ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

ಮಡಿಕೇರಿ: ನಗರದ ವಿದ್ಯುತ್ 66/11 ಕೆ.ವಿ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಫೀಡರ್‍ನಲ್ಲಿ ಹಾಗೂ ಎಫ್5 ಜಿ.ಟಿ ರಸ್ತೆ ಫೀಡರ್‍ನಲ್ಲಿ ಆಗಸ್ಟ್, 06 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿಬೀದಿ, ಪೆನ್ಸನ್ ಲೈನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆಎಸ್‍ಆರ್‍ಟಿಸಿ ಬಸ್ ಸ್ಟಾಂಡ್, ಹಳೆ ಖಾಸಗಿ ಬಸ್ ಸ್ಟಾಂಡ್, ಜಯನಗರ, ಅಶೋಕಪುರ, ಜಲಾಶ್ರಯ ಬಡಾವಣೆ, ಸರಕಾರಿ ಆಸ್ಪತ್ರೆ, ಮಂಗಳದೇವಿನಗರ, ಅರಣ್ಯಭವನ, ಚೈನ್‍ಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ […]
ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಆಕ್ರೋಶ – ಅನಿರ್ಧಿಷ್ಟಾವಧಿಗೆ ಪ್ರತಿಭಟನೆ ಮುಂದೂಡಿಕೆ..!

ಬೆಂಗಳೂರು : ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿದ್ದ ಮುಷ್ಕರವನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಈ ವೇಳೆ ನೌಕರರ ನಡೆಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪರಿಸಿ, ನೌಕರರ ಸಂಘಟನೆಗಳಿಗೆ ತರಾಟೆ ತೆಗೆದುಕೊಂಡಿತು. ಮುಷ್ಕರದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಎಚ್ಚರಿಸಿತು. ಹೈಕೋರ್ಟ್‌ನಲ್ಲಿ ತರಾಟೆಗೊಳಗಾಗುತ್ತಿದ್ದಂತೆ ಸುದ್ದಿಗೊಷ್ಠಿ ನಡೆಸಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್, ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ […]
ಕೊಡಗು ಜಿಲ್ಲೆಯ ಮಳೆ ಮಾಹಿತಿ ಇಲ್ಲಿದೆ

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 1.43 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.23 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2175.38 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2299.33 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 2.27 ಮಿ.ಮೀ. ಕಳೆದ ವರ್ಷ ಇದೇ ದಿನ 8.95 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3271.77 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ […]
KSRTC ನೌಕರರು ಹಠ ಮಾಡೋದ್ರಲ್ಲಿ ಅರ್ಥ ಇಲ್ಲ, ಸರ್ಕಾರದ ಪರಿಸ್ಥಿತಿ ಅರ್ಥ ಮಾಡ್ಕೊಳ್ಳಿ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು : ಹಲವು ಬೇಡಿಕೆಗಳನ್ನ ಮುಂದಿಟ್ಟು ಕೆಎಸ್‌ಆರ್‌ಟಿಸಿ ನೌಕರರು ಇಂದಿನಿಂದ ಮುಷ್ಕರ ಆರಂಭಿಸಿದ್ದಾರೆ. ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೈಕೋರ್ಟ್ ಸೂಚಿಸಿತ್ತು. ಆದ್ರೆ ಅದನ್ನೂ ಲೆಕ್ಕಿಸದೆ ನೌಕರರು ಮುಷ್ಕರ ಶುರುಮಾಡಿದ್ದಾರೆ. ಮುಷ್ಕರದ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಅವರ ಬೇಡಿಕೆಗಳನ್ನ ನಮ್ಮ ಮುಂದಿಡುವುದು ತಪ್ಪಲ್ಲ. ಆದ್ರೆ ಅವ್ರು ಸರ್ಕಾರದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು. ಆಗದಿರೋದನ್ನ ಮಾಡಿ ಅಂತ ಹೇಳೋದಲ್ಲ ಎಂದಿದ್ದಾರೆ. ನಮಗೆ ನಾಗರಿಕರು ಇಂಪಾರ್ಟೆಂಟ್. ಜನರಿಗೆ ಯಾರೂ ತೊಂದರೆ ಕೊಡಬೇಡಿ. ಕೆಲವು ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ […]
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ʼಬಾಲಗೋಕುಲ ಮಡಿಕೇರಿʼ ವತಿಯಿಂದ ಛದ್ಮವೇಷ ಸ್ಪರ್ಧೆ…

ಮಡಿಕೇರಿ : ʼಬಾಲಗೋಕುಲ ಮಡಿಕೇರಿʼ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.೧೭ರಂದು ʼಶ್ರೀ ಕೃಷ್ಣ, ಬಲರಾಮ, ರುಕ್ಮಣಿ, ರಾಧೆ, ದೇವಕಿ, ಯಶೋದೆ, ವಸುದೇವ ಹಾಗೂ ಕುಚೇಲರ ಛದ್ಮವೇಷʼ ಸಮಾಗಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಛದ್ಮವೇಷದಧಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ ಉಡುಗೊರೆ ನೀಡಲಾಗುವುದು. ಭಾಗವಹಿಸಲು ಇಚ್ಚಿಸುವವರು 09-08-2025 ರೊಳಗೆ ಈ ಕೆಳಗಿನ ಸಂಪರ್ಕ ಸಂಖ್ಯೆಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಕೊಳ್ಳಬೇಕಿದೆ. ಮೊಬೈಲ್ ಸಂಖ್ಯೆ: 9448541328, 9740131805