ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕೊಡಗಿನ ಅಬ್ದುಲ್ ರೆಹಮಾನ್ ಎನ್‌ಐಎ ವಶಕ್ಕೆ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಸೋಮವಾರಪೇಟೆಯ ಅಬ್ದುಲ್ ರೆಹಮಾನ್‌ನನ್ನು NIA ಅಧಿಕಾರಿಗಳು ಬಂಧಿಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪ ಸೋಮವಾರಪೇಟೆಯ ಕಲ್ಕಂದೂರಿನ ಅಬ್ದುಲ್ ರೆಹಮಾನ್ ಮೇಲೆ ಇತ್ತು. ಪ್ರರಕಣದ ನಂತರ ಈತ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ಮಾಹಿತಿ ನೀಡಿದವರಿಗೆ ನಗದು ಬಹುಮಾನೂ ಘೋಷಣೆಯಾಗಿತ್ತು. ಆದರೆ ಈತ ಮಾತ್ರ ಸಿಕ್ಕಿರಲಿಲ್ಲ. ಇಂದು ಕೇರಳದ ವಿಮಾನದ […]
ವಿದ್ಯುತ್ ಪ್ರವಹಿಸಿ ಯುವಕ ದುರ್ಮರಣ..!

ಮಡಿಕೇರಿ : ವಿದ್ಯುತ್ ತಗಲಿ ಯುವಕನೋರ್ವ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ನಡೆದಿದೆ. H.P. ಪ್ರತೀಪ್(32) ಮೃತ ಯುವಕ. ಇಂದು ಸಂಜೆ ಮನೆ ಬಳಿಯ ವಿದ್ಯುತ್ ಕಂಬವೇರಿ ದುರಸ್ತಿಗೆ ಮುಂದಾಗಿದ್ದ ವೇಳೆ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಕಂಬದಲ್ಲೇ ಪ್ರತೀಪ್ ಕೊನೆಯುಸಿರೆಳೆದಿದ್ದಾನೆ. ಮೃತದೇಹವನ್ನು ಮಡಿಕೇರಿ ಶವಾಗಾರಕ್ಕೆ ರವಾನಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ಕೈ ತೊಳೆಯುವ ದಿನಾಚರಣೆ

ಮೂರ್ನಾಡು : ಎಂ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ವಿಟಮಿನ್ ಎ ಕಾರ್ಯಕ್ರಮ ಹಾಗೂ ಕೈ ತೊಳೆಯುವ ದಿನಾಚರಣೆ ನಡೆಯಿತು. ಕೇಂದ್ರದ ಮಕ್ಕಳಿಗೆ ಪ್ರತಿ ಬಾರಿ ಹೇಗೆ ಕೈ ತೊಳೆದು ಶುಚಿಯಾಗಿರಬೇಕೆಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಕೈ ತೊಳೆಯುವ 7 ವಿಧಾನಗಳನ್ನು ಮಕ್ಕಳು ಹಾಗೂ ಪೋಷಕರಿಗೆ ಅಂಗನವಾಡಿ ಸಿಬ್ಬಂದಿ ವಿವರಿಸಿದರು. 1 ವರ್ಷ 3 ತಿಂಗಳಿಂದ ಐದು ವರ್ಷದವರೆಗಿನ ಮಕ್ಕಳಿಗೆ ವರ್ಷದಲ್ಲಿ ಎರಡು ಸಲ ಅಂದರೆ ಆರು ತಿಂಗಳಿಗೊಮ್ಮೆ ಇರುಳು ಕುರುಡುತನ ಬರದಂತೆ ತಡೆಯುವುದಕ್ಕಾಗಿ ವಿಟಮಿನ್ ಎ […]
Power Cut: ನಾಳೆ ಕೊಡಗಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ?

ಮಡಿಕೇರಿ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಫೀಡರ್‍ನಲ್ಲಿ ಜುಲೈ, 05 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 05 ಗಂಟೆಯವರೆಗೆ, ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿ ಬೀದಿ, ಪೆನ್ಸನ್ ಲೇನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆಎಸ್‍ಆರ್‍ಟಿಸಿ ಬಸ್ ಸ್ಟಾಂಡ್, ಹಳೆ ಪ್ರೈವೇಟ್ ಬಸ್ ಸ್ಟಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯಗೆ ಬೀಳ್ಕೊಡುಗೆ

