ಕಟ್ಟೆಮಾಡು ದೇವಾಲಯದ ವ್ಯಾಪ್ತಿಯಲ್ಲಿ ಮತ್ತೆ ಮುಂದುವರಿದ ನಿಷೇಧಾಜ್ಞೆ!

ಮಡಿಕೇರಿ ತಾಲೂಕು ಕಟ್ಟೆ ಮಾಡು (Kattemadu) ದೇವಾಲಯದಲ್ಲಿ ಈ ಹಿಂದೆ ನಡೆದ ಘಟನೆಯ ಸಂಬಂಧವಾಗಿ ಮೃತ್ಯುಂಜಯ ದೇವಾಲಯದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 14 ರಿಂದ ಏಪ್ರಿಲ್ 11 ರವರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ, ಪ್ರತಿಭಟನೆ ರ್ಯಾಲಿ,ಜಾತ, ಪ್ರಚೋದಾತ್ಮಕ ಘೋಷಣೆಗಳನ್ನು ಕೂಗದಂತೆ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಹಿರಿಯ ಉಪ ವಿಭಾಗಾಧಿಕಾರಿಗಳಾದ ವಿನಾಯಕ ನರ್ವಾಡೆ ರವರು ದಿನಾಂಕ 14.03.2025 ರಂದು ಆದೇಶ ಹೊರಡಿಸಿದ್ದಾರೆ.
Power Cut: ನಾಳೆ ಎಲ್ಲೆಲ್ಲಿ ಕರೆಂಟ್ ಇರಲ್ಲ?

ವಿರಾಜಪೇಟೆ 66/33/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಮಾರ್ಚ್, 15 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಿದ್ದಾಪುರ, ಗುಹ್ಯ, ಮಾಲ್ದಾರೆ, ಕರಡಿಗೋಡು, ಇಂಜಲಗೆರೆ, ಮೇಕೂರು, ಮೂರ್ನಾಡು, ಪಾರಣೆ, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ (Power Cut) ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಅಗ್ನಿವೀರ್ ಆಗಲು ಸುವರ್ಣ ಅವಕಾಶ: ಅರ್ಜಿ ಸಲ್ಲಿಸುವುದು ಹೇಗೆ?

ಭಾರತೀಯ ಸೇನೆಯಲ್ಲಿ ಅಗ್ನಿಪಥ (Agni path) ಯೋಜನೆಯ ಅಗ್ನಿವೀರರಾಗಲು (Agniveer) ಸುವರ್ಣ ಅವಕಾಶವಿದೆ. ಭಾರತೀಯ ರಕ್ಷಣಾ ಪಡೆಗಳಲ್ಲಿ ಅಗ್ನಿವೀರರನ್ನು ಆಯ್ಕೆ ಮಾಡಿಕೊಳ್ಳಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು, ಅರ್ಹತೆ ಇರುವವರು ಅರ್ಜಿ ಸಲ್ಲಿಸಿ. ಈ ಹುದ್ದೆಗಳ ವಿಶೇಷತೆ ಎಂದರೆ ನೀವು ನಾಲ್ಕು ವರ್ಷ ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಮಾಡುವ ಜತೆಗೆ, ಅತ್ಯುತ್ತಮ ಸಂಬಳ ಪಡೆಯುವ ಜತೆಗೆ, ನಿಮ್ಮ ಮುಂದಿನ ಶಿಕ್ಷಣಗಳನ್ನು ಸಹ ಅಲ್ಲಿಯೇ ಮುಗಿಸಿಕೊಳ್ಳಬಹುದಾಗಿದೆ. ಅರ್ಜಿಗೆ ಬೇಕಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. […]