Power Cut: ನಾಳೆ ಕೊಡಗಿನಲ್ಲಿ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ವಿರಾಜಪೇಟೆ 66/33/11 ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-3 ಕೆ.ಎಸ್.ಆರ್.ಟಿ.ಸಿ ಮತ್ತು ವಿಎಫ್-7 ಹೆಗ್ಗಳ ಫೀಡರ್‍ಗಳಲ್ಲಿ ಜುಲೈ, 12 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ, ವಿರಾಜಪೇಟೆ ಪಟ್ಟಣ, ತೆಲುಗರ ಬೀದಿ, ಸುಂಕದ ಕಟ್ಟೆ, ಅಪ್ಪಯ್ಯಸ್ವಾಮಿ ರಸ್ತೆ, ಕುಕ್ಲೂರು, ಕಾಕೋಟುಪರಂಬು, ಬೇತ್ರಿ, ಕೆದಮುಳ್ಳೂರು, ಪಾಲಂಗಾಲ, ಕೊಟ್ಟೋಳಿ, ಬೋಯಿಕೇರಿ, ಕದನೂರು, ಮೈತಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ […]
ಯುವನಿಧಿ ಯೋಜನೆ: ಯಾರೆಲ್ಲಾ ಅರ್ಹ? ಅರ್ಜಿ ಸಲ್ಲಿಸೋದು ಹೇಗೆ?

ಮಡಿಕೇರಿ:- ಯುವನಿಧಿ ಯೋಜನೆಯಡಿ (Yuvanidhi Yojana) ಅರ್ಜಿ ಸಲ್ಲಿಸದ ಅರ್ಹರ ಅನುಕೂಲಕ್ಕಾಗಿ ಜುಲೈ, 07 ರಿಂದ ಆಗಸ್ಟ್, 07 ರವರೆಗೆ ವಿಶೇಷ ನೋಂದಣಿ ಅಭಿಯಾನ (Campaign) ನಡೆಯಲಿದೆ. 2024-25 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಯುವನಿಧಿ ಯೋಜನೆಯ ಫಲಾನುಭವಿಗಳು ತ್ರೈಮಾಸಿಕ ಆನ್‍ಲೈನ್‍ನಲ್ಲಿ ಲಾಗಿನ್ ಆಗಿ ಸ್ವ ಘೋಷಣೆ ನೀಡಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005997154 ಗೆ ಕರೆ ಮಾಡುವ ಮೂಲಕ ಅಥವಾ […]
ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದಿಂದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್, ಕೊಡೆ ವಿತರಣೆ

ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ 17ನೇ ವರ್ಷದ ಸ್ಥಾಪನ ದಿನ ಅಂಗವಾಗಿ ವಿರಾಜಪೇಟೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಕೆದಮುಳ್ಳೂರಿನ ಕಥರಿನ ಚಿತ್ತದಿನಿ ಮಕ್ಕಳ ಮನೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಛತ್ರಿಯನ್ನು ವಿತರಿಸಲಾಗಿದೆ. ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷರಾದ ಸುಮೇಶ್ ರವರ ನೇತ್ರತ್ವದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ.
ಗುಡ್ಡೆಹೊಸೂರುವಿನಲ್ಲಿ ಲಾರಿ ಹರಿದು ವ್ಯಕ್ತಿ ಸಾವು

ಇಂದು ಬೆಳಗ್ಗಿನ ಜಾವ ಲಾರಿಯೊಂದು ವ್ಯಕ್ತಿ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಡ್ಡೆಹೊಸೂರುವಿನಲ್ಲಿ ನಡೆದಿದೆ. ಮೃತನನ್ನು ನಾಪೋಕ್ಲು ಸಮೀಪದ ಕೊಟ್ಟಮುಡಿ ಗ್ರಾಮದ ಅಬ್ದುಲ್ ಸಲಾಂ ಎಂದು ಗುರುತಿಸಲಾಗಿದೆ. ಈತ ಕಳೆದ ರಾತ್ರಿಯಿಂದ ಹೆದ್ದಾರಿ ಬದಿಯಲ್ಲೇ ಅಡ್ಡಾಡುತ್ತಿದ್ದ ಎನ್ನಲಾಗಿದ್ದು, ಇಂದು ಬೆಳಿಗ್ಗೆ ಮೈಸೂರಿನತ್ತ ತೆರಳುತ್ತಿದ್ದ ಲಾರಿ (Truck) ಹರಿದು ಮೃತಾಪಟ್ಟಿದ್ದಾನೆ. ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.