ʼಬೆಳ್ಳಿ ಗೆಜ್ಜೆʼ ಕವನ ಸಂಕಲನ ಬಿಡುಗಡೆ ಜುಲೈ 15ಕ್ಕೆ

ಸೋಮವಾರಪೇಟೆ : ಯುವ ಸಾಹಿತಿ ಹೇಮಂತ್ ಪಾರೇರ ಬರೆದಿರುವ ʼಬೆಳ್ಳಿ ಗೆಜ್ಜೆʼ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಜು.15ರಂದು ನಡೆಯಲಿದೆ. ಕನ್ನಡಸಿರಿ ಸ್ನೇಹ ಬಳಗ ವತಿಯಿಂದ ಅಂದು ಸಂಜೆ 04 ಗಂಟೆಗೆ ಸೋಮವಾರಪೇಟೆ ಪತ್ರಿಕಾ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮವನ್ನು ಸಿದ್ದಲಿಂಗಪುರ ಅರಿಸಿನಗುಪ್ಪೆ ಮಂಜುನಾಥ ದೇವಾಲಯದ ರಾಜೇಶನಾಥ ಗುರೂಜಿ ಉದ್ಘಾಟಿಸಲಿದ್ದಾರೆ. ಕೃತಿ ಪರಿಚಯವನ್ನು ಲೇಖಕಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಿಲನಾ […]
ಮಡಿಕೇರಿಯಲ್ಲಿ ಗುರುವಂದನಾ ಕಾರ್ಯಕ್ರಮ – ಯೋಗ ಶಿಕ್ಷಕರನ್ನು ಸನ್ಮಾನಿಸಿ ಗೌರವಾರ್ಪಣೆ..!

ಮಡಿಕೇರಿ : ಗುರುಪೂರ್ಣಿಮೆ ಅಂಗವಾಗಿ ಮಡಿಕೇರಿಯ ಯೋಗ ಭಾರತಿ, ಯೋಗ ಸಂದ್ಯಾ, ಆರೋಹಣ ಕೊಡಗು, ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಗುರುವಂದನಾ ಕಾರ್ಯಕ್ರಮ ಶನಿವಾರ ನಡೆಯಿತು. ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಸದಸ್ಯರು ಗುರುವಿನ ಮಹತ್ವ ಸಾರುವ ಗೀತೆಗಳನ್ನು ಹಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂದಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಿದರು. ದಿನದ ಮಹತ್ವದ ಬಗ್ಗೆ ಅನಿತಾ ಸುಧಾಕರ್ ಮಾತನಾಡಿದರು. ಯೋಗ ಶಿಕ್ಷಕರಾದ ಮಲ್ಲಿಗೆ […]
ಹಿರಿಯ ಪತ್ರಕರ್ತ ಕಲ್ಯಾಟಂಡ ಬಿ. ಗಣಪತಿ ನಿಧನ

ರಾಜ್ಯದ ಖ್ಯಾತ ಪತ್ರಕರ್ತ ಕಲ್ಯಾಟಂಡ ಬಿ. ಗಣಪತಿ(86) ನಿಧನರಾಗಿದ್ದಾರೆ. ಮೈಸೂರು ಭಾಗದ ಜನಪ್ರಿಯ ಪತ್ರಿಕೆ ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರು ಸಂಪಾದಕರಾಗಿದ್ದ ಇವರು, 5 ದಶಕಗಳಿಂದ ಮೈಸೂರಿನಲ್ಲಿ ಪತ್ರಿಕೋದ್ಯಮಿಯಾಗಿ ಖ್ಯಾತಿ ಗಳಿಸಿದ್ದರು. ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಅಪಾರ ಜ್ಞಾನ ಹೊಂದಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ನಿಧನಕ್ಕೆ ಪತ್ರಕರ್ತರ ಸಂಘಟನೆಗಳು, ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.