ಮಡಿಕೇರಿ : ಕೆಲ ವರ್ಷದ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಇದೀಗ ದಿಢೀರ್ ಆಗಿ ಕಾಂಗ್ರೆಸ್ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ತಾನು ಈ ನಿರ್ಧಾರಕ್ಕೆ ಬರಲು ಕಾರಣ ಏನು ಅನ್ನೋದನ್ನೂ ಉಲ್ಲೇಖಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಕೊಡವ ಸಮಾಜದಕ್ಕೆ ಜಮೀನು ನೀಡಿದ್ದಕ್ಕಾಗಿ ಶಾಸಕರು ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿರುವ ಕಾರ್ಯಕ್ರಮದ ವಿಚಾರವೇ ಈಗ ಪ್ರತೀಕ ಈ ನಿರ್ಧಾರಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿ ಪ್ರತೀಕ್ ಪೊನ್ನಣ್ಣ ಪೋಸ್ಟ್ ಹಾಕಿದ್ದರು. ಅದರ ಜೊತೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಶ್ರಮವೂ ಇದೆ. ಅವರನ್ನೂ ನಾವು ಸ್ಮರಿಸಬೇಕು ಎಂದು ಹಾಕಿದ್ದರು.
ಈ ವಿಚಾರವಾಗಿ ಪಕ್ಷದ ಕೆಲವು ನಾಯಕರು ಪ್ರತೀಕ್‌ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅವರೇ ಪೋಸ್ಟ್ ಹಂಚಿಕೊಂಡಿದ್ದು, ಅದನ್ನು ಯಥಾವತ್ತಾಗಿ ಈ ಕೆಳಗೆ ಹಾಕಿದ್ದೇವೆ ನೋಡಿ.
ಪ್ರತೀಕ್ ಪೊನ್ನಣ್ಣ ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್…
ʼನ್ನೆಯ ದಿನ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ A.S Ponnanna ಅವರಿಗೆ ಕೃತಜ್ಞತೆಗಳು ಅರ್ಪಿಸಿದ್ದೆ, ಅದೇ ರೀತಿ ಮಾಜಿ ಶಾಸಕ K.G.Bopaiah ಅವರನ್ನು ಕೂಡ ಸ್ಮರಿಸಿದ್ದೆ.
ಇದನ್ನು ಕೆಲವು “ಜನರು” ಪ್ರತೀಕ್ ಕೆಜಿ ಬೋಪಯ್ಯ ಅವರ ಪರ ಎಂದು ವಾದ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ, ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಅವರ ಶ್ರಮ ಕೂಡ ಇದೆ, ಅದಕ್ಕೆ ಅವರಿಗೆ ಕೃತಜ್ಞತೆಗಳು ಅರ್ಪಿಸುವುದು ಕೊಡಗು ಜಿಲ್ಲೆಯ ಸಂಸ್ಕೃತಿ ಮತ್ತು ಮಾನವೀಯತೆ ಕೂಡ.
ಕಾಂಗ್ರೆಸ್ ಪಕ್ಷದ ಯಾವ ನಾಯಕರು ಕೂಡ ಇದನ್ನು ಅಧಿಕೃತವಾಗಿ ಪ್ರಶ್ನೆ ಮಾಡಿಲ್ಲಾ, ಆದರೆ ಕೊಡವಾಮೆ ಇವರ ಸ್ವತ್ತು ಇಡೀ 2.5 ಲಕ್ಷ ಜನರು ಇವರು ಹೇಳಿದ ಕೊಡವಾಮೆ ಪಾಲಿಸಬೇಕು ಇಲ್ಲವಾದರೆ ಅವರು ಕೊಡವರಲ್ಲಾ ಎಂದು ಬಿಟ್ಟಿ ಪ್ರಮಾಣ ಪತ್ರ ಕೊಡುವ ಮೂಲಭೂತವಾದಿ ಕೆಲವು ಜನರ ಪಡೆ ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ.
ಇಂತಹ ಮನಸ್ಥಿತಿಯ ಜನರು ನಮ್ಮ ಜನಾಂಗಕ್ಕೂ ಮಾರಕ, ಇವರಿಗೆ ಪ್ರತೀಕ್ ಪೊನ್ನಣ್ಣ ಹೆದರುವ ಗಂಡಸಲ್ಲಾ, ನಾನು ಹಾಲಿ ಮತ್ತು ಮಾಜಿ ಶಾಸಕರಿಂದ ವೈಯಕ್ತಿಕವಾಗಿ ಯಾವುದೇ ಲಾಭ ಕೂಡ ಪಡೆದುಕೊಂಡಿಲ್ಲಾ, ಯಾರಿಗೂ ಮುಲಾಜಿಲ್ಲದೆ ನನ್ನ ಕೈಲಾದ ಕೆಲಸ ಸೇವೆ ಮಾಡುತ್ತಿದ್ದೇನೆ.
