ನೀಲಿ ಸುಂದರಿಯ ಸೌಂದರ್ಯಕ್ಕೆ ಮಾರು ಹೋದರೆ ಮಾರಕವಾಗುವುದು ನಿಶ್ಚಿತ..! – ತಪ್ಪದೆ ಈ ಲೇಖನ ಓದಿ

ನೀಲಿ ಸುಂದರಿ ಕೊಡಗಿನಲ್ಲಿ ಸದ್ದು ಮಾಡ್ತಾ ಇದ್ದಾಳೆ. ಕುಶಾಲನಗರದ ತಾವರೆ ಕೆರೆ ತನ್ನ ಹೆಸರಿಗೆ ವಿರುದ್ಧವಾಗಿ ನೀಲಿ ಬಣ್ಣದ ವಾಟರ್ ಹಯಾಸಿಂತ್‌ಗೆ ಪ್ರಖ್ಯಾತಿಗೊಳ್ಳುತ್ತಾ ಇದೆ. ಪರಿಸರ ಸಮತೋಲನದ ದೃಷ್ಟಿಯಿಂದ ನೋಡುವುದಾದರೆ ಈಕೆ ನೀಲ ಸುಂದರಿಯಲ್ಲ. ಬ್ಲೂ ಡೆವಿಲ್..! ಇದರ ಬಗ್ಗೆ ಒಂದಷ್ಟು ವಿಚಾರಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಸಾಮಾನ್ಯವಾಗಿ ಐಕಾರ್ನಿಯಾ ಹೆಸರಿನಿಂದ ಗುರುತಿಸಲ್ಪಡುವ ಈ ಜಲ ಸಸ್ಯ ತೇಲುವ ಸಸ್ಯದ ಬಗೆಯದ್ದು. ಕೇವಲ ಅಲಂಕಾರಿಕ ಸಸ್ಯವಾಗಿ ಭಾರತದ ಬಂಗಾಳಕ್ಕೆ ಪರಿಚಯವಾದ ಇದರ ಮೂಲ ದಕ್ಷಿಣ ಅಮೇರಿಕ. ಇಂದು […]

ಜು.04ಕ್ಕೆ ಸಂಸದ ಯದುವೀರ್‌ ಕೊಡಗು ಪ್ರವಾಸ – ವಿರಾಜಪೇಟೆ ಮಂಡಲ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ಭೇಟಿ…

  ವೀರಾಜಪೇಟೆ : ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಒಡೆಯರ್‌ ಜುಲೈ ೦೪ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ವೀರಾಜಪೇಟೆ ಮಂಡಲ ವ್ಯಾಪ್ತಿಯ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬಿರುನಾಣಿ, 11 ಗಂಟೆಗೆ ಟಿ.ಶೆಟ್ಟಿರಿ, 12 ಗಂಟೆಗೆ ಶ್ರೀಮಂಗಲ ಶಕ್ತಿ ಕೇಂದ್ರ, ಮಧ್ಯಾಹ್ನ 1 ಗಂಟೆಗೆ ಕಾನೂರು, 2 ಗಂಟೆಗೆ ಪೊನ್ನಂಪೇಟೆ, ಬಲ್ಯಮುಂಡ್ಡೂರು, ಕಿರುಗೂರು ಶಕ್ತಿ ಕೇಂದ್ರ (ಸ್ಥಳ :ಪೊನ್ನಂಪೇಟೆ), 3 ಗಂಟೆಗೆ ಗೋಣಿಕೊಪ್ಪ,ಅರುವತೊಕ್ಕಲು, ಹಾತೂರು ಶಕ್ತಿ ಕೇಂದ್ರ (ಸ್ಥಳ: ಗೋಣಿಕೊಪ್ಪ), […]

ಪ್ರಯಾಣಿಕನ ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಖಾಸಗಿ ಬಸ್ ಕಂಡಕ್ಟರ್

ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಬಸ್ಸಿನಲ್ಲಿಯೇ ಹಣದ ಪರ್ಸ್ ಬಿಟ್ಟು ಹೋಗಿದ್ದಪ್ರಯಾಣಿಕ ಕಾಶಿ. 6,500 ರೂ. ಹಣವಿದ್ದ ಪರ್ಸ್ ಅನ್ನು ಖಾಸಗಿ ಬಸ್ ಚಾಲಕ ಹಾಗೂ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷರಾಗಿರುವ ಎಂ.ಪಿ.ರಾಜರವರ ಸಮ್ಮುಖದಲ್ಲಿ ಹಿಂದಿರುಗಿಸುವ ಮೂಲಕ ವಿಘ್ನೇಶ್ ರವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಸಾಕ್ಷಿ ಗುಡ್ಡೆ ಬಿಟ್ಟುಹೋಗಿದ್ದಾರೆ..? : ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಚಿಕ್ಕಬಳ್ಳಾಪುರ : ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಬಿಜೆಪಿ ಹಗಲು ಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ ಸತ್ಯವನ್ನಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಅವರು ನಂಬುತ್ತಾರೋ ಬಿಡುತ್ತಾರೆ ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಂದಿ ಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಸಾಕ್ಷಿಗುಡ್ಡೆ ಬಿಟ್ಟುಹೋಗಿದ್ದಾರೆ ಎಂದು ಪ್ರಶ್ನಿಸಿದರು. ಅವರು ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, […]

ರಾಜ್ಯದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಳ – ಕೋವಿಡ್‌ ಲಸಿಕೆ ಕಾರಣನಾ..? – ICMR, AIIMS ಅಧ್ಯಯನ ಹೇಳಿದ್ದೇನು..?

ನವದೆಹಲಿ : ರಾಜ್ಯದಲ್ಲೀಗ ಹೃದಯಾಘಾತಕ್ಕೊಳಗಾಗಿ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಏನು ಕಾರಣ ಅನ್ನುವ ಬಗ್ಗೆ ವಿವಿಧ ವರ್ಗದ ಜನ ವಿವಿಧ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮವೇ ಹೃದಯಾಘಾತಕ್ಕೆ ಕಾರಣ ಅಂತ ಒಂದು ವರ್ಗ ವಾದಿಸುತ್ತಿದೆ. ಆದರೆ ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ICMR, AIIMS ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಕೋವಿಡ್‌ ಲಸಿಕೆಯ ಅಡ್ಡಪರಿಣಾಮದಿಂದ ಈ ರೀತಿ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಮತ್ತು […]

ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸುರಿದ ಮಳೆ ಮಾಹಿತಿ

heavy rainfall

ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 19.06 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 27.41 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1437.30 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 876 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 20.33 ಮಿ.ಮೀ. ಕಳೆದ ವರ್ಷ ಇದೇ ದಿನ 33.23 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2053.89 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1280.46 […]