ಕಾಡಂಚಿನ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಎ.ಎಸ್.ಪೊನ್ನಣ್ಣ ಚಾಲನೆ

ವಿರಾಜಪೇಟೆಯ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ 22 ಕೋಟಿ ರೂ, ಬಿಡುಗಡೆಗೆ ಮಂಜೂರಾತಿ ನೀಡಿದ್ದು, ಆ ನಿಟ್ಟಿನಲ್ಲಿ ವಿವಿಧ ಪ್ರದೇಶದ 15 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ಚಾಲನೆ ನೀಡಿದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಕುಟ್ಟಂದಿಯಲ್ಲಿ 3 ಕಿ.ಮೀ.ಉದ್ದ ಹಾಗೂ ನಾಗರಹೊಳೆ ಆಭಯಾರಣ್ಯ ವ್ಯಾಪ್ತಿಯ 11 ಕಿ.ಮೀ.ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ […]
ಸ್ಕೂಟರ್ ಹಾಗೂ ಖಾಸಗಿ ಬಸ್ ಡಿಕ್ಕಿ: ಸ್ಕೂಟರ್ ಸವಾರ ಸಾವು

ಸ್ಕೂಟರ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಿದ್ದಲಿಂಗಪುರದ ಬಳಿ ಜರುಗಿದೆ. ಗ್ರಾಮದ ಕೃಷಿಕ ಶಾಂತಪ್ಪ ಎಂಬವರ ಪುತ್ರ ಎಸ್.ಎ.ಅಶೋಕ್ (64) ಮೃತ ದುರ್ದೈವಿ. ಮೃತರು ತಮ್ಮ ಜಮೀನಿನಲ್ಲಿ ನೀರಾವರಿ ಪೈಪ್ ಅಳವಡಿಸಲು ಕಾಲರ್ ತರಲೆಂದು ತಮ್ಮ ಸ್ಕೂಟಿಯಲ್ಲಿ ಹೆಬ್ಬಾಲೆ ಕಡೆ ತೆರಳುವಾಗ ಸಿದ್ದಲಿಂಗಪುರದ ನಾಪಂಡ ಮುತ್ತಪ್ಪ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಘಟನೆ ಜರುಗಿದೆ. ಮೃತರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಕುಶಾಲನಗರ ಪೊಲೀಸರು […]
ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್‌ನಿಂದ ಪ್ರಶಸ್ತಿ ಘೋಷಣೆ

ಭಾರತದ ಪ್ರಮುಖ ಖಾಸಗಿ ಜನರಲ್ ಇನ್ಶೂರರ್‌ಗಳಲ್ಲಿ ಒಂದಾದ ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್, ಏಷ್ಯಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಾದ್ಯಂತ ಜನರಲ್ ಇನ್ಶೂರೆನ್ಸ್ ಮತ್ತು ಹೆಲ್ತ್ ಇನ್ಶೂರೆನ್ಸ್ ಸಲಹೆಗಾರರ ಅತ್ಯುತ್ತಮ ಕೊಡುಗೆಗಳನ್ನು ಆಚರಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿರುವ ಗ್ಲೋಬಲ್ ಇನ್ಶೂರೆನ್ಸ್ ಎಕ್ಸಲೆನ್ಸ್ ಪ್ರಶಸ್ತಿಗಳು (ಜಿಐಇಎ) ಅನ್ನು ಘೋಷಿಸಿದೆ. ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಏಷ್ಯಾ ಇನ್ಶೂರೆನ್ಸ್ ರಿವ್ಯೂ (ಎಐಆರ್) ಅನ್ನು 2025 ರ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಆಯ್ಕೆ ಮಾಡಲಾಗಿದೆ. ಬಜಾಜ್ […]
ಆಟೋದಲ್ಲಿ ಮಲಗಿರುವಾಗಲೇ ಪ್ರಾಣ ಬಿಟ್ಟ ಆಟೋ ಚಾಲಕ!

ಆಟೋ ಚಾಲಕ ಮಂಜುನಾಥ್ (50) ಅವರು ಆಟೋದಲ್ಲಿ ಮಲಗಿರುವಾಗಲೇ ಪ್ರಾಣ ಬಿಟ್ಟ ಘಟನೆ ಶನಿವಾರಸಂತೆಯಲ್ಲಿ ನಡೆದಿದೆ. ಸಿದ್ದಲಿಂಗಪುರ ನಿವಾಸಿ, ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ವಾಸವಿದ್ದ ಅವರು ಪ್ರತಿನಿತ್ಯ ಆಟೋದಲ್ಲೇ ಮಲಗಿ, ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿನ್ನೆಯೂ ಸಹ ಆಟೋದಲ್ಲೇ ಮಲಗಿದ್ದರು, ಆದರೆ ಬೆಳಗ್ಗೆ ಇತರೆ ಆಟೋದವರು ಬಂದು ನೋಡಿದಾಗ ಆಟೋದಲ್ಲೇ ಪ್ರಾಣ ಬಿಟ್ಟಿರುವ ವಿಷಯ ತಿಳಿದು ಬಂದಿದೆ. ಕಳೆದ 15 ವರ್ಷಕ್ಕೂ ಹೆಚ್ಚು ಕಾಲ ಇದೆ ಆಟೋ ಚಾಲಕ ವೃತ್ತಿಯಲ್ಲಿ ಇದ್ದರು. ಈ […]
ಕೊಡಗು ವಿಶ್ವವಿದ್ಯಾಲಯ ಮುಚ್ಚುವ ನಿರ್ಧಾರಕ್ಕೆ ಕೆ. ಎಂ. ಎ. ತೀವ್ರ ವಿರೋಧ

ಕಳೆದ ಎರಡು ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿರುವ ಕೊಡಗು ವಿಶ್ವವಿದ್ಯಾಲಯವನ್ನು (Kodagu University) ಮುಚ್ಚುವ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ತೆಗೆದುಕೊಂಡಿರುವ ಕುರಿತು ಜಿಲ್ಲಾಧ್ಯಂತ ಜನರಿಗೆ ಆತಂಕ ಮೂಡಿದೆ. ಕೊಡಗು ವಿಶ್ವವಿದ್ಯಾಲಯವನ್ನು ಸ್ಥಗಿತಗೊಳಿಸುವ ಅಥವಾ ಬೇರೆ ವಿ.ವಿ.ಯೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಸರಕಾರದ ಮುಂದಿದ್ದರೆ ತಕ್ಷಣ ಅದನ್ನು ಕೈ ಬಿಟ್ಟು ಕೊಡಗು ವಿಶ್ವವಿದ್ಯಾಲಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ), ಒಂದು ವೇಳೆ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚಿದರೆ ಅದು ಕೊಡಗು (Kodagu) ಜಿಲ್ಲೆಗೆ ಮಾಡಿದ […]