Ind Vs Eng ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಚಕವಾಗಿ ಗೆದ್ದು ಇತಿಹಾಸ ಬರೆದ ಟೀಂ ಇಂಡಿಯಾ..! – ಉಫ್..! ಎಂಥಾ ಮ್ಯಾಚ್ ಗರು..! ಎಂದ ಕ್ರಿಕೆಟ್ ಫ್ಯಾನ್ಸ್

ಇಂಗ್ಲೆಂಡ್ : ಇಂಗ್ಲೆಡ್ ವಿರುದ್ಧದ ಆಂಡರ್ಸನ್ ತೆಂಡೂಲ್ಕರ್ ಸರಣಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 6 ರನ್ ಅಂತರದಿಂದ ರೋಚಕವಾಗಿ ಗೆಲುವು ಸಾಧಿಸಿದೆ. ಕೊನೆಯ ದಿನ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 35 ರನ್ ಅಗತ್ಯವಿತ್ತು. ಭಾರತ ಗೆಲ್ಲೋದಕ್ಕೆ 04 ವಿಕೆಟ್ ಕಬಳಿಸಬೇಕಿತ್ತು. ದಿನದ ಮೊದಲ ಸೆಷನ್‌ನ ಮೊದಲ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದ ಇಂಗ್ಲೀಷ್ ಬ್ಯಾಟರ್‌ಗಳು ಆತಂಕ ಹುಟ್ಟಿಸಿದರು. ಆದರೆ ಅದ್ಭುತ ಲಯದಲ್ಲಿರುವ ಸಿರಾಜ್ ತಮ್ಮ ಮೊನಚಿನ ಬೌಲಿಂಗ್ ದಾಳಿ ಸಂಘಟಿಸಿ […]
ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಕ್ರಿಕೆಟ್ – ಶಿವಮೊಗ್ಗ ಲಯನ್ಸ್ ತಂಡದಲ್ಲಿ ಶ್ರೀನಿತಿ ಪಿ. ರೈ

ಮಡಿಕೇರಿ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಣಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕೊಡಗು ಮೂಲದ ಶ್ರೀನಿತಿ ಪ್ರಕಾಶ್ ರೈ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಲಯನ್ಸ್ ತಂಡ 80,000 ರೂ.ಗೆ ಎಡಗೈ ಸ್ಪಿನ್ನರ್ ಶ್ರೀನಿತಿ ಅವರನ್ನು ಖರೀದಿಸಿದೆ. ರಾಜ್ಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವ ಇವರು, ಕಳೆದ ವರ್ಷ 19 ಮತ್ತು 23 ವರ್ಷದೊಳಗಿನ ತಂಡವನ್ನು ಪ್ರತಿನಿಧಿಸಿದ್ದರು. 19 ವರ್ಷದೊಳಗಿನವರ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಗಮನ ಸೆಳೆದಿದ್ದರು. […]
ಕೊಡಗಿನ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

ವಿರಾಜಪೇಟೆಯ ತೆಲುಗರ ಬೀದಿ ನಿವಾಸಿಗಳಾದ ಅಜಯ್ ಸಿಂಗ್ ಹಾಗು ವಿಭಾ ದಂಪತಿಗಳ ಮಗಳು ಹಾಗೂ ಗೋಣಿಕೊಪ್ಪ ಕಾಪ್ಸ್ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ಆದ್ಯ ಸಿಂಗ್ 4ನೇ ಏಷಿಯನ್ ಸರ್ಫಿಂಗ್ ಚಾಂಪಿಯನ್ ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕೊಡವ ಹಾಕಿ ಪ್ರೀಮಿಯರ್ ಲೀಗ್ – ಪಳೆ ತಾಲೂಕ್ ಚಾಂಪಿಯನ್, ಕೂರ್ಗ್ ಟೈಟಾನ್ಸ್ ರನ್ನರಪ್..!

