ನಾಳೆ ಕೊಡಗಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Power Cut

ಪೊನ್ನಂಪೇಟೆ ಹಾಗೂ ಶ್ರೀಮಂಗಲ ವಿದ್ಯುತ್ ಉಪ ಕೇಂದ್ರದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆ, ಎಫ್1 ನಲ್ಲೂರು, ಎಫ್2 ಬಾಳೆಲೆ, ಎಫ್4 ತಿತಿಮತಿ, ಎಫ್5 ಪಾಲಿಬೆಟ್ಟ, ಎಫ್6 ಬೇಗೂರು, ಎಫ್7 ಗೋಣಿಕೊಪ್ಪ, ಎಫ್8 ಪೊನ್ನಂಪೇಟೆ, ಎಫ್9 ಹಾತೂರು, ಎಫ್10 ಹೈಸೊಡ್ಲೂರು, ಎಫ್1 ಬಿರುನಾಣಿ, ಎಫ್2 ಕುಟ್ಟ, ಎಫ್3 ಶ್ರೀಮಂಗಲ, ಎಫ್4 ಕಾನೂರು, ಎಫ್5 ಕೆ.ಬಾಡಗ, ಎಪ್6 ಬೀರುಗ, ಎಫ್7 ಟಿ.ಶೆಟ್ಟಗೇರಿ, ಈ ಫೀಡರ್‍ಗಳಿಂದ ಹೊರಹೊಮ್ಮುವ ಸುಳುಗೋಡು, ಕೋಣನಕಟ್ಟೆ, ಕೊಟ್ಟಗೇರಿ, ದೇವನೂರು, ಕಿರಗೂರು, ನಿಟ್ಟೂರು, ಜಾಗಲೆ, ಅರವತೋಕ್ಲು, ದೇವರಪುರ, ಕಾಯಿಮನೆ, […]

🛑 *ದಾಖಲೆಯ ಬೆನ್ನೇರಿ ʼಸು ಫ್ರಂ ಸೋʼ ಯಶಸ್ಸಿನ ಓಟ – ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು 5.5 ಕೋಟಿ ರೂ.ಗೆ ಮಾರಾಟ..!

ಬೆಂಗಳೂರು : ಕನ್ನಡ ಚಿತ್ರೋದ್ಯಮದಲ್ಲಿ ʼಸು ಫ್ರಂ ಸೋʼ ಹಲವು ದಾಖಲೆಗಳನ್ನ ನಿರ್ಮಿಸುತ್ತಾ ಯಶಸ್ಸಿನ ಓಟ ಮುಂದುವರೆಸಿದೆ. 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್‌ ಮಾಡಿರುವ ಚಿತ್ರ ಈಗ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ಮಾರಾಟದಲ್ಲಿಯೂ ದಾಖಲೆ ನಿರ್ಮಿಸಿದೆ. ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್‌ ಪ್ರಸಾರ ಹಕ್ಕನ್ನು ಕಲರ್ಸ್‌ ಮತ್ತು ಹಾಟ್‌ಸ್ಟಾರ್‌ ಸಂಸ್ಥೆ ಪಡೆದುಕೊಂಡಿದೆ. ಬರೋಬ್ಬರಿ ಐದೂವರೆ ಕೋಟಿ ರೂಪಾಯಿಗೆ ಹಕ್ಕು ಮಾರಾಟವಾಗಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಹಕ್ಕು ಖರೀದಿಯಾಗಿದ್ದು, ಕಲರ್ಸ್‌ […]

ಮೊಬೈಲ್ ಫೋಟೋಗಳಿಂದ ಛಾಯಾಗ್ರಾಹಕರ ವೃತ್ತಿ ಬದುಕಿಗೆ ಆತಂಕ – ಆವೃತ್ತಿ ಮಹದೇವಪ್ಪ

ಕುಶಾಲನಗರ : ಮೊಬೈಲ್ ಫೋಟೋಗ್ರ‍್ರಫಿ ಪರಿಣಾಮ ವೃತ್ತಿಪರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್‌ಗಳ ಜೀವನ ದುಸ್ತರವಾಗಿದ್ದು, ಭವಿಷ್ಯದ ದಿನಗಳ ಚಿಂತೆ ಇವರನ್ನು ಕಾಡುತ್ತಿದೆ ಎಂದು ಕೊಡಗು ಜಿಲ್ಲಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಕುಶಾಲನಗರದ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಒಂದೇ ನಾಣ್ಯದ ಎರಡು ಮುಖವೆಂದು ಬಣ್ಣಿಸಿದ […]

ಮುಜರಾಯಿ ಸಚಿವರನ್ನು ಭೇಟಿಯಾದ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಆಡಳಿತ ವ್ಯವಸ್ಥಾಪನಾ ಸಮಿತಿ

ಮಡಿಕೇರಿ : ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು ಭೇಟಿಯಾಗಿ ಸಭೆ ನಡೆಸಿದರು. ದೇವಾಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡುವಂತೆ ಶಾಸಕ ಡಾ.ಮಂತರ್ ಗೌಡ ಸಚಿವರಲ್ಲಿ ಮನವಿ ಸಲ್ಲಿಸಿದರು. ನಂತರ ಸಭೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ಯೋಜನಾ ವರದಿ ತಯಾರಿ ಮಾಡಿ ವರದಿ […]