ಪತ್ರಕರ್ತ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಬರೆದ ಮೂರು ಕೃತಿ ಮೈಸೂರಿನಲ್ಲಿ ಬಿಡುಗಡೆ

ಮೈಸೂರು: ಮೈಸೂರು ಕಲ್ಚರಲ್ ಅಸೋಸಿಯೇಷನ್, ವಿಸ್ಮಯ ಪ್ರಕಾಶನ ಹಾಗೂ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ ಸಂಗೀತ ವಿವಿ ಸಭಾಂಗಣದಲ್ಲಿ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಮೂರು ಕೃತಿಗಳು ಲೋಕಾರ್ಪಣೆಗೊಂಡವು. ‘ಮೈಸೂರು ವೃತ್ತಗಳ ವೃತ್ತಾಂತ’ ಕೃತಿಯನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕ ಸಂದೇಶ್ ಕುಮಾರ್, ‘ಸಿಂಧೂರ’ ಕೃತಿಯನ್ನು ಲೆಫ್ಟಿನೆಂಟ್ ಕರ್ನಲ್ ಪಿ.ಎಸ್. ಗಣಪತಿ, ‘ಮೈಸೂರಿನ ಗಲ್ಲಿ ಕಥೆ’ ಕೃತಿಯನ್ನು ಶಾಸಕ ಟಿ.ಎಸ್. ಶ್ರೀವತ್ಸ ಬಿಡುಗಡೆಗೊಳಿಸಿದರು. ಸಾನ್ನಿಧ್ಯ ವಹಿಸಿದ್ದ […]
ಕೊಡಗಿನಲ್ಲಿ ಗಾಳಿ ಸಹಿತ ಭಾರೀ ಮಳೆ: ಮರ ಬಿದ್ದು ದೇವಾಲಯಕ್ಕೆ ಹಾನಿ

ಕೆದಮಳ್ಳೂರು ಗ್ರಾಮದ ಚೂರಿ ಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನವು ಅರ್ಧಕ್ಕಿಂತ ಹೆಚ್ಚು ಹಾನಿಯಾಗಿರುತ್ತದೆ. ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರರು ಭೇಟಿ ನೀಡಿ ಪರಿಶೀಸಿದ್ದಾರೆ.
ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ: ಬೆಳ್ಳಿ ಪದಕ ಗೆದ್ದ ಪ್ರೀತ್ ಅಪ್ಪಯ್ಯ

ಮೈಸೂರು: 13ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್ ನಲ್ಲಿ ಮಹಿಳಾ ಮಾಸ್ಟರ್ಸ್ ವಿಭಾಗದಲ್ಲಿ ಕೊಡಗಿನ ಜಮ್ಮಡ ಪ್ರೀತ್ ಅಪ್ಪಯ್ಯ ಬೆಳ್ಳಿ ಪದಕ ಗೆದ್ದಿದ್ದಾರೆ. ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ಚಾಂಪಿಯನ್‌ಶಿಪ್ ಜುಲೈ 1 ರಿಂದ 21 ರವರೆಗೆ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಶೂಟಿಂಗ್ ರೇಂಜ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಶೂಟಿಂಗ್ ರೇಂಜ್‌ನಲ್ಲಿ ನಡೆಯಿತು.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಕೊಡಗಿನ ಪ್ರೇಕ್ಷಾ

ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವ ಕೊಡಗು ಜಿಲ್ಲೆಯ ವಿರಳಾತಿ ವಿರಳರಲ್ಲಿ ಎಚ್.ಪ್ರೇಕ್ಷಾ ಸಹ ಒಬ್ಬಳು. ಸೋಮವಾರಪೇಟೆ ತಾಲ್ಲೂಕಿನ ಅಟ್ಟೂರುಕಟ್ಟೆ ಗ್ರಾಮದ ಗುತ್ತಿಗೆದಾರ ಹರೀಶ್ ಹಾಗೂ ಸಿಂಧು ಅವರ ಪುತ್ರಿಯಾದ ಎಚ್.ಪ್ರೇಕ್ಷಾ 4ನೇ ತರಗತಿ ವಿದ್ಯಾರ್ಥಿನಿ. ಈಕೆ ಈ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಮಹಾಭಾರತದಲ್ಲಿ ಬರುವ 101 ಕೌರವರ ಹೆಸರನ್ನು 54 ಸೆಕೆಂಡ್‌ನಲ್ಲಿ ಹೇಳುವ ಮೂಲಕ ಈ ವಿಷಯದಲ್ಲಿ ಈ ಹಿಂದೆ ಇದ್ದ ದಾಖಲೆಯನ್ನು ಮುರಿದಿದ್ದಾಳೆ. ಈ ಹಿಂದೆ […]
ಕಾರ್ಗಿಲ್ ವಿಜಯ್ ದಿವಸ್ ಮತ್ತು ಬಲಿದಾನಿಗಳ ಸ್ಮರಣೆ – ವಿಶೇಷ ಲೇಖನ

ಜುಲೈ 26—ಇದು ಭಾರತೀಯರ ಆತ್ಮಸ್ಮರಣೆಯ ದಿನ. ಇದು ಕೇವಲ ಒಂದು ಇತಿಹಾಸದ ಪುಟವಲ್ಲ; ದೇಶದ ಸಂವಿದಾನಿಕ ಸಮಗ್ರತೆಗಾಗಿ ಹೋರಾಡಿದ ವೀರ ಯೋಧರ ತ್ಯಾಗವನ್ನು ಸ್ಮರಿಸುವ ಪವಿತ್ರ ದಿವಸ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವಿನ ಸಂಕೇತವಾಗಿ ಪ್ರತಿ ವರ್ಷದ ಈ ದಿನವನ್ನು ನಾವು ‘ಕಾರ್ಗಿಲ್ ವಿಜಯ ದಿವಸ’ ವಾಗಿ ಆಚರಿಸುತ್ತೇವೆ. ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ ದೇಶದ ಜನಮನದಲ್ಲಿ ಹೊಸ ಚೈತನ್ಯ ಮೂಡಿಸಿದರೂ, ಅದಕ್ಕೂ ಮುನ್ನ ಹಿಮಾಲಯದ ಎತ್ತರದ ಪರ್ವತಗಳಲ್ಲಿ ನಡೆದ ಕಾರ್ಗಿಲ್ ಯುದ್ಧವು ಭಾರತೀಯ […]
ಸೋಮವಾರಪೇಟೆ: ಮನೆಯ ಗೋಡೆ ಕುಸಿದು ಮಹಿಳೆ ಸಾವು

ಸೋಮವಾರಪೇಟೆ: ಮನೆಯ ಗೋಡೆ ಕುಸಿದು ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ (Somwarpet) ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಕಲಬುರಗಿ ಮೂಲದ ಅಫೂಲ್ ಪುರದ ಸುಷ್ಮಾ(29) ಮೃತ ಮಹಿಳೆಯಾಗಿದ್ದಾರೆ. ಇಂದು ಬೆಳಿಗ್ಗೆ 5.30ಕ್ಕೆ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಮಣ್ಣಿನ ಗೋಡೆ ಕುಸಿದು ತಲೆ ಭಾಗಕ್ಕೆ ಬಿದ್ದ ಹಿನ್ನೆಲೆ ಸ್ಥಳದಲ್ಲೇ ಸಾವಪ್ಪಿದ್ದಾರೆ. ಮನೆಯೊಳಗಿದ್ದ ಈರ್ವರು ಮಕ್ಕಳು ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.