ಬೆಂಕಿ ಬ್ಯಾಟಿಂಗ್: ದಾಖಲೆಗಳೆಲ್ಲಾ ಉಡೀಸ್… ಇತಿಹಾಸ ನಿರ್ಮಿಸಿದ ಇಬ್ರಾಹಿಂ ಜದ್ರಾನ್

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (ICC Champions Trophy) ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿ ಗುಂಪಿನ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಕಾದಾಟ ನಡೆಸಿವೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಬ್ಯಾಟರ್ ಇಬ್ರಾಹಿಂ ಜದ್ರಾನ್ ( Ibrahim Zadran) ಅವರ ಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಜದ್ರಾನ್ 146 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ 177 ರನ್ಗಳಿಸಿದರು. ಈ 177 ರನ್ಗಳ ನೆರನಿಂದ ಚಾಂಪಿಯನ್ಸ್ ಟ್ರೋಫಿಯಲ್ಲಿ […]
Govinda: ಬಾಲಿವುಡ್ ನಟ ಗೋವಿಂದ ಡಿವೋರ್ಸ್ ಕೇಸ್ಗೆ ಹೊಸ ಟ್ವಿಸ್ಟ್

ಬಾಲಿವುಡ್ ಸ್ಟಾರ್ ನಟ ಗೋವಿಂದ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ 37 ವರ್ಷಗಳ ದಾಂಪತ್ಯ ಕೊನೆಗೊಳಿಸುವ ವಿಚಾರ ಎಲ್ಲೆಡೆ ವೈರಲ್ ಆಗಿತ್ತು. ನಟ ಗೋವಿಂದ ಮತ್ತು ಪತ್ನಿ ಸುನೀತಾ ಅಹುಜಾ ದಾಂಪತ್ಯದಲ್ಲಿ ಬಿರುಕು ಸುದ್ದಿ ಬಿಟೌನ್ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಕುಟುಂಬದ ಆಪ್ತ ಮೂಲವೊಂದು ಸುನೀತಾ ಕೆಲವು ತಿಂಗಳ ಹಿಂದೆಯೇ ಗೋವಿಂದ ಅವರಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್ ಸ್ಟಾರ್ ನಟ ಮತ್ತು ಸುನೀತಾ ಅವರು 1987ರ ಮಾರ್ಚ್‌ನಲ್ಲಿ ಮದುವೆಯಾಗಿದ್ದರು. […]
ಶುಗರ್ ಇರುವವರು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

ಮಧುಮೇಹ (Diabetes) ಎನ್ನುವುದು ಸಾಮಾನ್ಯವಾದ ಆರೋಗ್ಯ (Health) ಸಮಸ್ಯೆಗಳಲ್ಲಿ ಒಂದು. ಮಧುಮೇಹಕ್ಕೂ ಹೃದಯದ ಆರೋಗ್ಯಕ್ಕೂ ನಿಕಟ ಸಂಬಂಧ ಇದೆ. ಆದರೆ ಈ ವಿಚಾರವನ್ನು ಬಹುತೇಕರು ಕಡೆಗಣಿಸಿರುತ್ತಾರೆ. ಅದು ಸಲ್ಲದು. ಯಾಕೆಂದರೆ ಈ ಕಡೆಗಣನೆಯಿಂದ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಾಢ ಪರಿಣಾಮ ಉಂಟಾಗಬಹುದು. ಹಾಗಾಗಿ ಈ ಕುರಿತು ಹೆಚ್ಚಿನ ಮಾಹಿತಿ ಹೊಂದುವುದು ಅವಶ್ಯ. ವ್ಯಕ್ತಿಗಳ ರಕ್ತದ ಸಕ್ಕರೆಯ ಮಟ್ಟ ಜಾಸ್ತಿ ಆದಾಗ ಅದು ಗ್ಲೂಕೋಸ್ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಜೊತೆಗೆ ಹೃದಯದ ಕೆಲಸದ ಮೇಲೆ ಮತ್ತು […]
ಮಿಸ್ & ಮಿಸೆಸ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಮಿಂಚಿದ ಆಸ್ಟ್ರಲ್ ಪೇಜೆಂಟ್ಸ್

