ದಿ ಕೂರ್ಗ್ ಡಿಸ್ಟ್ರಿಕ್ಟ್ ಮುಸ್ಲಿಂ ಅಸೋಸಿಯೇಷನ್ ಸಭೆ : ಸದಸ್ಯತ್ವ ಹೆಚ್ಚಿಸಲು, ಸಾಮಾಜಿಕ ಕಳಕಳಿಯ ಕಾರ್ಯಕ್ರಮ ರೂಪಿಸಲು ನಿರ್ಧಾರ

ಮಡಿಕೇರಿ : ದಿ ಕೂರ್ಗ್ ಡಿಸ್ಟ್ರಿಕ್ಟ್ ಮುಸ್ಲಿಂ ಅಸೋಸಿಯೇಷನ್ ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಸಂಘಟನೆಯನ್ನು ಸದೃಢಗೊಳಿಸಲಾಗುವುದು ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅಸೋಸಿಯೇಷನ್ ನ ಉಪಾಧ್ಯಕ್ಷ ಎರ್ಮು ಹಾಜಿ ತಿಳಿಸಿದ್ದಾರೆ. ನಗರದ ಕೂರ್ಗ್ ಕಮ್ಯೂನಿಟಿ ಹಾಲ್ ನಲ್ಲಿ ನಡೆದ ಅಸೋಸಿಯೇಷನ್ ನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದ ಅಭಿವೃದ್ಧಿಗೆ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ, ಸಮುದಾಯದ ವಿವಿಧ ಸಂಘ-ಸAಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಿ ಸದಸ್ಯತ್ವವನ್ನು ಹೆಚ್ಚಿಸುವ ಕುರಿತು ಸಿದ್ದಾಪುರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. […]

ಜೂ.11 ರಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಕೊಡಗು ಜಿಲ್ಲಾ ಪ್ರವಾಸ

ಮಡಿಕೇರಿ  : ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಜೂನ್, 11 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಜೂನ್, 11 ರಂದು ಬೆಳಗ್ಗೆ 10.45 ಗಂಟೆಗೆ ಕುಶಾಲನಗರದ ಇಂದಿರಾ ಕ್ಯಾಂಟೀನ್ ಭೇಟಿ ಹಾಗೂ ಪರಿಶೀಲನೆ ಮಾಡಲಿದ್ದಾರೆ. ನಂತರ ಬೆಳಗ್ಗೆ 11 ಗಂಟೆಗೆ ನಗರಾಭಿವೃದ್ದಿ ಮತ್ತು ಪೌರಾಡಳಿತ ಇಲಾಖೆ ವತಿಯಿಂದ ಕುಶಾಲನಗರದಲ್ಲಿ ‘ನೂತನ ಪುರಸಭಾ ಕಚೇರಿ ಕಟ್ಟಡ’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 12.45 ಗಂಟೆಗೆ ಕೊಡಗು ಜಿಲ್ಲೆಯ […]

ಜೂ.11 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ – ನೀವೂ ದೂರು ಸಲ್ಲಿಸಹುದು..!?

ಮಡಿಕೇರಿ : ಕರ್ನಾಟಕ ಲೋಕಾಯುಕ್ತ, ಕೊಡಗು ಜಿಲ್ಲೆ, ಮಡಿಕೇರಿಯ ಲೋಕಾಯುಕ್ತ(lokayukta) ಅಧಿಕಾರಿಗಳು ಜೂನ್ 11 ರಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ವಿತರಿಸಲಿರುವರು. ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಟ್ ಮಾಡಿಸಿದ ಅರ್ಜಿ ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರತದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು […]

ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿಎಂ‌ ಸಿದ್ದರಾಮಯ್ಯ

ನವದೆಹಲಿ(new dellhi) : ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನಲೆಯಲ್ಲಿ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaiah) ತಿಳಿಸಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಕರ್ನಾಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ವಿವಿಧ ಜಾತಿಗಳ ಸಂಘಸಂಸ್ಥೆಗಳು, ಮಠಾಧೀಶರು, ಸಮುದಾಯದಗಳ ಮುಖಂಡರು, ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚಿಸಲಾಗಿ, ಜಾತಿಗಣತಿ ವರದಿಯನ್ನು […]

