ಮಾಲೆಗಾಂವ್ ಸ್ಪೋಟ ಪ್ರಕರಣ – ತೀರ್ಪು ಪ್ರಕಟಿಸಿದ ಮುಂಬೈ NIA ಕೋರ್ಟ್ – ಎಲ್ಲಾ 07 ಆರೋಪಿಗಳು ದೋಷಮುಕ್ತ..!

ಮುಂಬೈ : ಮಾಲೆಗಾಂವ್ ಸ್ಪೋಟಕ್ಕೆ (Malegaon blast) ಸಂಬಂಧಿಸಿದಂತೆ ಮುಂಬೈನ ಎನ್‌ಐಇ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದ್ದು, ಎಲ್ಲಾ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿನ ಮಸೀದಿ ಬಳಿ 2008ರ ಸೆಪ್ಟೆಂಬರ್ 29 ರಂದು ಬಾಂಬ್ ಸ್ಪೋಟವಾಗಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ನ್ಯಾಯಾಲಯ 07 ಆರೋಪಿಗಳ ವಿರುದ್ಧ ಅರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನಿರ್ದೋಷಿಗಳೆಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್(ನಿವೃತ್ತ), […]
ಇಂದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟ!!

ಇಂದು ನಾಲ್ಕು ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ (Assembly By-Election) ಫಲಿತಾಂಶ. ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ಮತ್ತು ಗುಜರಾತ್ ಈ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟಣೆ ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು. ಕೇರಳದ ನೀಲಾಂಬೂರ್‌ನಲ್ಲಿ ಸ್ವತಂತ್ರ ಶಾಸಕ ಪಿ.ವಿ.ಅನ್ವರ್ ಹಾಗೂ ಗುಜರಾತ್‌ನ ವಿಸಾವದರ್‌ನಲ್ಲಿ ಆಪ್ ಶಾಸಕ ಭೂಪೇಂದ್ರಭಾಯಿ ರಾಜೀನಾಮೆಯಿಂದ ಉಪಚುನಾವಣೆ ನಡೆದಿತ್ತು. ಭಾರತದ ನಾಲ್ಕು […]
International Yoga Day – 3 ಲಕ್ಷ ಜನರ ಸಮ್ಮುಖದಲ್ಲಿ ಪ್ರಧಾನಿ ಮೋದಿ

ಜೂನ್ 21 ರಂದು ನಡೆಯುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ( (P.M Narendra Modi ) ಅವರು ಭಾಗವಹಿಸಲಿದ್ದಾರೆ. ಹಾಗೂ ಇದರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಎ. ಚಂದ್ರಬಾಬು ನಾಯ್ಡು, ಇಲ್ಲಿ ಸುಮಾರು 3.19 ಲಕ್ಷ ಜನರು ಏಕಕಾಲದಲ್ಲಿ ಯೋಗ (ಮಾಡಬಹುದು ಹಾಗೂ ಆರ್. ಕೆ ಬೀಚ್ ನಿಂದ ಭೋಗಪುರಂ ವರೆಗೆ 26 ಕಿ.ಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. […]
ಸುಪ್ರೀಂ ಕೋರ್ಟ್‌ನಲ್ಲಿ ಮಹತ್ತರ ಬದಲಾವಣೆ – ಎರಡನೇ, ನಾಲ್ಕನೇ ಶನಿವಾರವೂ ಕಚೇರಿಗಳು ಕಾರ್ಯನಿರ್ವಹಣೆ..!

