ಡಿಜೆ ಬಗ್ಗೆ ಜಾಗೃತಿ ಮೂಡಿಸಲು ಗಣೇಶೋತ್ಸವ ಸಮಿತಿ ಸದಸ್ಯರ ಸಭೆ ಕರೆ ಜಿಲ್ಲಾ ಪೊಲೀಸ್..!

ಮಡಿಕೇರಿ : ಗೌರಿ ಗಣೇಶೋತ್ಸವ ಆಚರಣೆ ಸಂದರ್ಭ ಡಿಜೆ ಬಳಕೆಗೆ ಸರ್ಕಾರ ನಿರ್ಬಂಧ ಹೇರಿದೆ. ಈ ಸಂಬಂಧ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವತಿಯಿಂದ ಗಣೇಶೋತ್ಸವ ಸಮಿತಿ ಸದಸ್ಯರ ಸಭೆಯನ್ನು ಕರೆದಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಎಸ್ಪಿ ಕೆ. ರಾಮರಾಜನ್, ಡಿಜೆ ಒತ್ತಡದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಗಣೇಶ ಸಮಿತಿ ಸದಸ್ಯರೊಂದಿಗೆ ಸಭೆ ಆಯೋಜಿಸುತ್ತಿದ್ದೇವೆ. ಡೆಸಿಬಲ್ ಮೀಟರ್ ಮೂಲಕ ಪ್ರಾತಕ್ಷಿಕೆ ನೀಡಲಾಗುವುದು. ಈ ಸಂದರ್ಭ ಇಎನ್‌ಟಿ ವೈದ್ಯರು […]
ರಾಷ್ಟ್ರೀಯ ಜೂನಿಯರ್ ಹಾಕಿ – ಕರ್ನಾಟಕ ತಂಡದಲ್ಲಿ ಕೊಡಗಿನ 11 ಮಂದಿ ಆಟಗಾರರು..!

ಮಡಿಕೇರಿ : ಹಾಕಿ ಇಂಡಿಯಾ ವತಿಯಿಂದ ಪಂಜಾಬ್‌ನಲ್ಲಿ ನಡೆಯಲಿರುವ ಹಾಕಿ ಇಂಡಿಯಾ ಜೂನಿಯರ್ ಮೆನ್ಸ್ ನ್ಯಾಷನಲ್ ಚಾಂಪಿಯನ್‌ಶಿಪ್ 2025 ಹಾಕಿ ಟೂರ್ನಿಗೆ ರಾಜ್ರ ತಂಡ ಪ್ರಕಟವಾಗಿದ್ದು, ಕೊಡಗಿನ 11 ಮಂದಿ ಆಟಗಾರರು ಅವಕಾಶ ಗಿಟ್ಟಿಸಿದ್ದಾರೆ. ನಾಯಕರಾಗಿ ಕೊಡಗಿನ ಬಿ.ಎಸ್. ಧ್ರುವ, ಆಟಗಾರರಾಗಿ ಬಿದ್ದಾಟಂಡ ಬೋಪಣ್ಣ, ಕುಲ್ಲೇಟಿರ ವಚನ್ ಕಾಳಪ್ಪ, ವಿಶ್ವನಾಥ್, ಹರ್ಷಿತ್ ಕುಮಾರ್, ಮಂಡೇಡ ಅಚ್ಚಯ್ಯ, ಬಲ್ಯಂಡ ಸಂಪನ್ ಗಣಪತಿ, ಚೋಯಮಾಡಂಡ ಆಕರ್ಷ್ ಬಿದ್ದಪ್ಪ, ಕೆ.ಆರ್. ಪೂಜಿತ್, ಕೋಳೆರ ಹೃತಿಕ್ ಅಯ್ಯಪ್ಪ, ಚೋಕಿರ ಕುಶಾಲ್ ಬೋಪಯ್ಯ ತಂಡದಲ್ಲಿದ್ದಾರೆ. […]
ಯುವ ಒಕ್ಕೂಟ ವತಿಯಿಂದ ಭಾಗಮಂಡಲದಲ್ಲಿ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಆ.23ಕ್ಕೆ

ಮಡಿಕೇರಿ : ಕೊಡಗು ಜಿಲ್ಲಾ ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆ.23 ರಂದು ಭಾಗಮಂಡಲದಲ್ಲಿ 33ನೇ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು ಅಯ್ಯಂಗೇರಿ ಶ್ರೀ ಕೃಷ್ಣ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಬೆಳಗ್ಗೆ […]
ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕುಶಾಲನಗರ ಸಮಿತಿ ರಚನೆ – ಅಧ್ಯಕ್ಷರಾಗಿ ಹೆಚ್.ಬಿ. ದಿನೇಶ್ ಚಾರಿ ಆಯ್ಕೆ

