‘ಸು ಫ್ರಮ್ ಸೋ’ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಕೋಟಿ?

ಕನ್ನಡ ಚಿತ್ರರಂಗದಲ್ಲಿ ಕೆಲವರು ಇನ್ನೂ ಕೂಡ KGF ಚಿತ್ರದ ಗುಂಗಿನಲ್ಲಿದ್ದಾರೆ. ಪ್ಯಾನ್ ಇಂಡಿಯಾ ಎಂಬ ಭ್ರಮಾ ಲೋಕದ ಬೆನ್ನತ್ತಿದ್ದಾರೆ. ಆದರೆ ಇನ್ನು ಕೆಲವರು ಹೊಸ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊಸ ಹೊಸ ಆಲೋಚನೆಗಳಿಂದ ಎಲ್ಲರನ್ನು ನಿಬ್ಬೇರಗಾಗಿಸುತ್ತಿದ್ದಾರೆ. ಹೊಸಬರ ಸಿನಿಮಾವೊಂದು ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ. ”ಸು ಫ್ರಮ್‌ ಸೋ” (Su From So) ಚಿತ್ರ ಕನ್ನಡ ಚಿತ್ರರಂಗದ ಸದ್ಯದ ಉತ್ತಮ ಉದಹಾರಣೆ. ಅಬ್ಬರದ ಪ್ರಚಾರ ಇಲ್ಲ.. ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಸ್ಟಾರ್ ಇಲ್ಲ. ಆದರೂ ಇವತ್ತು ಎಲ್ಲರ […]

ಧರ್ಮಸ್ಥಳದಲ್ಲಿ ಶ*ವ ಹೂತ ಪ್ರಕರಣ – 06ನೇ ಪಾಯಿಂಟ್‌ನಲ್ಲಿ ಪತ್ತೆಯಾಯಿತು ಮೂಳೆ..!

Dharmasthala Case

ಧರ್ಮಸ್ಥಳ : ನೂರಕ್ಕೂ ಹೆಚ್ಚು ಶವಗಳನ್ನ ಹೂತಿದ್ದೇನೆಂದು ವ್ಯಕ್ತಿಯೊಬ್ಬ ಹೇಳಿದ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮೂರು ದಿನದಿಂದ ನಡೆಯುತ್ತಿದ್ದ ಉತ್ಕನನದಲ್ಲಿ ಇಂದು ಆರನೇ ಪಾಯಿಂಟ್‌ನಲ್ಲಿ ಮೂಳೆ ಪತ್ತೆಯಾಗಿದೆ. ಮೊನ್ನೆಯಿಂದ ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಎಸ್‌ಐಟಿ ಶೋಧ ಕಾರ್ಯ ನಡೆಸಿತ್ತು. ಸಣ್ಣ ಹಿಟಾಚಿಯನ್ನೂ ಬಳಸಲಾಗಿತ್ತು. ಇಂದು ನೇತ್ರಾವತಿ ನದಿ ತೀರದಲ್ಲಿ ಗುರುತಿಸಿದ್ದ ಪಾಯಿಂಟ್‌ ನಂಬರ್‌ ಆರರಲ್ಲಿ ಕಳೇಬರದ ಕುರುಹು ಪತ್ತೆಯಾಗಿದೆ. ಅದು ಮನುಷ್ಯನದ್ದಾ, ಪ್ರಾಣಿಯದ್ದಾ ಎಂಬ ಬಗ್ಗೆ ತಿಳಿಯಲು ಅದನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿಂದ ವರದಿ ಬಂದ […]

ಉಚಿತ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ..! – ಕುಶಾಲನಗರದಲ್ಲಿ ಅಧಿಕಾರಿಗಳ ದಾಳಿ – ದೊಡ್ಡ ದಂಧೆಯ ಶಂಕೆ.!