ಮೈಸೂರು : ಚಾಮುಂಡಿ ವಿಹಾರ ಹಾಕಿ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಕೊಡವ ಹಾಕಿ ಪ್ರೀಮಿಯರ್ ಲೀಗ್‌ನಲ್ಲಿ ಪಳೆ ತಾಲೂಕ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಳೆ ತಾಲೂಕ್ ಹಾಗೂ ಕೂರ್ಗ್ ಟೈಟಾನ್ಸ್ ನಡುವೆ ಫೈನಲ್ ಪಂದ್ಯ ನಡೆಯಿತು. ಪಳೆ ತಾಲೂಕ್ ತಂಡ 3-1 ಗೋಲುಗಳ ಅಂತರದಲ್ಲಿ ಗೆದ್ದು ಕೊಡವ ಹಾಕಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿತು. ರನ್ನರಪ್ ಪ್ರಶಸ್ತಿಗೆ ಕೂರ್ಗ್ ಟೈಟಾನ್ಸ್ ಭಾಜನವಾದರೆ, ಮೂರನೇ ಸ್ಥಾನಕ್ಕೆ ಕೊಡವು ವಾರಿಯರ್ಸ್ ತಂಡ ತೃಪ್ತಿ ಪಟ್ಟುಕೊಂಡಿತು. […]
ಸಾಂಸ್ಕೃತಿಕ ನಗರಿಯಲ್ಲಿ ಕೊಡವ ಹಾಕಿ ಪ್ರೀಮಿಯರ್ ಲೀಗ್ – ಜೂ. 27ರಿಂದ ಮೈಸೂರಿನಲ್ಲಿ ಚೊಟ್ಟಲ ಟೂರ್ನಿ

ವರದಿ : ಚೆಯ್ಯಂಡ ಬನೀತ್ ಬೋಜಣ್ಣ ಮೈಸೂರು : ಕೊಡಗು ಅಥವಾ ಕೊಡವರು ಎಂದಾಗ ನಮಗೆ ನೆನಪಿಗೆ ಬರುವ ಹಲವು ವಿಷಯಗಳಲ್ಲಿ ಕ್ರೀಡೆಯು ಒಂದು. ಅದರಲ್ಲೂ ಹಾಕಿ ಕ್ರೀಡೆ ಕೊಡಗಿನಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತದ ಹಾಕಿ ತಂಡಕ್ಕೆ ನಮ್ಮ ಜಿಲ್ಲೆಯ ಅಸಂಖ್ಯಾತ ಆಟಗಾರರು ಆಡಿದ್ದಾರೆ. ಇದರಿಂದ ಕೊಡಗನ್ನು ಭಾರತದ ಹಾಕಿಯ ತೊಟ್ಟಿಲು ಎಂದು ಕರೆಯುತ್ತಾರೆ. ಹಾಕಿಯ ಮೂಲಕ ಕೊಡವ ಜನಾಂಗವನ್ನು ಮತ್ತಷ್ಟು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕೊಡಗಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯುತ್ತದೆ. […]
ಕೊಡಗು ಜಿಲ್ಲಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ಯೋಗದ ಮಹತ್ವ ವಿವರಿಸಿದ ಗಣ್ಯರು..!

ಮಡಿಕೇರಿ : ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಇವರ ಸಹಯೋಗದೊಂದಿಗೆ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ವಿಷಯದಡಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ೧೧ನೇ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತೀಯ ಮೂಲದ ಯೋಗ ವಿಶ್ವದಾದ್ಯಂತ ಪಸರಿಸಿದೆ. ಪ್ರತಿ ನಿತ್ಯ ಯೋಗ ಮಾಡುವುದರಿಂದ ಆರೋಗ್ಯ, ಆಯಸ್ಸು ಹೆಚ್ಚಾಗಲಿದೆ. ಇದರಿಂದ ಕ್ರಿಯಾಶೀಲತೆ […]
ದುಬೈ ಕೂರ್ಗ್ ಕ್ರಿಕೆಟ್ ಫೆಸ್ಟ್ ಸೀಸನ್ 02 – ತಂಡಗಳ ಖರೀದಿಗೆ ಜು.20ರವರೆಗೆ ಅವಕಾಶ..!

Coorg Buzz Correspondent Dubai : ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ದುಬೈನಲ್ಲಿ ನೆಲೆಸಿರುವ ಕೊಡಗಿನ ಯುವಕರಿಗಾಗಿ ದುಬೈ ಕೂರ್ಗ್ ಕ್ರಿಕೆಟ್ ಫೆಸ್ಟ್ ಸೀಸನ್ 02 ಆಯೋಜಿಸಲಾಗಿದೆ. ಕೊಡಗಿನ ಯುವಕರ ತಂಡ ಕಳೆದ ಬಾರಿ ಸೀಸನ್ 01 ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದೀಗ ಎರಡನೇ ವರ್ಷದ ಟೂರ್ನಿಗಾಗಿ ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದೆ. ಈ ಬಾರಿ ಹತ್ತು ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎರಡು ಗ್ರೂಪ್‌ಗಳಾಗಿ ಮಾಡಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಪಂದ್ಯವು 05 ಓವರ್‌ಗೆ […]
ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟ: ದ್ವಿತೀಯ ಸ್ಥಾನ ಮುಡಿಗೇರಿಸಿಕೊಂಡ ಕೊಡಗು ಸೈನಿಕ ಶಾಲೆ