ಮಿಸ್ & ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಮೂವರು ವೈದ್ಯೆಯರು ಅತ್ಯುನ್ನತ ಗೌರವ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಫಿಲಿಫೈನ್ಸ್‌ನ ಮನಿಲಾದಲ್ಲಿ ಫೆ 16 ರಿಂದ 22ರ ವರೆಗೆ ನಡೆದ ಈ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತ 50 ವರ್ಷದೊಳಗಿನ ಪ್ರಿ-ಟೀನ್, ಟೀನ್, ಮಿಸ್, ಮಿಸೆಸ್ ಮತ್ತು ಮತ್ತು 40 ವರ್ಷ ಮೇಲ್ಪಟ್ಟ ಎಲೈಟ್ ಮಿಸೆಸ್ ವಿಭಾಗಗಳಲ್ಲಿ ಪಾಲ್ಗೊಂಡಿದ್ದರು. ಅಸ್ಟ್ರಲ್ ಪೇಜೆಂಟ್ ನ ಸಂಸ್ಥಾಪಕಿ ಪ್ರತಿಭಾ ಸೌಂಶಿಮಠ್, ಅಸ್ಟ್ರಲ್ ಪೇಜೆಂಟ್ಸ್‌ನ ಪ್ರತಿನಿಧಿಗಳು 40 ವರ್ಷದೊಳಗಿನ ಮಿಸ್, ಮಿಸೆಸ್ ಮತ್ತು […]
ಪುಂಡರಿಗೆ ಸೆಡ್ಡು: ಮಹಾರಾಷ್ಟ್ರದ ವಾಹನಗಳ ಚಾಲಕರಿಗೆ ಸಿಹಿ, ಗುಲಾಬಿ ನೀಡಿದ ಕರವೇ

ಬೆಳಗಾವಿ ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದರೆ, ಇತ್ತ ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆ ವತಿಯಿಂದ ಮಹಾರಾಷ್ಟ್ರದ ವಾಹನಗಳ ಚಾಲಕರನ್ನು ಸನ್ಮಾನಿಸಿ, ಸಿಹಿ ತಿನ್ನಿಸಿ, ಗುಲಾಬಿ ಹೂ ನೀಡಿ ಸೌಹಾರ್ದತೆ ಮೆರೆಯಲಾಗಿದೆ. ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ವಾಹನಗಳನ್ನು ತಡೆದ ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ನೇತೃತ್ವದ ಕಾರ್ಯಕರ್ತರು. ಚಾಲಕ, ನಿರ್ವಾಹಕರನ್ನು ಗೌರವಿಸಿ, ಸಿಹಿ ನೀಡಿ, ಹೂ ನೀಡಿ ಭಾಷೆ ವಿಚಾರದಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಭಾವೋದ್ವೇಕಕ್ಕೆ ಒಳಗಾಗದೆ ಶಾಂತಿ […]
ಕಾವೇರಿ ಪದವಿ ಕಾಲೇಜು ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ

ಮನುಷ್ಯ ಕೋಟಿ ಕೋಟಿ ಸಂಪಾದಿಸುವುದು ಸಾಧನೆ ಈ ರೀತಿಯ ಸಂಪಾದನೆ ಆತನಿಗೆ ಸಂತೋಷವನ್ನು ನೀಡುತ್ತದೆ . ಆದರೆ ತೃಪ್ತಿ ಬೇಕಾದರೆ ತಾನು ಸಂಪಾದಿಸಿದ್ದನ್ನು ಇತರ ಸಹಾಯಕ್ಕೆ ದಾನ ನೀಡಿ ಸಮಾಜ ಸೇವೆ ಮಾಡಬೇಕು ಎಂದು ವಿರಾಜಪೇಟೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ಪ್ರಣವ್ ಎಂ ಚಿತ್ರ ಬಾನು ಅಭಿಪ್ರಾಯ ವ್ಯಕ್ತಪಡಿಸಿದರು . ಬಿ. ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವೇರಿ ಪದವಿ ಕಾಲೇಜಿನ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ […]