ್ಯವಸ್ಥೆ ಕಲ್ಪಿಸಿದವರ ಮೇಲೂ ಕ್ರಮ ಕೈಗೊಳ್ಳುವ ಜೊತೆಗೆ ಪರಿಕರಗಳನ್ನು ಮುಟ್ಟುಗೋಲು […]
ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಬಿರುಸು – ಇನ್ನೆಷ್ಟು ದಿನ ಇರಲಿದೆ ಗೊತ್ತಾ..?

ಕರಾವಳಿ : ಕಳೆದ ಮೂರು ದಿನದಿಂದ ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮತ್ತೆ ಮಳೆ ಬಿರುಸುಗೊಂಡಿದೆ. ಈ ಮಳೆ ಇನ್ನೂ ಕೆಲವು ದಿನ ಮುಂದುವರೆಯುವ ಸಾಧ್ಯತೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಮಧ್ಯಾಹ್ನ ನಂತರ ಮಳೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 5ರ ತನಕ ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ. ಮಲೆನಾಡು ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಮಳೆ ಮುಂದುವರೆಯಲಿದೆ. ಇದು ಆಗಸ್ಟ್ 31ರವರಗೆ ಸಾಗಲಿದೆ. […]