Bengaluru Airport: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೇಶದ ಅತಿದೊಡ್ಡ ಕಾರ್ಗೋ ಟರ್ಮಿನಲ್ ಪ್ರಾರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಆವರಣದಲ್ಲಿ ವಿನ್ಯಾಸ ಸಾಮರ್ಥ್ಯದಲ್ಲಿ ಭಾರತದಲ್ಲೇ ಅತಿದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್ (ಡಿಸಿಟಿ) ಪ್ರಾರಂಭವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮತ್ತು ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೆನ್ಜೀಸ್ ಏವಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾದ 245,000 ಚದರ ಅಡಿ ವ್ಯಾಪ್ತಿಯ ಈ ಕಾರ್ಗೋ ಟರ್ಮಿನಲ್‌ನ್ನು, ದೇಶೀಯವಾಗಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಕೈಗಾರಿಕೆಗಳ ಸಂಪರ್ಕ […]
ಕೊಡಗು ವಿವಿ ಮುಚ್ಚುವ ಕ್ರಮ ಖಂಡಿಸಿ ಬಿಜೆಪಿ, ಎಬಿವಿಪಿಯಿಂದ ಪಾದಯಾತ್ರೆ: ಸಂಸದ ಭಾಗಿ

ಕೊಡಗು ವಿವಿ (Kodagu University) ಮುಚ್ಚಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಳುವಾರ ಗ್ರಾಮದಿಂದ ಕುಶಾಲನಗರದ ವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ (Yaduveer Wadiyar) ಪಾಲ್ಗೊಂಡರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುಜಾಕುಶಾಲಪ್ಪ, ಭಾರತೀಶ್ ಮತ್ತಿತರರು ಭಾಗಿ. ನೂರಾರು ವಿದ್ಯಾರ್ಥಿಗಳುˌ ಕಾರ್ಯಕರ್ತರು ಹಾಗೂ ಯುವಜನತೆಯೊಂದಿಗೆ ಹೆಜ್ಜೆ ಹಾಕಿದರು. ಎರಡು ವರ್ಷಗಳ ಹಿಂದೆ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ […]
ಫ್ಲೂ ಲಸಿಕೆ ಪಡೆದು ಫ್ಲೂನಿಂದ ದೂರವಿರಿ ಹಾಗೂ ಆರೋಗ್ಯವಾಗಿರಿ

ಪ್ರತೀ ವರ್ಷದಲ್ಲೂ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರು ಫ್ಲೂನಿಂದ (Flu) ತೊಂದರೆಗೊಳಗಾಗುತ್ತಾರೆ. ಪ್ರತೀ ವರ್ಷ 100 ಕೋಟಿಗಿಂತಲೂ ಹೆಚ್ಚು ಫ್ಲೂ ಪ್ರಕರಣಗಳಲ್ಲಿ 3 ರಿಂದ 5 ಮಿಲಿಯನ್ ಮಂದಿ ಗಂಭೀರ ಪರಿಸ್ಥಿತಿ ಎದುರಿಸುತ್ತಾರೆ. ಸಾಮಾನ್ಯವಾಗಿ ಫ್ಲೂ ಅನ್ನು ಶೀತ ಎಂದು ಭಾವಿಸಲಾಗುತ್ತದೆ. ಆದರೆ ಫ್ಲೂ ನಿಮ್ಮ ದೈನಂದಿನ ಜೀವನ ಮತ್ತು ಕೆಲಸ ಕಾರ್ಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಅದಕ್ಕೆ ಫ್ಲೂನಿಂದ ಕ್ತ ಲಸಿಕೆ ಪಡೆಯುವುದು ಅವಶ್ಯವಾಗಿದೆ ಮತ್ತು ಲಸಿಕೆಯಿಂದ (Vaccine) ನಿಮ್ಮನ್ನು ನೀವು ರಕ್ಷಿಸಬಹುದಾಗಿದೆ. ಆದರೆ ಅನೇಕ ಜನರು […]