ಹಾಸನದಿಂದ ಬೂಕರ್‌ವರೆಗೆ ಬಾನು ಮುಷ್ತಾಕ್ ಪಯಣ – Coorg Buzzನಲ್ಲಿ ಪ್ರಸಾರವಾಗಲಿದೆ ಸಾಧಕಿಯ ಸಂದರ್ಶನ..!

ಮಡಿಕೇರಿ : ಸಾಹಿತ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ʼಬೂಕರ್ ಪ್ರಶಸ್ತಿʼ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು Coorg Buzz ಸಂದರ್ಶಿಸಿದೆ. ಹಾಸನದಲ್ಲಿರುವ ಅವರ ಮನೆಗೆ ಭೇಟಿ ನೀಡಿದ ಕೂರ್ಗ್ ಬಜ್ಹ್ ತಂಡ ಅವರನ್ನು ಅಭಿನಂದಿಸಿತು. ಬಳಿಕ ಬಾನು ಮುಷ್ತಾಕ್ ಅವರು ನಮ್ಮ ವಾರದ ವಿಶೇಷ ಪಾಡ್‌ಕಾಸ್ಟ್ ʼin & out’ಗಾಗಿ ವಿಶೇಷ ಸಂದರ್ಶನ ನೀಡಿದರು. ನಿರಂತರ ಪ್ರವಾಸ, ಪ್ರತಿನಿತ್ಯ ಹಲವಾರು ಕಾರ್ಯಕ್ರಮ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಒಂದು ಗಂಟೆ ಕಾಲ ನಮ್ಮ ಮಾತುಕೆಯಲ್ಲಿ ಭಾಗಿಯಾದರು. […]
ಕೊಡಗಿನ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

ವಿರಾಜಪೇಟೆಯ ತೆಲುಗರ ಬೀದಿ ನಿವಾಸಿಗಳಾದ ಅಜಯ್ ಸಿಂಗ್ ಹಾಗು ವಿಭಾ ದಂಪತಿಗಳ ಮಗಳು ಹಾಗೂ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.