ಸಮರ್ಥ ಸಾಹಿತ್ಯ ಪ್ರತಿಷ್ಟಾನದ ಪತ್ರಿಕೋದ್ಯಮ ಪ್ರಶಸ್ತಿಗೆ ಅನಿಲ್ ಹೆಚ್.ಟಿ. ಆಯ್ಕೆ

ಮಡಿಕೇರಿ : ಬೆಂಗಳೂರಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಠಾನವು ನೀಡುವ ವಾರ್ಷಿಕ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಮಡಿಕೇರಿಯ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ. ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೖತಿಕ ಪ್ರತಿಷ್ಟಾನವು ವಾರ್ಷಿಕವಾಗಿ ಪತ್ರಿಕೋದ್ಯಮ, ಸಮಾಜಸೇವೆ, ಆರೋಗ್ಯ, ಶಿಕ್ಷಣ, ಸಾಹಿತ್ಯ, ಉದ್ಯಮ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಗಾಂಧಿ ಪ್ರಿಯ ಹೆಸರಿನ ಪ್ರಶಸ್ತಿ ನೀಡುತ್ತಿದೆ. ಈ ವರ್ಷದ ಗಾಂಧಿ ಪ್ರಿಯ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದಿಂದ ಅನಿಲ್ ಹೆಚ್.ಟಿ. ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ವಿದ್ಯುನ್ಮಾನ, ಬಾನುಲಿ ಮಾಧ್ಯಮಗಳಲ್ಲಿ ಹಾಗೂ […]