ನವದೆಹಲಿ : ದೇಶದ ಸರ್ವೋಚ್ಛ ನ್ಯಾಯಾಲಯವು ತನ್ನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ ಮಾಡಿದೆ. ಅದೇನೆಂದರೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೆಲಸದ ಅವಧಿಯಲ್ಲಿನ ಮಾರ್ಪಾಡು. ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ಇದ್ದು, ಈವರೆಗೆ ಅದು ಸುಪ್ರೀ ಕೋರ್ಟ್ ಕಚೇರಿ ವ್ಯಾಪ್ತಿಗೂ ಅನ್ವಯವಾಗಿತ್ತು. ಆದರೆ ಈಗ ಆಗಿರುವ ಸುಪ್ರೀಂ ಕೋರ್ಟ್ ತಿದ್ದುಪಡಿ ನಿಯಮದ ಪ್ರಕಾರ ಈ ಎರಡು ದಿನಗಳನ್ನು ಕೆಲಸದ ವ್ಯಾಪ್ತಿಗೆ ತರಲಾಗಿದೆ. ಅಂದರೆ ಇನ್ನು ಮುಂದೆ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡಾ […]
ದುರಂತ ಅಂತ್ಯ ಕಂಡ ಏರ್ ಇಂಡಿಯಾದ ಬೋಯಿಂಗ್-787 ವಿಶೇಷತೆ ಏನೇನು?

ಗುರುವಾರದಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ (Air India) ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ (Boeing 787 Dreamliner) ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ. 672 ಅಡಿ ಎತ್ತರದಿಂದ ಮೆಡಿಕಲ್ ಹಾಸ್ಟೆಲ್ ಮೇಲೆ ಬಂದು ಅಪ್ಪಳಿಸಿದೆ. ಈ ಅಪಘಾತದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಮಧ್ಯಾಹ್ನ 1:38ಕ್ಕೆ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ಈ ಅಪಘಾತ ಸಂಭವಿಸಿತು. ಪೈಲಟ್ “ಮೇಡೇ” […]
ಅಹಮದಾಬಾದ್ ವಿಮಾನ ದುರಂತ – ವಿಮಾನ ಬೆಂಕಿಗಾಹುತಿಯಾದರೂ ಗ್ರೇಟ್ ಎಸ್ಕೇಪ್ ಆದ ಏಕಮಾತ್ರ ವ್ಯಕ್ತಿ..!

ಅಹಮದಾಬಾದ್ : ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ೨೪೧ ಮಂದಿ ಮೃತಪಟ್ಟಿದ್ದಾರೆ. ಆದರೆ ಪವಾಡಸದೃಶ ರೀತಿಯಲ್ಲಿ ವ್ಯಕ್ತಿಯೊಬ್ಬರು ಪಾರಾಗಿದ್ದಾರೆ. ರಮೇಶ್ ವಿಶ್ವಕುಮಾರ್ ಮಹಾದುರಂತದಲ್ಲಿ ಬದುಕುಳಿದ ವ್ಯಕ್ತಿ. ಭಾರತ ಮೂಲದ ರಮೇಶ್ ತನ್ನ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ಕೆಲವು ದಿನದ ಹಿಂದೆ ಭಾರತಕ್ಕೆ ಬಂದಿದ್ದ ಅವರು, ಇಂದು ತನ್ನ ಸಹೋದರನೊಂದಿಗೆ ಲಂಡನ್‌ಗೆ ಮರಳುತ್ತಿದ್ದರು. ವಿಮಾನದ ಸೀಟ್ ೧೧(ಎ)ನಲ್ಲಿ ರಮೇಶ್ ವಿಶ್ವಕುಮಾರ್ ಕುಳಿತಿದ್ದರು. ಪಕ್ಕದಲ್ಲಿ ಅವರ ಸಹೋದರ ಇದ್ದರು. ಏರ್ ಇಂಡಿಯಾದ ಬೋಯಿಂಗ್ ವಿಮಾನ ಟೇಕ್ […]
ಅಹಮದಾಬಾದ್ ವಿಮಾನ ದುರಂತ – ಮಂಗಳೂರು ಮೂಲದ ಸಹಾಯಕ ಪೈಲಟ್ ದುರ್ಮರಣ..!