ಯುವಜನತೆಗೆ ಅವಕಾಶ: ಕೊಡಗಿನಲ್ಲಿ ಉದ್ಯೋಗ ಮೇಳ

Job fair

ಮಡಿಕೇರಿ:-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂನ್, 13 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ‘ಉದ್ಯೋಗಮೇಳ’ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ (Job fair) ಟೀಷರ್ ದಿ ಟೆಕ್ನಿಕಲ್ ಸರ್ವೀಸ್ (Techser the technical service, Mysore), ಕಲ್ಯಾಣಿ ಮೋಟಾರ್ಸ್ ಮಡಿಕೇರಿ, ಮುತ್ತೂಟ್ ಪೈನಾನ್ಸ್, ಮೈಸೂರು, ಅಪೋಲೋ ಫಾರ್ಮಸಿ, ಮೈಸೂರು, ತಾಜ್ ರೆಸಾಟ್ರ್ಸ್, ಮಡಿಕೇರಿ ಮತ್ತು ಕ್ಲಬ್ ಮಹೀಂದ್ರ ರೆಸಾರ್ಟ್ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ […]

ಯೋಗದ ಮಹತ್ವ ಕುರಿತು ‘ಜಾಗೃತಿ ಜಾಥ ಹಾಗೂ ಯೋಗ ಪ್ರದರ್ಶನ’

Yoga day

ಮಡಿಕೇರಿ:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ವಿವಿಧ ಯೋಗ ಸಂಸ್ಥೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ (Yoga) ದಿನಾಚರಣೆ ಪ್ರಯುಕ್ತ ಹಸಿರು ಯೋಗ, ಶ್ರಮದಾನ, ಸ್ವಚ್ಛತಾ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮವು ಮಂಗಳವಾರ ನಗರದ ಗಾಂಧಿ ಮೈದಾನ ಹಾಗೂ ಗಾಂಧಿ ಭವನದಲ್ಲಿ ನಡೆಯಿತು. ನಗರದ ಗಾಂಧಿ ಮೈದಾನದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ನಗರಸಭಾ ಸದಸ್ಯರಾದ ಚಂದ್ರಶೇಖರ್ ಅವರು ಚಾಲನೆ ನೀಡಿದರು. ಬಳಿಕ ಗಾಂಧಿ ಮೈದಾನದಿಂದ ಗಾಂಧಿ ಭವನದವರೆಗೆ ಯೋಗದ ಮಹತ್ವ ಕುರಿತು ‘ಜಾಗೃತಿ ಜಾಥ’ ಜರುಗಿತು. ನಗರದ […]

ಕಳೆದ 24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸುರಿದ ಮಳೆ ಮಾಹಿತಿ

kodagu rain

ಕೊಡಗು (Kodagu) ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 0.44 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.62 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 786.04 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 426.29 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 1.93 ಮಿ.ಮೀ. ಕಳೆದ ವರ್ಷ ಇದೇ ದಿನ 33.35 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1159.99 ಮಿ.ಮೀ, ಕಳೆದ ವರ್ಷ ಇದೇ […]

“ಮನರೇಗಾ ಕನಸು ನನಸಾಯಿತು”: ಹೊಸ ಅಂಗನವಾಡಿಗೆ ಶಾಸಕ ಪೊನ್ನಣ್ಣ ಚಾಲನೆ

MLA Ponnanna

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿರಾಜಪೇಟೆ (Virajpet) ತಾಲ್ಲೂಕಿನ ಕಾರ್ಮಾಡು ಗ್ರಾ.ಪಂ ( Karmadu Gram Panchayat)ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ (Ponnanna) ಅವರು ಉದ್ಘಾಟಿಸಿದರು. ಅಂಗನವಾಡಿ ಕೇಂದ್ರಗಳು ( Anganwadi Center) ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಒದಗಿಸುವ ಒಂದು ಪ್ರಮುಖ ಕೇಂದ್ರಗಳಾಗಿದ್ದು, ಮಕ್ಕಳ ದೈಹಿಕ ಹಾಗೂ ಬೌದ್ದಿಕ ಬೆಳವಳಿಗೆಯು ಸಹ ಅಂಗನವಾಡಿ ಕೇಂದ್ರಗಳಿಂದಲೇ ಪ್ರಾರಂಭವಾಗುತ್ತವೆ. […]

ವಿರಾಜಪೇಟೆಯಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ವಿರಾಜಪೇಟೆಯಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ಪಟ್ಟಣದ ಪರಂಜರುಪೇಟೆಯ ನಿಸರ್ಗ ಬಡಾವಣೆಯ ((Nisarga Layout) ಬಳಿ ನೂತನವಾಗಿ ನಿರ್ಮಿಸಿದ ಬಸ್‌ ತಂಗುದಾಣವನ್ನು (new bus stand) ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್‌ ಪೊನ್ನಣ್ಣ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಇವರು ಬಸ್‌ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ತಂಗುದಾಣದ (bus stand)  ನಿರ್ಮಾಣ ಮಾಡಲಾಗಿದ್ದು ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಅದೇ ರೀತಿ ಸುಚಿತ್ವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇದಕ್ಕೆ ಸಂಭಂದ ಪಟ್ಟವರು ಇಲ್ಲಿ ಇರಲು ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು. ಈ […]