ಆಟೋ ರಿಕ್ಷಾ ಮೇಲೆ ಕಾಡಾನೆ ದಾಳಿ – ಪ್ರಯಾಣಿಕನಿಗೆ ಗಂಭೀರ ಗಾಯ..!

ಗೋಣಿಕೊಪ್ಪ : ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನದಿಂದ ಕಾಡಾನೆಗಳ ದಾಳಿ ಮಿತಿಮೀರಿದೆ. ಚಲಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದ್ದು, ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಂಜಿಲಗೆರೆಯಲ್ಲಿ ನಡೆದಿದೆ. ಆಟೋ ರಿಕ್ಷಾ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಪಕ್ಕದ ತೋಟದಿಂದ ಏಕಾಏಕಿ ಬಂದ ಕಾಡಾನೆ ದಾಳಿ ಮಾಡಿದೆ. ಆಟೋ ರಿಕ್ಷಾ ಚಾಲಕ ಅಪಾಯದಿಂದ ಪಾರಾಗಿದ್ದರೆ, ರಿಕ್ಷಾದಲ್ಲಿದ್ದ ಪ್ರಯಾಣಿಕ ಪ್ರದೀಪ್‌ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ […]

ಉದ್ಯಮಿ ಅಜ್ಜಿನಂಡ ಗಣೇಶ್‌ ಅಯ್ಯಣ್ಣ ನಿಧನ…

ಮಡಿಕೇರಿ : ಉದ್ಯಮಿ ಅಜ್ಜಿನಂಡ ಗಣೇಶ್ ಅಯ್ಯಣ್ಣ(68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಟ್ರಸ್ಟಿ ಆಗಿದ್ದರು. ಕಾಲೇಜು ರಸ್ತೆಯಲ್ಲಿ ಅಂಬಿಕಾ ವಿಡಿಯೋ ಶಾಪ್ ಹೊಂದಿದ್ದರು. ಮೃತರಿಗೆ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಮೋಂತಿ ಗಣೇಶ್, ಮೂವರು ಮಕ್ಕಳು ಇದ್ದಾರೆ. ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಕೊಡವ ಸಮಾಜ ರುದ್ರ ಭೂಮಿಯಲ್ಲಿ ನಡೆಯಲಿದೆ.