ವಿರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ NCC ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ

ವಿರಾಜಪೇಟೆ : ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ಎನ್‌ಸಿಸಿ ಘಟಕದ ಏರ್ ವಿಂಗ್ ಹಾಗೂ ಆರ್ಮಿ ವಿಂಗ್ ಗಳ ವತಿಯಿಂದ ಆರ್ಮಡ್ ಫೋರ್ಸ್ ಫ್ಲಾಗ್ ಡೇ ಯ ಪ್ರಯುಕ್ತ ಎಂಸಿಸಿ ವಿದ್ಯಾರ್ಥಿಗಳಿಂದಎಂಸಿಸಿ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂತ ಅನ್ನಮ್ಮ ಪ್ರೌಢಶಾಲೆಯ ಬಳಿ ವಿದ್ಯಾಸಂಸ್ಥೆ ವ್ಯವಸ್ಥಾಪಕರು ಹಾಗೂ ಸಂತ ಅನ್ನಮ್ಮ ಚರ್ಚ್ ನ ಪ್ರಧಾನ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿಮಿಕ್ ಹಾಗೂ ಎನ್‌ಸಿಸಿ ವಿಂಗ್ ಕಮಾಂಡರ್ ಆಫೀಸರ್ ಪ್ರವೀಣ್ ಕಾರ್ಯಪ್ಪ ರವರು ಈ ಜಾಥಾಕ್ಕೆ […]
ಎಚ್.ವೈ. ಮೇಟಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ…

ಬೆಂಗಳೂರು : ಮಾಜಿ ಸಚಿವ ಎಚ್.ವೈ. ಮೇಟಿ ಅನಾರೋಗ್ಯದಿಂದಾಗಿ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಮೇಟಿ ಅವರ ಆರೋಗ್ಯ ವಿಚಾರಿಸಿದರು. ಬೇಗ ಗುಣಮುಖರಾಗುವಂತೆ ಹಾರೈಸಿದರು.
ಬಾಲಕಿಯ ಅ*ತ್ಯಾಚಾರ, ಕೊ*ಲೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು..!

ಮೈಸೂರು : ದಸರಾದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಸಿದ್ದಲಿಂಗಪುರದ ಕಾರ್ತಿಕ್ ಬಂಧಿತ ಆರೋಪಿ. ಅತ್ಯಾಚಾರ ಮಾಡಿ, ಕೊಲೆಗೈದು ಬಸ್‌ನಲ್ಲಿ ಕೊಳ್ಳೇಗಾಲಕ್ಕೆ ಎಸ್ಕೇಪ್ ಆಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಬಂಧಿಸಿ ಕರೆತರುವ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಈತ ಯತ್ನಿಸಿದ್ದು, ಪೊಲೀಸರು ಆತನ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ಮಂಡ್ಯದಲ್ಲಿ ಮಹಿಳೆ ಮೇಲೆ […]
ಬಾಡಗ ಅಂಗನವಾಡಿ ಕೇಂದ್ರದಲ್ಲಿ ʼಪೋಷಣ್ ಭೀ ಪಢಾಯಿ ಭೀʼ ಕಾರ್ಯಕ್ರಮ

ಮೂರ್ನಾಡು : ಇಲ್ಲಿನ ಬಾಡಗ ಅಂಗನವಾಡಿ lkg ಕೇಂದ್ರದಲ್ಲಿ ಪೋಷನ್ ಮಾಸಾಚರಣೆ ಅಂಗವಾಗಿ ʼಪೋಷಣ್ ಭೀ ಪಢಾಯಿ ಭೀʼ ಕಾರ್ಯಕ್ರಮ ಜರುಗಿತು. ಮಕ್ಕಳಿಂದ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಟಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದಂತ ಚಟುವಟಿಕೆಗಳನ್ನು ಮಾಡಿಸಲಾಯಿತು. ಜೊತೆಗೆ ಮನೆಗಳ ಸುತ್ತಮನುತ್ತ ಆರೋಗ್ಯಕರ ಹಣ್ಣಿನ ಗಿಡಗಳನ್ನು ನೆಡಲು ಪೋಷಕರಿಗೆ ಪ್ರೋತ್ಸಾಹಿಸಲಾಯಿತು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಕಾಂತೂರು ಮುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ […]
ಲಂಚಕ್ಕೆ ಕೈವೊಡ್ಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತ ಬಲೆಗೆ..!