ಒಡಿಶಾದ (Odisha)ಭುವನೇಶ್ವರದಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ ಸೈನಿಕ ಶಾಲೆಗಳ ಫುಟ್ಬಾಲ್ ಪಂದ್ಯಾವಳಿಯಲ್ಲಿ(National Inter-Sainik Schools Football Tournament)ಕೊಡಗು ಸೈನಿಕ ಶಾಲೆಯ ಜೂನಿಯರ್ ತಂಡವು ಪ್ರಥಮ ಬಾರಿಗೆ ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಹಾಗೂ ಟ್ರೋಫಿಯನ್ನು ಗಳಿಸಿದೆ. ಈ ಸಾಧನೆಯೊಂದಿಗೆ ಶಾಲೆಯು ಜಿಲ್ಲೆಗೆ ಕೀರ್ತಿ ತಂದಿದೆ. ಕ್ರೀಡಾಕೂಟದಿಂದ ಮರಳಿದ ವಿದ್ಯಾರ್ಥಿಗಳನ್ನು ಕೂಡಿಗೆ ಅಂಜಲಾ ವಿದ್ಯಾನಿಕೇತನ ಶಾಲೆಯಿಂದ ಅಲಂಕಾರಗೊಂಡ ವಾಹನದಲ್ಲಿ ಮೆರವಣಿಗೆಯ ಮೂಲಕ ಸೈನಿಕ ಶಾಲೆಗೆ ಕರೆತರಲಾಯಿತು. ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಲ್ಲಾರ್ಪಣೆ ಮೂಲಕ ಮೆರವಣಿಗೆಗೆ ಚಾಲನೆ […]
ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಗ್ಗೆ ಮೌನ ಮುರಿದ ರಾಹುಲ್ ದ್ರಾವಿಡ್: ಹೇಳಿದ್ದೇನು?

ಕ್ರಿಕೆಟ್ ಲೋಕದ ಲೆಜೆಂಡರಿ ಆಟಗಾರ ರಾಹುಲ್ ದ್ರಾವಿಡ್ (Rahul Dravid) ಅವರು ಕೊನೆಗೂ ಮೌನ ಮುರಿದು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ನಾನು ಕೂಡ ಬೆಂಗಳೂರಿನವನು ಬೆಂಗಳೂರಿನಲ್ಲಿರುವ ಜನರಿಗೆ ಕ್ರೀಡೆಯ ಬಗ್ಗೆ ಪ್ರೀತಿ ಇದೆ. ಜನರು ಕ್ರಿಕೆಟ್ ಮಾತ್ರವಲ್ಲ ಎಲ್ಲಾ ಕ್ರೀಡೆಯನ್ನು ಪ್ರೀತಿಸುತ್ತಾರೆ. ಫುಟ್ಬಾಲ್ ಇರಲ್ಲಿ ಕಬಡ್ಡಿ ಇರಲಿ ಎಲ್ಲಾ ತಂಡವನ್ನು ಜನರು ಫಾಲೋ ಮಾಡುತ್ತಾರೆ . ಈ ಬಾರಿ ಕಪ್ ಗೆದ್ದು 18 ವರ್ಷಗಳ ನಂತರ ಇದರ ಸೆಲೆಬ್ರೇಶನ್ಗಾಗಿ ತಂಡ ಬೆಂಗಳೂರಿಗೆ ಬಂದಿತ್ತು ಈ ವೇಳೆ […]
ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಪದಕ ಬಾಚಿದ ಕೊಡಗಿನ ಜ್ಯೋತಿ

ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ (Badminton) ಆಟಗಾರ್ತಿ ಕೊಡಗಿನ ತಾತಪಂಡ ಜ್ಯೋತಿ (Jyothi) ಸೋಮಯ್ಯ ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಮಹಿಳೆಯರ ಸಿಂಗಲ್ಸಿನಲ್ಲಿ ಚಿನ್ನದ ಪದಕ, ಮಹಿಳೆಯರ ಡಬಲ್ಸಿನಲ್ಲಿ ಬೆಳ್ಳಿಯ ಪದಕ ಮತ್ತು ಮಿಕ್ಸ್ ಡಬಲ್ಸಿನಲ್ಲಿ ಕಂಚಿನ ಪದಕ ಬಾಚಿಕೊಂಡಿದ್ದಾರೆ.