ಅಂತಾರಾಷ್ಟ್ರೀಯ ವಾಲಿಬಾಲ್ ಒಕ್ಕೂಟದ ಆಡಳಿತ ಮಂಡಳಿಗೆ ಇಶಾ ಅಂಬಾನಿ ಸೇರ್ಪಡೆ

Isha Ambani

ಅಂತಾರಾಷ್ಟ್ರೀಯ ವಾಲಿಬಾಲ್ ಒಕ್ಕೂಟದ (ಎಫ್ಐವಿಬಿ) ಆಡಳಿತ ಮಂಡಳಿಗೆ ಇಶಾ ಅಂಬಾನಿ (Isha Ambani) ಮತ್ತು ಲೂಯಿಸ್ ಬಾವ್ಡೆನ್ ಸೇರ್ಪಡೆಯಾಗಿದ್ದಾರೆ. 2024-2028ರ ಒಲಿಂಪಿಕ್ಸ್ ಸಾಲಿಗೆ ಈ ನೇಮಕಾತಿಯನ್ನು ಮಾಡಿರುವುದನ್ನು ಎಫ್ಐವಿಬಿ ಘೋಷಿಸಿದೆ. ಈ ಮೂಲಕ ಸಂಸ್ಥೆಯ ಅತ್ಯುನ್ನತ ಮಟ್ಟದಲ್ಲಿ ಹೊಸ ದೃಷ್ಟಿಕೋನ, ವ್ಯವಹಾರ ಕುಶಾಗ್ರಮತಿ ಮತ್ತು ಕ್ರೀಡಾಪಟುಗಳ ಪ್ರಾತಿನಿಧ್ಯವನ್ನು ತರಲಾಗಿದೆ. ಎಫ್ಐವಿಬಿ ಸಂವಿಧಾನದ ವಿಧಿ 2.4.1.5 ರ ಅಡಿಯಲ್ಲಿ ಅಂಬಾನಿ ಮತ್ತು ಬಾವ್ಡೆನ್ ಅವರನ್ನು ನೇಮಿಸಲಾಗಿದೆ, ಇದು ಎಫ್ಐವಿಬಿ ಅಧ್ಯಕ್ಷರು, ವಿಭಿನ್ನ ವರ್ಗಗಳಲ್ಲಿ ನಾಲ್ಕು ಹೆಚ್ಚುವರಿ ಮಂಡಳಿ ಸದಸ್ಯರನ್ನು […]

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ಗ್ರಾಹಕರಿಗಾಗಿ ಸೂಪರ್‌ “ಮ್ಯಾಕ್ಸ್‌ಸೇವರ್‌” ಕೊಡುಗೆ ಘೋಷಣೆ

Swiggy

ತ್ವರಿತ ಇ-ಕಾಮರ್ಸ್‌ ತಾಣವಾದ ಸ್ವಿಗ್ಗಿ (Swiggy) ಇನ್‌ಸ್ಟಾಮಾರ್ಟ್‌ ತನ್ನ ಗ್ರಾಹಕರಿಗಾಗಿ “ಮ್ಯಾಕ್ಸ್‌ಸೇವರ್‌” ಎಂಬ ವಿನೂತನ ಸೇವೆ ಆರಂಭಿಸಿದ್ದು, ತಮ್ಮ ಪ್ರತಿ ಆರ್ಡರ್‌ಗಳ ಮೇಲೆ 500 ರೂ.ವರೆಗೂ ಉಳಿತಾಯ ಮಾಡಬಹುದು. ಇತ್ತೀಚೆಗೆ ರಾಷ್ಟ್ರದಾದ್ಯಂತ 100 ನಗರಗಳಿಗೆ ವಿಸ್ತರಣೆಯನ್ನು ಘೋಷಿಸಿದ್ದ ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಈ ನಗರಗಳಲ್ಲಿನ ಬಳಕೆದಾರರಿಗೆ ಮ್ಯಾಕ್ಸ್‌ಸೇವರ್ ಅನ್ನು ಪ್ರಾರಂಭಿಸಿದೆ. ಸ್ವಿಗ್ಗಿ ಮ್ಯಾಕ್ಸ್‌ಸೇವರ್‌ ಬಳಸುವ ಗ್ರಾಹಕರು ಎಲ್ಲಾ ವಿಭಾಗದಲ್ಲೂ ಉತ್ತಮ ಡಿಸ್ಕೌಂಟ್‌ ಪಡೆಯಬಹುದು. ಅದರಲ್ಲೂಪ್ರತಿನಿತ್ಯ ಬಳಕೆಯ ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್‌, ಫ್ಯಾಷನ್, ಮೇಕಪ್, ಆಟಿಕೆಗಳು ಸೇರಿದಂತೆ 35,000 […]

ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

Doctor

ತಾಯಿ ಹೊಟ್ಟೆಯಲ್ಲಿನ ಮಗುವಿನ ಬಗ್ಗೆ ಅದೆಷ್ಟೇ ಕಾಳಜಿ ವಹಿಸಿದರು ಕೆಲವೊಮ್ಮೆ ಇದ್ದಕ್ಕಿದ್ದಂತೆ ಸಮಸ್ಯೆಗಳು ಎದುರಾಗಿ ಬಿಡುತ್ತವೆ. ಅವುಗಳನ್ನ ದಾಟಿ ಮಗುವನ್ನ (Baby) ರಕ್ಷಿಸಿಕೊಳ್ಳುವುದು ಪವಾಡವೇ ಆಗಿರುತ್ತೆ. ಅಂಥಹ ಅಪರೂಪದ ಪ್ರಕರಣದಲ್ಲಿ ಯಶಸ್ವಿಯಾಗಿದ್ದಾರೆ ವಾಸವಿ ಆಸ್ಪತ್ರೆಯ ವೈದ್ಯರು. ಕೇವಲ 28 ವಾರಗಳಿಗೆ ಗರ್ಭಿಣಿಯೊಬ್ಬರು 830ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ (Bengaluru) ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿ ಅಧಿಕ ರಕ್ತದೊತ್ತಡ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ತುರ್ತು ಪರಿಸ್ಥಿತಿ ಎದುರಾದ ಹಿನ್ನೆಲೆ […]

ರೂ.10 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ: 10 ಮಂದಿ ಆರೋಪಿಗಳ ಬಂಧನ

Ambergris

ಕೇರಳದ ತಿರುವನಂತಪುರದಿಂದ ಕೊಡಗಿಗೆ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು (Ambergris) ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಘಟನೆಯು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ಕೇರಳದ ತಿರುನಂತಪುರಂನಿಂದ ತಂದು ಆಂಧ್ರಪ್ರದೇಶ ಅಥವಾ ಬೆಂಗಳೂರಿನಲ್ಲಿ (Bengaluru) ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ರವರ ನೇತೃತ್ವದ […]