ಶನಿವಾರಸಂತೆ : ಲೋಕಾಯುಕ್ತ ಬಲೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಬಿದ್ದಿದ್ದಾರೆ. ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಹಿರೇಶ್ ಎಂಬವರೇ ಲಂಚ ಸ್ವೀಕಾರ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಜನಪ್ರತಿನಿಧಿ. ಕಾಮಗಾರಿಯೊಂದರ ಸಂಬಂಧ ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಗುತ್ತಿಗೆದಾರ ಭರತ್ ಎಂಬವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು 25 ಸಾವಿರ ರೂ. ಲಂಚ ಪಡೆಯುವ ವೇಳೆ ಅಧ್ಯಕ್ಷೆಯನ್ನು ರೆಡ್ ಹ್ಯಾಂಡ್ ಆಗಿ […]
ಬಿಗ್‌ಬಾಸ್‌ಗೆ ಬಿಗ್ ಶಾಕ್ ಕೊಟ್ಟ ಸರ್ಕಾರ – 12ನೇ ಆವೃತ್ತಿಯ ದೊಡ್ಡ ಮನೆಗೆ ಬೀಗ ಜಡಿದ ಜಿಲ್ಲಾಡಳಿತ..!

ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 12ನೇ ಆವೃತ್ತಿ ಆರಂಭವಾದ ಎರಡನೇ ವಾರದಲ್ಲೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ರಾಮನಗರ ತಹಶೀಲ್ದರ್ ತೇಜಸ್ವಿನಿ ಸಮ್ಮುಖದಲ್ಲಿ ಇಂದು ಸಂಜೆ ಆಗಮಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಬೀಗ ಹಾಕಿದ್ದಾರೆ. ಜೊತೆಗೆ 7 ಗಂಟೆಯೊಳಗೆ ಒಳಗಿರುವ ಎಲ್ಲರನ್ನೂ ಖಾಲಿ ಮಾಡುವಂತೆ ಸೂಚಿಸಿದ್ದರು. ಅದರಂತೆ ಬಿಗ್‌ಬಾಸ್ ಟೀಂ ಎಲ್ಲಾ ಸ್ಪರ್ಧಿಗಳ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಕಾರಣ ಏನು..? ಬಿಗ್‌ಬಾಸ್ ಶೂಟಿಂಗ್ ಆಗುತ್ತಿರುವ […]
ರಶ್ಮಿಕಾ, ವಿಜಯ್ ದೇವರಕೊಂಡ ನಿಶ್ಚಿತಾರ್ಥ? – ಹೊಸ ಜೀವನದತ್ತ ಜೋಡಿಹಕ್ಕಿ ಹೆಜ್ಜೆ..!

ಬೆಂಗಳೂರು : ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಹೊಸ ಜೀವನಕ್ಕೆ ಹೆಜ್ಜೆಯಿಡಲು ಕೊಡಗಿನ ಸುಂದರಿ ಸಿದ್ಧರಾಗುತ್ತಿದ್ದಾರೆಂಬ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಬಗ್ಗೆ ಪ್ರತಿಷ್ಠಿತ ಮಾಧ್ಯಮಗಳು ವರದಿ ಪ್ರಕಟಿಸಿದ್ದು, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆಂದು ವರದಿ ಭಿತ್ತರಿಸಿದೆ. ಆದರೆ ಈ ಬಗ್ಗೆ ಇಬ್ಬರು ತಾರೆಯರ ಕಡೆಯವರು ಯಾರೂ ಕೂಡಾ ಅಧಿಕೃತ ಹೇಳಿಕೆ […]
ಮಿತ ಆಹಾರ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ – ಮಂಜುನಾಥ್

ಮಡಿಕೇರಿ : ಮಿತವಾದ ಆಹಾರ ಸೇವನೆ, ಆರೋಗ್ಯಕರ ಚಟುವಟಿಕೆಯಿಂದ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯವೆಂದು ಆಹಾರ ಸುರಕ್ಷತಾ ಸಹಾಯಕ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು. ಕೋಪಟ್ಟಿ ಸಮೀಪದ ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನದ ಅಡಿಯಲ್ಲಿ ಅರಿವು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮತೋಲನ ಆಹಾರದ ಕುರಿತು ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿದಿನದ ಬದುಕಿನ ಭಾಗವಾಗಬೇಕು ಎಂದು ತಿಳಿಸಿದರು. ಮಡಿಕೇರಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಮಾತನಾಡಿ ಪ್ರತಿದಿನದ ಆಹಾರದಲ್ಲಿ ಸಮತೋಲನ ಆಹಾರ ಸೇವನೆ ಅಗತ್ಯವಾಗಿದ್ದು, […]
ಗರ್ಭದೊಳಗಿನ ಕಂದನಿಗೆ ಕಂಟಕವಾಗದಿರಲಿ ಅಬ್ಬರದ ಸಂಗೀತ..!

ವಿಶೇಷ ಲೇಖನ : ಡಾ. ಕೆ.ಬಿ. ಸೂರ್ಯಕುಮಾರ್ ಮಹಾಭಾರತದಲ್ಲಿ ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ವಿವರಿಸುವಾಗ ಗರ್ಭದಲ್ಲಿದ್ದ ಅಭಿಮನ್ಯು ಅದನ್ನು ಕೇಳಿ ತಿಳಿದು, ಮುಂದೆ ಧನುರ್ವಿದ್ಯಾಪಾರಂಗತನಾದ. ವೈಜ್ಞಾನಿಕ ಸಂಶೋಧನೆಯ ಪ್ರಗತಿಯಿಂದ ಗರ್ಭಾಶಯವು ಶಬ್ದರಹಿತವಲ್ಲ ಎಂಬುದು ತಿಳಿದುಬಂದಿದೆ. ಗರ್ಭದೊಳಗಿನ ಮಗುವಿಗೆ ಹೊರ ಜಗತ್ತಿನಿಂದ ಬರುವ ಜೋರಾದ ಶಬ್ದಗಳು ಗರ್ಭರಸದ ( ಅಮ್ನಿಯೋಟಿಕ್ ಫ್ಲೂಯಿಡ್) ಮೂಲಕ ತಲುಪಬಹುದು ಮತ್ತು ನೇರವಾಗಿ ಹಾನಿಕರ ಪರಿಣಾಮ ಬೀರಬಹುದು ಎಂಬುದು ಸಾಬೀತಾಗಿದೆ. ಗರ್ಭದಲ್ಲಿ ಮಗು ಶಬ್ದವನ್ನು ಹೇಗೆ ಕೇಳುತ್ತದೆ?… […]
ಏನಿದು ಮೆದುಳು ತಿನ್ನುವ ಅಮೀಬಾ – ಡಾ. ಕೆ.ಬಿ. ಸೂರ್ಯಕುಮಾರ್ ಅವರ ಸಕಾಲಿಕ ಬರಹ

ಕೇರಳದಲ್ಲಿ ಕೆಲವರಿಗೆ ಮೆದುಳಿನಲ್ಲಿ ಅಮೀಬಾ ಸೋಂಕು ಪತ್ತೆಯಾಗಿದ್ದು, ಜನ ಆತಂಕಕ್ಕೀಡಾಗುಂತೆ ಮಾಡಿದೆ. ಇದರ ಆತಂಕ ನೆರೆಯ ರಾಜ್ಯಗಳಲ್ಲೂ ಮೂಡಿದೆ. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಕೆ.ಬಿ. ಸೂರ್ಯಕುಮಾರ್ ಅವರು ಎರಡು ವರ್ಷದ ಹಿಂದೆ ಬರೆದ ಲೇಖನ ಸಕಾಲಿಕವಾಗಿದೆ. ಈ ಲೇಖನ ನಿಮ್ಮ ಮಾಹಿತಿಗಾಗಿ ಮಾತ್ರ. ಇದು ಅಪರೂಪದ ರೋಗವಾಗಿದ್ದು ಯಾವುದೋ ಒಂದು ಲಕ್ಷಣ ಕಂಡ ಕೂಡಲೇ ತನಗೆ ಆ ರೋಗವಿದೆ ಎಂದು ತಪ್ಪಾಗಿ ಯಾರೂ ತಿಳಿದುಕೊಳ್ಳಬೇಡಿ!. ಇತ್ತೀಚಿಗೆ ಕೇರಳದಿಂದ ಬಂದ ಒಂದು ವರದಿಯ ಪ್ರಕಾರ ಕಲುಷಿತ […]