ಮಡಿಕೇರಿ : ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಸಹಾಯಕ ನಿರ್ದೇಶಕರಾಗಿ ಸುದೀರ್ಘ 7 ವರ್ಷ ಸೇವೆ ಸಲ್ಲಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ವರ್ಗಾವಣೆಗೊಂಡ ಪ್ರೀತಿ ಚಿಕ್ಕಮಾದಯ್ಯ ಅವರನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ಮಡಿಕೇರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರು, ಸಿಬ್ಬಂದಿ, ಮಡಿಕೇರಿ, ಸೋಮವಾರಪೇಟೆಯ ಸಹಾಯಕ ನಿರ್ದೇಶಕರು, ಪೊನ್ನಂಪೇಟೆ ತಾಲೂಕಿನ ಸಿಬ್ಬಂದಿಗಳು, ಮಡಿಕೇರಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ಈ […]
ಗುಂಡಿಮಯ ರಸ್ತೆಗೆ ಜಲ್ಲಿ, ಮಣ್ಣು ಹಾಕಿ ತಾತ್ಕಾಲಿಕ ಪರಿಹಾರ ಕಂಡುಕೊಂಡ ಯುವಕರು – ಸುರಿವ ಮಳೆಯನ್ನೂ ಲೆಕ್ಕಿಸದೆ ಆಡಳಿತ ವ್ಯವಸ್ಥೆಗೆ ಚಾಟಿ ಬೀಸಿದ ಗ್ರಾಮಸ್ಥರು..!

ಮಡಿಕೇರಿ : ಹಲವು ವರ್ಷಗಳಿಂದ ಡಾಂಬರು ಕಾಣದೆ ಗುಂಡಿಬಿದ್ದು ಶೋಚನೀಯ ಸ್ಥಿತಿಯಲ್ಲಿದ್ದ ರಸ್ತೆಗೆ ರಾತ್ರೋರಾತ್ರಿ ಯುವಕರ ತಂಡ ಕಲ್ಲು, ಮಣ್ಣು ಹಾಕಿ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಂಡಿರುವ ಬೆಳವಣಿಗೆ ಮರಗೋಡು ಗ್ರಾಮದಲ್ಲಿ ನಡೆದಿದೆ. ಮರಗೋಡುವಿನಿಂದ ಕಟ್ಟೆಮಾಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿತ್ತು. ರಸ್ತೆಗೆ ಡಾಂಬರೀಕರಣ ಮಾಡುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈಗ ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಾಗುವವರಿಗೆ ಇನ್ನಿಲ್ಲದ ಸಮಸ್ಯೆಯಾಗುತ್ತಿತ್ತು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನ […]
ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವೈದ್ಯ ಸಾವು

ಜೂನ್ 9 ರಂದು ಸಂಜೆ ವೇಳೆಗೆ ಸೋಣಂಗೇರಿ ಸಮೀಪದ ಆರ್ತಾಜೆ ಬಳಿ KSRTC ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಲ್ಲುಗುಂಡಿಯ ಡಾ. ಶಮಂತ್ ಚಿಕಿತ್ಸೆ ಫಲಿಸದೆ ನಿನ್ನೆಯ ದಿನ (ಜುಲೈ 3)ನಿಧನರಾಗಿದ್ದಾರೆ. ಡಾ ಶಮಂತ್ ಕಲ್ಲುಗುಂಡಿಯ ಖ್ಯಾತ ವೈದ್ಯರಾದ ಡಾ ಶ್ಯಾಮ್ ಪ್ರಸಾದ್ ಭಟ್ ರವರ ಪುತ್ರ. ದುಗ್ಗಲಡ್ಕದಲ್ಲಿ ಕ್ಲಿನಿಕ್ ನಲ್ಲಿ ವೈದ್ಯರಾಗಿ (Doctor) ಕರ್ತವ್ಯ ನಿರ್ವಹಿಸುತ್ತಿದ್ದರು.
ನಿಧನ ಸುದ್ದಿ – ಈಶ್ವರ್ ರೈ ತಾಳತ್ತಮನೆ

ಮಡಿಕೇರಿ : ತಾಳತ್ತಮನೆ ದುರ್ಗಾ ಭಗವತಿ ಬಡಾವಣೆ ನಿವಾಸಿ, ನ್ಯಾಯಾಲಯ ಇಲಾಖೆಯ ನಿವೃತ್ತ ಉದ್ಯೋಗಿ ಈಶ್ವರ್ ರೈ(73) ಇಂದು ಮುಂಜಾನೆ 04 ಗಂಟೆಗೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಇಂದು ಅಪರಾಹ್ನ ಮಡಿಕೇರಿಯ ಬಂಟರ ರುದ್ರಭೂಮಿಯಲ್ಲಿ ನಡೆಯಲಿದೆ.