ಗುಜರಾತ್ : ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 200ಕ್ಕೂ ಅಧಿಕ ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳಲು ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿದೆ. ಈ ದುರಂತದಲ್ಲಿ ಕರ್ನಾಟಕ ಮೂಲದ ಸಹಾಯಕ ಪೈಲಟ್ ಕೂಡಾ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಮಂಗಳೂರು ಮೂಲದ ಕ್ಲೈವ್ ಕುಂದರ್ ದುರಂತ ಅಂತ್ಯ ಕಂಡವರಾಗಿದ್ದಾರೆ. ಈ ಘಟನೆಯಲ್ಲಿ ವಿದೇಶಿ ನಾಗರೀಕರು ಸೇರಿದಂತೆ ಬಹುತೇಕ ಎಲ್ಲರೂ ದುರಂತ ಅಂತ್ಯ ಕಂಡಿದ್ದಾರೆಂದು ಗುಜರಾತ್‌ನ ಮಾಧ್ಯಮಗಳು […]
Big Breaking : ಅಹಮದಾಬಾದ್‌ನಲ್ಲಿ ವಿಮಾನ ಪತನ – ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ನೆಲಕ್ಕಪ್ಪಳಿಸಿದ ಏರ್ ಇಂಡಿಯಾ ಫ್ಲೈಟ್..!

ಬೆಂಗಳೂರು : ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಅಪಘಾತ ಸಂಭವಿಸಿದೆ. ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 240ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನ ಇದಾಗಿದ್ದು, ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಅಪಘಾತಕ್ಕೀಡಾಗಿದೆ. ಏರ್‌ಪೋರ್ಟ್‌ನ ಕೆಲವೇ ಅಂತರದಲ್ಲಿ ದುರಂತ ಸಂಭವಿಸಿದ್ದು, ವಿಮಾನದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿದ್ದು, ಬೆಂಕಿ ನಂದಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗುಜರಾತ್‌ನ ಮಾಜಿ […]
Operation Sindoor: ಪಾಕ್ ಒಳಗೆ ನುಗ್ಗಿ ಹೊಡೆದ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ಬಿಚ್ಚಿಟ್ಟ ಸೇನೆ

ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಹದಿನೈದು ದಿನಗಳ ನಂತರ, ಮಂಗಳವಾರ-ಬುಧವಾರದ ಮಧ್ಯರಾತ್ರಿ ಭಾರತವು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಲು ಸಿದ್ಧ ಎಂಬುದನ್ನು ಭಾರತೀಯ ಸೇನೆ ನಿರೂಪಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK) ಭಯೋತ್ಪಾದಕ ಶಿಬಿರಗಳ ವಿರುದ್ಧ ‘ಆಪರೇಷನ್ ಸಿಂಧೂರ್’ (Operation Sindoor) ಅಡಿಯಲ್ಲಿ ನಿಖರವಾದ ದಾಳಿ ನಡೆಸಿದೆ. ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಹಂಚಿಕೊಂಡ ಮಾಹಿತಿ ಪ್ರಕಾರ, ಈ […]
ಪಶ್ಚಿಮಘಟ್ಟ ಉಳಿಸಿಕೊಳ್ಳಲು ವರದಿ ಸಲ್ಲಿಸಿದ್ದ ಕೆ ಕಸ್ತೂರಿರಂಗನ್ ನಿಧನ

ಭಾರತ ಕಂಡ ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ (Kasturirangan) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷಗಳಾಗಿತ್ತು. ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಅವರು, ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಬರೋಬ್ಬರಿ 9 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1994 ರಿಂದ ಆಗಸ್ಟ್ 27, 2003ವರೆಗೆ ಇಸ್ರೋದ ಅಧ್ಯಕ್ಷರಾಗಿದ್ದರು. ರಾಜ್ಯಸಭೆ ಸದಸ್ಯ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಕೆ.ಕಸ್ತೂರಿ ರಂಗನ್ ಅವರ ಸಾಧನೆಗೆ ಭಾರತ ಸರ್ಕಾರ, ದೇಶದ […]