ಮಡಿಕೇರಿ : ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಕುಶಾಲನಗರ ತಾಲೂಕು ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಹೆಚ್.ಬಿ. ದಿನೇಶ್ ಚಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ. ಅಮೃತ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಾಂತಕುಮಾರ್, ಎನ್.ಕೆ. ಮಾಲಾದೇವಿ, ಸಹಕಾರ್ಯದರ್ಶಿಯಾಗಿ ರಮೇಶ್ ಕೆ.ಆರ್., ಕೋಶಾಧಿಕಾರಿಯಾಗಿ ಬರಮಣ್ಣ ಟಿ ಬೆಟ್ಟಗೇರಿ, ನಿರ್ದೇಶಕರಾಗಿ ಚಂದ್ರಶೇಖರ್ ಕೆ.ಎಸ್., ಎಸ್.ಎಸ್. ಅಂಕಿತಾ, ಮಂಜುನಾಥ್, ಪ್ರಕಾಶ್, ಶಿಲ್ಪ ಎಚ್.ಎಸ್., ದೀಪಿಕಾ ಎಮ್.ಎಸ್., ಬಸವರಾಜ್., ಮನು ಅವರನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಗೌರವ ಸಲಹೆಗಾರರಾಗಿ ಎಂ.ಎ. ರುಬೀನಾ […]
ಸಿ&ಡಿ ಜಾಗದ ಸಮಸ್ಯೆ – ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ವಸ್ತು ಸ್ಥಿತಿ ವಿವರಿಸಿದ ಶಾಸಕ ಡಾ. ಮಂತರ್ ಗೌಡ

ಬೆಂಗಳೂರು : ಕೊಡಗು ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಶಾಸಕ ಡಾ. ಮಂತರ್ ಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿಯಾದ ಶಾಸಕರು, ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ವಿವರಿಸಿದರು. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಶಾಸಕರು, ಜಿಲ್ಲೆಯ ರೈತರು ಕೃಷಿಕರ ಆತಂಕವನ್ನು ಬಗೆಹರಿಸಲು ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೆಲವೊಂದು ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಕಾನೂನಾತ್ಮಕವಾಗಿಯೇ ಬಗೆಹರಿಸಬೇಕಾಗುತ್ತದೆ. ಈ ಎಲ್ಲಾ […]
ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಕೆ. ಹಂಸ ನೇಮಕ – ಶುಭಕೋರಿದ ಶಾಸಕ ಎ.ಎಸ್. ಪೊನ್ನಣ್ಣ

ಮಡಿಕೇರಿ : ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೆ.ಕೆ. ಹಂಸ ನೇಮಕವಾಗಿದ್ದಾರೆ. ಚೆಟ್ಟಿಮಾನಿ ಗ್ರಾಮದ ಕುಂದಚೆರಿ ನಿವಾಸಿಯಾಗಿರುವ ಹಂಸ ಪಕ್ಷದಲ್ಲಿ ಸಕ್ರಿಯರಾಗಿದ್ದು, ನೂತನ ಜವಾಬ್ದಾರಿ ನೀಡಿ ಶಾಸಕ ಎ.ಎಸ್. ಪೊನ್ನಣ್ಣ ಆದೇಶಿಸಿದ್ದಾರೆ. ಕೊಡಗು ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಮ್ಮಡ ಸೋಮಣ್ಣ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪಟ್ಟಡ ರಕ್ಷಿತ್ ಚೆಂಗಪ್ಪ ಶಿಫಾರಸಿನ ಮೇರೆಗೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅನುಮೋದನೆಯೊಂದಿಗೆ […]
ಸ್ವಾತಂತ್ರ್ಯೋತ್ಸವ ಅಂಗವಾಗಿ ಸುನ್ನಿ ಯುವಜನ ಸಂಘದ ವತಿಯಿಂದ ವೀರಾಜಪೇಟೆ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ

ವೀರಾಜಪೇಟೆ : ಸುನ್ನಿ ಯುವಜನ ಸಂಘ(ಎಸ್‌ವೈಎಸ್) ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವೀರಾಜಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿದರು. ಆವರಣದಲ್ಲಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಸರ ಶುಚಿತ್ವದ ಅರಿವು ಮೂಡಿಸಿದರು. ಈ ಕಾರ್ಯದಲ್ಲಿ ಎಸ್‌ವೈಎಸ್ ವೀರಾಜಪೇಟೆ ವೃತ್ತದ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಂಘಟನೆ ರಾಜ್ಯ ಸಮಿತಿ ಸದಸ್ಯ ಮುಖಂಡ ಅಹಮ್ಮದ್ ಮದನಿ, ನಮ್ಮ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿರಬೇಕು. ಎಸ್‌ವೈಎಸ್ ವತಿಯಿಂದ ವಿವಿಧ ಸಂದರ್ಭದಲ್ಲಿ ಸಮಾಜಮುಖಿ […]