ಮಡಿಕೇರಿಯಲ್ಲಿ ಗಮನ ಸೆಳೆದ ಪೊಲೀಸ್ ರನ್ ಮ್ಯಾರಾಥಾನ್

ಕರ್ನಾಟಕ ರಾಜ್ಯ ಪೊಲೀಸ್ (Police) ಇಲಾಖೆಯ ಫಿಟ್ನೆಸ್ ಫಾರ್ ಅಲ್ (Fitness for all) ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದಾದ್ಯಂತ ಇಂದು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಈ ಕಾಯಕ್ರಮದ ಭಾಗವಾಗಿ ಕೊಡಗು ಜಿಲ್ಲಾ ಪೊಲೀಸ್ ಘಟಕದ ಆಯೋಜನೆಯಲ್ಲಿ ಡ್ರಗ್ಸ್ ಮುಕ್ತ ಕೊಡಗು ಎನ್ನುವ ಪರಿಕಲ್ಪನೆಯೊಂದಿಗೆ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಪೊಲೀಸ್ ರನ್ ಮ್ಯಾರಾಥಾನ್ (Police Run Marathon) ನಡೆಯಿತು. ವಿಕ್ರಮ್ ಜಾದೂಗಾರ್ ರವರಿಂದ ಮಾದಕ ದ್ರವ್ಯವನ್ನು […]
ರಶ್ಮಿಕಾಗೆ ಸೂಕ್ತ ಭದ್ರತೆ ನೀಡಲು ಕೊಡವ ಕೌನ್ಸಿಲ್ ಒತ್ತಾಯ: ಕೊಡಗಿನ ಬೆಡಗಿ ಪರ ನಿಂತ ಖ್ಯಾತ ನಟಿಯರು

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೊಡಗಿನ ಬೆಡಗಿ. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ರಶ್ಮಿಕಾ ಕನ್ನಡ ಸರಿಯಾಗಿ ಮಾತಾಡಲ್ಲ, ಹೈದರಾಬಾದ್ ನನ್ನ ಊರು ಅಂತ ಹೇಳಿದ್ದಕ್ಕೆ ವಿಪರೀತ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ. ಶಾಸಕ ರವಿಕುಮಾರ್ ಅವರಂತೂ ರಶ್ಮಿಕಾ ಮಂದಣ್ಣಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಬೆದರಿಕೆ ಧ್ವನಿಯಲ್ಲಿ ಹೇಳಿದ್ದರು. ಇದೀಗ ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ರಶ್ಮಿಕಾಗೆ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. […]
ಭಾಗ್ಯವತಿಗೆ ಉತ್ತಮ ಅಂಗನವಾಡಿ ಶಿಕ್ಷಕಿ ಪ್ರಶಸ್ತಿ

ರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಬಲ್ಲಮಾವಟಿ ವೃತ್ತದ ಹಳೆ ತಾಲೂಕು ಅಂಗನವಾಡಿ ಕೇಂದ್ರದ ಶಿಕ್ಷಕಿ ಭಾಗ್ಯವತಿಯವರಿಗೆ “ಉತ್ತಮ ಅಂಗನವಾಡಿ ಶಿಕ್ಷಕಿ” (Anganwadi Teacher) ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿ ಗೌರವಿಸಿದರು.