ʼಮಾಹೆದ ಆಟಿದ ತುಳು ಪರ್ಬʼ – ಕುಕ್ಕೇರ ಬೆಳಕು ರಚಿಸಿದ ಕೊರಗಜ್ಜನ ಚಿತ್ರಕ್ಕೆ ದ್ವಿತೀಯ ಬಹುಮಾನ..!

ಮಣಿಪಾಲ : ಮಾಹೆ ವಿವಿ ವತಿಯಿಂದ ನಡೆದ ʼಮಾಹೆದ ಆಟಿದ ತುಳು ಪರ್ಬʼ ಚಿತ್ರಕಲಾ ಸ್ಪರ್ಧೆಯಲ್ಲಿ ಕುಕ್ಕೇರ ಬೆಳಕು ಬೊಳ್ಳಮ್ಮ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಆಟಿ ತಿಂಗಳ ಮಹತ್ವ ಸಾರುವ ಉದ್ದೇಶದಿಂದ ವಿವಿ ವಿತಿಯಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜಾನಪದದ ವಿಷಯಾಧಾರಿತ ʼತುಳು ರಂಗ್‌ʼ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ತುಳುನಾಡಿನಲ್ಲಿ ಹೆಚ್ಚು ಆರಾಧಿಸಲ್ಪಡುವ ದೈವ ಸ್ವಾಮಿ ಕೊರಗಜ್ಜನ ಮುಖಭಾವದ ಚಿತ್ರವನ್ನು ಬೆಳಕು ರಚಿಸಿದ್ದರು. ಈ ಚಿತ್ರಕ್ಕೆ ದ್ವಿತೀಯ […]

ಗಣೇಶೋತ್ಸವಕ್ಕೆ ಸಜ್ಜಾದ ವೀರಾಜಪೇಟೆ : ಪಟ್ಟಣದ 22 ಕಡೆ ವಿನಾಯಕ ಮೂರ್ತಿ ಪ್ರತಿಷ್ಟಾಪನೆ..!

ವೀರಾಜಪೇಟೆ : ಕೊಡಗು ಜಿಲ್ಲೆಯಲ್ಲಿ ಹೆಚ್ಚು ಜನಪ್ರಿಯತೆ, ಆಕರ್ಷಣೆ ಪಡೆದಿರುವುದು ವೀರಾಜಪೇಟೆಯ ಸಾಮೂಹಿಕ ಗಣೇಶೋತ್ಸವ. ಹಲವು ಕಾರಣದಿಂದಾಗಿ ಇದು ಜನಾಕರ್ಷಣೆಯ ಕೇಂದ್ರವಾಗಿದೆ. ಈ ಬಾರಿಯ ಉತ್ಸವಕ್ಕೆ ಪಟ್ಟಣ ಸಜ್ಜಾಗಿದ್ದು, ಅಂತಿಮ ಹಂತದ ತಯಾರಿ ಭರದಿಂದ ಸಾಗಿದೆ. ಈ ಬಾರಿ 22 ಕಡೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ಆಚರಣೆ 200 ವರ್ಷಗಳಿಂದ ನಡೆದುಕೊಂಡು ಬಂದಿದೆ. ಸೆಪ್ಟೆಂಬರ್ 6 ರಂದು ರಾತ್ರಿ ಶೋಭಾಯಾತ್ರೆ ನಡೆಯಲಿದ್ದು, 7 ರಂದು ನಸುಕಿನ ಜಾವ ಗೌರಿ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ. ಈ […]

ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ತುಸು ಬಿರುಸು – ಆತಂಕದಲ್ಲಿ ಗಣೇಶೋತ್ಸವ ಸಮಿತಿಗಳು..!

ಮಡಿಕೇರಿ : ಕೆಲವು ದಿನದಿಂದ ವಿರಾಮ ನೀಡಿದ್ದ ಮಳೆರಾಯ ಮತ್ತೆ ನಿಧಾನಕ್ಕೆ ಬಿರುಸು ಪಡೆದುಕೊಳ್ಳುತ್ತಿದ್ದಾನೆ. ಮಡಿಕೇರಿ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಮಳೆ ಬಿರುಸುಗೊಂಡಿದೆ. ಗೌರಿ ಹಬ್ಬದ ದಿನ ಮಳೆಯಾಗಮನ ಶುಭ ಸಂಕೇತ ಅಂತ ಅನೇಕರು ನಂಬಿದ್ದಾರೆ. ಈ ನಡುವೆ ನಾಳೆಯ ಗಣೇಶೋತ್ಸವ ಸಂಭ್ರಮಕ್ಕೆ ವರುಣ ದೇವ ಅಡ್ಡಿಯಾಗದಿರಲಿ ಅಂತ ಜನ ಬೇಡಿಕೊಳ್ಳುತ್ತಿದ್ದಾರೆ. ಸಂಭ್ರಮದ ಉತ್ಸವಕ್ಕೆ ವಿವಿಧ ಸಮಿತಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾವೆ. ಹೀಗಿರುವಾಗ ಇಂದು ಮಳೆಯಾಗಿರುವುದು ಸಹಜವಾಗಿ ಆತಂಕಕಕ್ಕೆ ಕಾರಣವಾಗಿದೆ.

ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ವಿರೋಧ – ಕ್ಷಮೆ ಕೇಳಲು ಸಿದ್ಧ ಎಂದ ಡಿಸಿಎಂ ಡಿಕೆಶಿ..!

ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೆಲವು ದಿನದ ಹಿಂದೆ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ʼನಮಸ್ತೇ ಸದಾ ವತ್ಸಲೇ ಮಾತೃ ಭೂಮೇ..ʼ ಹಾಡನ್ನು ಪ್ರಸ್ತಾಪಿಸಿ ಮಾತ ನಾಡಿದ್ದರು. ಇದಕ್ಕೆ ಕಾಂಗ್ರೆಸ್‌ನ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಕುರಿತಂತೆ ಮೌನ ಮುರಿದಿರುವ ಡಿಕೆಶಿ, “ನನ್ನ ಹೇಳಿಕೆಯಿಂದ ಕ್ಷಮೆ ಕೇಳಬೇಕು ಅಂತಿದ್ದರೆ ಕ್ಷಮೆಗೆ ಸಿದ್ದನಿದ್ದೇನೆ” ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಬಿಜೆಪಿ ನಾಯಕರು ಮಾತಾಡಿದಾಗ, ಅವರ ಸಿದ್ದಾಂತದ ಅರಿವು ನನಗೆ ಇದೆ ಅಂತ ಕಾಲೆಳೆದೆ. ನಾನು […]

ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮ ಆ.27ಕ್ಕೆ

ಭಾಗಮಂಡಲ : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದ ರೂಢಿ ಸಂಪ್ರದಾಯದಂತೆ ಪ್ರತೀ ವರ್ಷ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಆಗಸ್ಟ್ ೨೭ ರಂದು ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್ ಕೋರಿದ್ದಾರೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ೨೭ ರಂದು ಬೆಳಗ್ಗೆ ೯.೩೦ […]