ಕಡಗದಾಳುವಿನಲ್ಲಿ ವೈಭವದಿಂದ ಜರುಗಿದ ʼಹಿಂದು ಸಂಗಮʼ – ಹಿಂದುಗಳ ಮತಾಂತರ ತಡೆಯಲು ಶ್ರಮಿಸಬೇಕು : ಶಿವಪ್ರಸಾದ್ ಉಜಿರೆ

ಮಡಿಕೇರಿ : ಕಡಗದಾಳು ಮಂಡಲ ವ್ಯಾಪ್ತಿಯ ಹಿಂದು ಸಂಗಮ ಕಾರ್ಯಕ್ರಮ ಭಾನುವಾರ ವೈಭವದಿಂದ ಜರುಗಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಹಿಂದುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ರಚಿಸಲಾಗಿದ್ದ ಶ್ರೀ ವಿನಾಯಕ ವಸತಿ ಕತ್ತಲೆಕಾಡು-ಜೇನುಕೊಲ್ಲಿ, ಶೌರ್ಯ ವಸತಿ ಕಡಗದಾಳು, ಶಿವಾಜಿ ವಸತಿ ನೀರುಕೊಲ್ಲಿ, ಪರಶುರಾಮ ವಸತಿ ಬೋಯಿಕೇರಿ ಸದಸ್ಯರುಗಳು ತಮ್ಮ ಗ್ರಾಮಗಳಿಂದ ಮೆರವಣಿಗೆ ಮೂಲಕ ಕಡಗದಾಳು ಶಾಲೆ ಆವರಣಕ್ಕೆ ಆಗಮಿಸಿದರು. ಬಳಿಕ ಸ್ಥಳೀಯ ಶಾಲೆ ಆವರಣದಿಂದ ಸಾಮೂಹಿಕ […]