ಕಾಂಗ್ರೆಸ್ ಪಕ್ಷ ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ, ಶಾಸಕರು ಕೂಡ ಯಾವುದೇ ತೊಂದರೆ ಅಥವಾ ನನ್ನ ಸಾಂವಿಧಾನಿಕ ಹಕ್ಕುಗಳಿಗೆ ತೊಂದರೆ ಉಂಟು ಮಾಡಿಲ್ಲಾ, ಅವರ ಮೇಲೆ ಮತ್ತು ಪಕ್ಷದ ಮೇಲೆ ಗೌರವ ಇದೆ.
ಕೆಲವು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ಆಗುವುದಿಲ್ಲ ಮತ್ತು ಇರಬಾರದು ಕೂಡ, ಇದು ನಮ್ಮ ವೈಯಕ್ತಿಕ ಹಕ್ಕು ಮತ್ತು ಸಾಂವಿಧಾನಿಕ ಹಕ್ಕು, ಈ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ಶಾಸಕರಿಗೆ ನನ್ನ ಬೆಂಬಲವನ್ನು ರಾಜಿನಾಮೆ ಮೂಲಕ ತಿಳಿಸಲು ಮುಂದಾಗುತ್ತಿದ್ದೇನೆ.
ನನ್ನೊಂದಿಗೆ ನನ್ನ ಗೆಳೆಯರು ಮತ್ತು ಸಹೃದಯಿಗಳು ಇದ್ದಾರೆ ಅವರಿಗೂ ವಿಷಯ ಮುಟ್ಟಿಸಿ, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಪಕ್ಷದಿಂದ ಮತ್ತು ಶಾಸಕರ ಬೆಂಬಲದಿಂದ ಹೊರ ಬರಲಿದ್ದೇನೆ.
ಸಮಾಜದ ಮಾಲೀಕರು ಮತ್ತು ದಾರಿದೀಪ ನಾವು ಅಂದುಕೊಂಡ ಕೆಲವರು ನನ್ನ ಬಗ್ಗೆ ಮುಂದಿನ ದಿನಗಳಲ್ಲಿ ಪಿತ್ತೂರಿ ಮಾಡಿ ಅಪಪ್ರಚಾರ ಮಾಡಲಿದ್ದಾರೆ ಅದನ್ನು ಹೆದರಿಸುವ ತಾಕತ್ತು ನನಗೂ ಇದೆ, ನನ್ನನ್ನು ರಾಜಕೀಯವಾಗಿ ಸಾಮಾಜಿಕವಾಗಿ ಪ್ರಶ್ನೆ ಮಾಡಿ, ಅದು ಬಿಟ್ಟು ವೈಯಕ್ತಿಕವಾಗಿ ಬಂದರೆ ಖಂಡಿತಾ ಸಾಂವಿಧಾನಿಕವಾಗಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊರ ಹಾಕಬೇಕಾಗುತ್ತದೆ.
ಕಾನೂನು ಅಡಿಯಲ್ಲಿ ಸುಳ್ಳು ಮೊಕದ್ದಮೆ ಹಾಕಿ ನನ್ನನ್ನು ಮೌನವಾಗಿಸಬಹುದು ಎಂದು ಅಂದುಕೊಂಡರೆ, ಅದನ್ನು ಸಂವಿಧಾನ ಇಟ್ಟುಕೊಂಡು ಕಾನೂನು ಅಡಿಯಲ್ಲಿಲ್ಲೇ ಏನು ಮಾಡಬೇಕು ಅಂತ ಗೊತ್ತಿದೆ.
ತಾಯಿ ಕಾವೇರಮ್ಮೆ, ಈಶ್ವರ ಇಗ್ಗುತ್ತಪ್ಪ, ಗುರುವಿನ ಸಾಕ್ಷಿಯಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ, ಶಾಸಕರೊಂದಿಗೂ ಮಾತನಾಡುತ್ತೇನೆ.ʼ
ಜೈ ಹಿಂದ್ ಜೈ ಕೊಡಗು.
ಇದು ಪ್ರತೀಕ್ ಪೊನ್ನಣ್ಣ ಅವರ ಪೋಸ್ಟ್. ಇದಕ್ಕೆ ಅನೇಕರು ಹಲವು ರೀತಿಯ ಕಾಮೆಂಟ್ ಹಾಕಿದ್ದಾರೆ. ಕೆಲವರು ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದಿದ್ದರೆ, ಇನ್ನು ಕೆಲವರು ಇದು ಉತ್ತಮ ನಿರ್ಧಾರ. ನಿಮ್ಮ ವ್ಯಕ್ತಿತ್ವಕ್ಕೆ ಕಾಂಗ್ರೆಸ್ ಸೂಕ್ತ ಆಯ್ಕೆಯಲ್ಲ. ಸಾಮಾಜಿಕ ಕೆಲಸಗಳಲ್ಲೇ ಮುಂದುವರೆಯಿರಿ ಎಂದು ಸಲಹೆ ನೀಡಿದ್ದಾರೆ.
ಇದೆಲ್ಲದರ ನಡುವೆ ಪ್ರತೀಕ್ ಪೊನ್ನಣ್ಣ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರಾ… ಅಥವಾ ನಾಯಕರ ಮನವೊಲಿಕೆಯಿಂದ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತಾರಾ ಅನ್ನೋದು ಈಗಿರುವ ಪ್ರಶ್ನೆ.