8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟ ನಿವಾಸಿ ಪ್ರದೀಪ್ ಕುಮಾರ್ ಹಾಗೂ ಕವಿರತ್ನ ದಂಪತಿಯ ಪುತ್ರ ಮೃತ ಬಾಲಕ. ಈತ ಅಮ್ಮತ್ತಿ ನೇತಾಜಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.‌ ಇಂದು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ವಿಮಾ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ತರಾಟೆ – ೩೫ ಸಾವಿರ ದಂಡ ವಿಧಿಸಿ ಆದೇಶ..! – ಕಾರಣ ಏನು? ಇಲ್ಲಿದೆ ಮಾಹಿತಿ

ಮಡಿಕೇರಿ : ಆರೋಗ್ಯ ವಿಮೆಯ ಹಣವನ್ನು ನೀಡಲು ನಿರಾಕರಿಸಿದ ಹೆಲ್ತ್‌ ಇನ್ಶೂರೆನ್ಸ್‌ ಸಂಸ್ಥೆಗೆ ವಿಮಾ ಮೊತ್ತದ ಜೊತೆಗೆ ೩೫ ಸಾವಿರ ರೂ. ದಂಡ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಡಿಕೇರಿ ನಿವಾಸಿ ಜೈರಸ್ ಥಾಮಸ್ ಅಲೆಕ್ಸಾಂಡರ್ ಮತ್ತು ಅವರ ಪತ್ನಿ ಶಾಲಿನಿ ಅವರು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೇರ್ ಹೆಲ್ತ್ ಇನ್ಸೂರೆನ್ಸ್ ಲಿಮಿಟೆಡ್‌ನಲ್ಲಿ ಆರೋಗ್ಯ ವಿಮಾ ಖಾತೆ ಹೊಂದಿರು. ಇದರ ಪ್ರೀಮಿಯಂ ಮೊತ್ತ ೫ ಲಕ್ಷ ರೂ. ಗಳಾಗಿದ್ದು, ೨೦೨೩ನೇ ಇಸವಿಯಲ್ಲಿ […]

ಎಫ್‌ಡಿ ಖಾತೆ ಹಣ ನೀಡಲು ವಿಳಂಬ – ವೀರಾಜಪೇಟೆಯ ಸಹಕಾರ ಸಂಘಕ್ಕೆ ದಂಡ ವಿಧಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ..!

ವೀರಾಜಪೇಟೆ : ಎಫ್‌ಡಿ ಖಾತೆಯ ಹಣವನ್ನು ನೀಡಲು ವಿಳಂಬ ಮಾಡಿದ ಸಹಕಾರ ಸಂಘಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ೨೦ ಸಾವಿರ ರೂ ದಂಡ ವಿಧಿಸಿದೆ. ಸೋಮವಾರಪೇಟೆ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಎಂ.ಡಿ. ಕಾರಿಯಪ್ಪ ಅವರು ೨೦೨೩ನೇ ಸಾಲಿನಲ್ಲಿ ವಿರಾಜಪೇಟೆಯಲ್ಲಿರುವ ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘದಲ್ಲಿ ರೂ.೧೦ ಲಕ್ಷ ರೂಪಾಯಿಗಳಿಗೆ ಒಂದು ವರ್ಷಕ್ಕೆ ಶೇ.೯ ಬಡ್ಡಿಯನ್ನು ಒಳಗೊಂಡಿರುವ ನಿಶ್ಚಿತ ಠೇವಣಿ (ಎಫ್.ಡಿ) ಖಾತೆಯನ್ನು ಮಾಡಿದ್ದರು. ಈ ಖಾತೆಯು ೨೦೨೪ನೇ ಇಸವಿಯಲ್ಲಿ ಮುಕ್ತಾಯಗೊಂಡಿದ್ದು, ತಮ್ಮ […]

ಸಾಂತ್ವನ ಮಹಿಳಾ ಸಹಾಯವಾಣಿ ವತಿಯಿಂದ ಈವರೆಗೆ ಇತ್ಯರ್ಥವಾದ ಪ್ರಕರಣಗಳು ಎಷ್ಟು ಗೊತ್ತಾ..? ಇಲ್ಲಿದೆ ಮಾಹಿತಿ

ಮಡಿಕೇರಿ : ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಸಾಂತ್ವನ ಮಹಿಳಾ ಸಹಾಯವಾಣಿ ಕೊಡಗಿನಾದ್ಯಂತ ನೊಂದ ಮಹಿಳೆಯರು ಪ್ರತಿಯೊಂದು ಸ್ತರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದಾಖಲಿಸಿಕೊಂಡು ತಕ್ಷಣಕ್ಕೆ ಸರಿಯಾಗಿ ಸಲಹೆ ಸೂಚನೆಗಳನ್ನು ನೀಡಿ ನೆರವು ಕಲ್ಪಿಸುತ್ತಾ ಬಂದಿರುತ್ತದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ ೫೫೦೨ ವಿವಿಧ ಸ್ವರೂಪದ ಪ್ರಕರಣಗಳು ದಾಖಲಾಗಿದ್ದು, ೫೪೭೮ ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. ೨೦೨೫-೨೬ನೇ ಆರ್ಥಿಕ ಸಾಲಿನಲ್ಲಿ ೮೩ ಪ್ರಕರಣಗಳು ದಾಖಲಾಗಿ ೬೫ ಪ್ರಕರಣಗಳು ಇತ್ಯರ್ಥಗೊಂಡು ಹಿಂದಿನ ಸಾಲಿನ ಉಳಿಕೆ ಪ್ರಕರಣಗಳು […]

ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಿಂದ ಶೇಷ ಡಿ.ಎಡ್ ತರಬೇತಿಗೆ ಅರ್ಜಿ ಆಹ್ವಾನ

ಮಡಿಕೇರಿ : ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ, ತಿಲಕ್‌ನಗರ ಮೈಸೂರು ಇಲ್ಲಿ ೨ ವರ್ಷಗಳ ವಿಶೇಷ ಡಿ.ಎಡ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಈ ವಿಶೇಷ ಡಿ.ಎಡ್ ತರಬೇತಿಯು ಸಾಮಾನ್ಯ ಡಿ.ಎಡ್‌ಗೆ ಸಮಾನಾವಾಗಿವೆ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.೫೦(ಎಸ್.ಸಿ/ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.೪೫ ಅಂಕಗಳೊಂದಿಗೆ ತೇರ್ಗಡೆಯಾದ ಆಸಕ್ತ ವಿದ್ಯಾರ್ಥಿಗಳು ಜುಲೈ, ೧೨ ರೊಳಗೆ ಅರ್ಜಿ ಸಲ್ಲಿಸಬಹುದು. ಈ ತರಬೇತಿಗೆ ಸಂಬಂಧಿಸಿದ ವಿವರವಾದ ಮಾಹಿತಿ ಹಾಗೂ ಅರ್ಜಿ ನಮೂನೆ ಮೈಸೂರು ಜಿಲ್ಲಾ ವೆಬ್‌ಸೈಟ್ hಣಣಠಿs://ಟಿbeಡಿ-ಡಿehಚಿbಛಿouಟಿಛಿiಟ.gov.i ನಲ್ಲಿ […]

ಜಿಲ್ಲಾ ತರಬೇತಿ ಭವನ ನಿರ್ಮಾಣಕ್ಕೆ ೨ ಕೋಟಿ ರೂ.ಬಿಡುಗಡೆ : ಪಿಜಿಆರ್ ಸಿಂದ್ಯ

ಮಡಿಕೇರಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಭವನ ನಿರ್ಮಾಣಕ್ಕೆ ೨ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂದ್ಯ ತಿಳಿಸಿದ್ದಾರೆ. ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೊನ್ನಮ್ಮ ಕುಶಾಲಪ್ಪ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಸ್ಕೌಟ್ಸ್ ಮತ್ತು ಗೈಡ್ಸ್ ಅಭಿವೃದ್ಧಿಗಾಗಿ ಅಗತ್ಯ ಸಹಕಾರ ನೀಡುತ್ತಿದ್ದು, ಆ ನಿಟ್ಟಿನಲ್ಲಿ ಇದನ್ನು ಬಳಸಿಕೊಂಡು […]

ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆ ಮಾಹಿತಿ

kodagu rain

ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 49.44 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 17.55 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1486.74 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 893.60 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.30 ಮಿ.ಮೀ. ಕಳೆದ ವರ್ಷ ಇದೇ ದಿನ 18.08 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2114.19 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1278.54 […]

ವೀರಾಜಪೇಟೆ : ಮೆಟ್ರಿಕ್‌ ಪೂರ್ವ ಬಾಲಕರ ನಿಲಯದಲ್ಲಿ ʼಹದಿಹರೆಯದ ಆರೋಗ್ಯʼ ಮಾಹಿತಿ ಕಾರ್ಯಾಗಾರ

ವೀರಾಜಪೇಟೆ : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ʼಹದಿಹರೆಯದ ಆರೋಗ್ಯʼ ವಿಷಯವಾಗಿ ಮಾಹಿತಿ ಕಾರ್ಯಾಗಾರ ನಡೆಯಿತು. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ(RKSK)ದ ಆಪ್ತ ಸಮಲೋಚಕ ಲೋಚನ್ ಹದಿಹರೆಯದ ಸಮಸ್ಯೆಗಳು, ಮಾದಕ ವಸ್ತು ಬಳಕೆಯ ದುಷ್ಪರಿಣಾಮ, ಪೌಷ್ಠಿಕ ಆಹಾರ, ವೈಯಕ್ತಿಕ ಸ್ವಚ್ಛತೆ, ದೈಹಿಕ ಬದಲಾವಣೆ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭ ಮೇಲ್ವಿಚಾರಕಿ ಸುಮಯ್ಯ ಕೆ.ಎಂ., ಸಿಬ್ಬಂದಿ ಜ್ಯೋತಿಬಾ, ಸೌಮ್ಯ, ಶರೀಫುಲ್ಲಾ ಹಾಗೂ ಇತರರಿದ್ದರು.