free rice

ಕುಶಾಲನಗರ : ನ್ಯಾಯಬೆಲೆ ಅಂಗಡಿಯಲ್ಲಿ ಸಿಕ್ಕ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಕುಶಾಲನಗರದಲ್ಲಿ (Kushalnagar) ಬೆಳಕಿಗೆ ಬಂದಿದೆ. ಪೂರಕ ಮಾಹಿತಿ ಹಿನ್ನೆಲೆಯಲ್ಲಿ ಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ತಾಲೂಕು ಆಹಾರ ನಿರೀಕ್ಷಕಿ ಎಂ.ಎಸ್.‌ ಸ್ವಾಮಿ ನೇತೃತ್ವದ ತಂಡ ಅಕ್ಕಿ ಮಾರಾಟ ದಂಧೆಯನ್ನು ಬಯಲಿಗೆಳೆದಿದೆ. ವ್ಯಕ್ತಿಯೊಬ್ಬ ಮನೆ ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ ಅದನ್ನು ಬೇರೆಡೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಸುಂದರ ನಗರದಲ್ಲಿ ಮನೆಗಳಿಂದ ಅಕ್ಕಿ ಸಂಗ್ರಹಿಸುವ ವೇಳೆ ದಾಳಿ ಮಾಡಿ ರೆಡ್‌ ಹ್ಯಾಂಡ್‌ ಆಗಿ […]

Kodagu: ಕಳೆದ 24 ಗಂಟೆ ಅವಧಿಯಲ್ಲಿ ಸುರಿದ ಮಳೆ ವಿವರ

Kodagu rain

ಮಡಿಕೇರಿ:- ಕೊಡಗು (Kodagu) ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 16.05 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 60.87 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2132.17 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2174.42 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 31.80 ಮಿ.ಮೀ. ಕಳೆದ ವರ್ಷ ಇದೇ ದಿನ 101.60 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3197.72 ಮಿ.ಮೀ, ಕಳೆದ ವರ್ಷ […]

ಮಾಲೆಗಾಂವ್‌ ಸ್ಪೋಟ ಪ್ರಕರಣ – ತೀರ್ಪು ಪ್ರಕಟಿಸಿದ ಮುಂಬೈ NIA ಕೋರ್ಟ್‌ – ಎಲ್ಲಾ 07 ಆರೋಪಿಗಳು ದೋಷಮುಕ್ತ..!

Malegaon blast

ಮುಂಬೈ : ಮಾಲೆಗಾಂವ್‌ ಸ್ಪೋಟಕ್ಕೆ (Malegaon blast) ಸಂಬಂಧಿಸಿದಂತೆ ಮುಂಬೈನ ಎನ್‌ಐಇ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದ್ದು, ಎಲ್ಲಾ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿನ ಮಸೀದಿ ಬಳಿ 2008ರ ಸೆಪ್ಟೆಂಬರ್ 29 ರಂದು ಬಾಂಬ್‌ ಸ್ಪೋಟವಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ನ್ಯಾಯಾಲಯ 07 ಆರೋಪಿಗಳ ವಿರುದ್ಧ ಅರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನಿರ್ದೋಷಿಗಳೆಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್(ನಿವೃತ್ತ), […]

ಮಹಿಳೆ ಮೇಲೆ ಅ*ತ್ಯಾಚಾರ ಪ್ರಕರಣ – ನಾಳೆ ತೀರ್ಪು ಪ್ರಕಟಿಸಲಿರುವ ನ್ಯಾಯಾಲಯ – ಏನಾಗಲಿದೆ ಪ್ರಜ್ವಲ್‌ ರೇವಣ್ಣ ಭವಿಷ್ಯ..!

Prajwal Revanna

ಬೆಂಗಳೂರು : ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಬೇಲ್‌ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಕೆ.ಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆ(ಆ.01) ತೀರ್ಪು ಪ್ರಕಟಿಸಲಿದೆ. ವಿಚಾರಣೆ ಮುಕ್ತಾಯವಾಗಿ ಜುಲೈ 30ರಂದು ತೀರ್ಪು ಪ್ರಕಟವಾಗಬೇಕಿತ್ತು. ಆದರೆ ಕೆಲವು ಸ್ಪಷ್ಟೀಕರಣ ಬೇಕಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆಗಸ್ಟ್ 1ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ. ಸರ್ಕಾರದ ಪರ ಎಪಿಪಿ ಜಗದೀಶ್, […]