ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ – ಬಂಟ ನಾಡವ ಎಂದು ನಮೂದಿಸಲು ಬಂಟರ ಸಂಘ ಮನವಿ

ಮಡಿಕೇರಿ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸೆ.22ರಿಂದ ಆರಂಭವಾಗಲಿದೆ. ಗಣತಿ ಸಂದರ್ಭದಲ್ಲಿ ಬಂಟ ಸಮುದಾಯದವರು ಜಾತಿ ಕಾಲಂನಲ್ಲಿ ʼಬಂಟ ನಾಡವʼ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಬಂಟರ ಸಂಘ ಮನವಿ ಮಾಡಿದೆ. ಗಣತಿದಾರರು ಮನೆಗೆ ಆಗಮಿಸಿದ ಸಂದರ್ಭ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಬಂಟ ನಾಡವ ಎಂದು ನಮೂದಿಸಬೇಕು. ಉಪಜಾತಿಯ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಜಗದೀಶ್‌ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾತೃ ಸಂಘದ ಸಭೆಯಲ್ಲಿ ಈ […]

ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ – ಭಕ್ತರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ ಅಂತ ಹೇಳಿದ್ಯಾರು..?

ಮಡಿಕೇರಿ : ಅಕ್ಟೋಬರ್ ೧೭ ರಂದು ತಲಕಾವೇರಿಯಲ್ಲಿ ಜರುಗುವ ಪವಿತ್ರ ಕಾವೇರಿ ತೀರ್ಥೋದ್ಭವ ಸಂಬಂಧ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೂಚಿಸಿದ್ದಾರೆ. ಭಾಗಮಂಡಲ ‘ಶ್ರೀ ಭಗಂಡೇಶ್ವರ ದೇವಾಲಯದ ಹಳೆ ಮುಡಿಶೆಡ್ ಕಟ್ಟಡದ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಲಕಾವೇರಿಯಲ್ಲಿ ಭಕ್ತಾದಿಗಳಿಗೆ ಯಾವುದೇ ರೀತಿ ಕಿರಿಕಿರಿ ಉಂಟಾಗದಂತೆ ಅಧಿಕಾರಿಗಳು ಗಮನಹರಿಸಬೇಕು. ೧೭ ರಂದು ಮಧ್ಯಾಹ್ನ ೧.೪೪ ಗಂಟೆಗೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಸಂಭವಿಸುವುದರಿಂದ […]

ಬೆಳೆಹಾನಿ ಸಮೀಕ್ಷೆ ನಿಖರ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಸೂಚನೆ

ಮಡಿಕೇರಿ : ಕಳೆದ ನಾಲ್ಕು ತಿಂಗಳು ಸುರಿದ ಮಳೆಯಿಂದ ಉಂಟಾದ ಹಾನಿ ಬಗ್ಗೆ ಲೋಕೋಪಯೋಗಿ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ನಾಲ್ಕು ತಿಂಗಳು ಸುರಿದ ಧಾರಾಕಾರ ಮಳೆಯಿಂದ ರಸ್ತೆ, ಸೇತುವೆ, ಶಾಲಾ ಹಾಗೂ […]

ಸಿಂಕೋನ ಅಂಗನವಾಡಿ ಕೇಂದ್ರದಲ್ಲಿ ಪೋಷಣ್‌ ಮಾಸಾಚರಣೆ – ಸೀಮಂತ ಕಾರ್ಯಕ್ರಮ

ಮಡಿಕೇರಿ : ಪೋಷನ್ ಮಾಸಾಚರಣೆ ಅಂಗವಾಗಿ ಸಿಂಕೋನ ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ಕಾರ್ಯಕ್ರಮ ನೆರವೇರಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, ಪೋಷನ್ ಆಚರಣೆಯ ಉದ್ದೇಶ, ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಅತಿಯಾದ ತೂಕ ನಿಯಂತ್ರಣ, ಪ್ರಾಥಮಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದ ಬಗ್ಗೆ, ತೂಕ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅನ್ನಪ್ರಾಶನ ಮತ್ತು […]

ಎನ್ಎಸ್ಎಸ್‌ಗೆ ಸಾಮಾನ್ಯ ವ್ಯಕ್ತಿತ್ವವನ್ನು ವಿಶೇಷ ವ್ಯಕ್ತಿತ್ವವನ್ನಾಗಿ ಮಾರ್ಪಡಿಸುವ ಶಕ್ತಿ ಇದೆ – ಡಾ.ಕೆ.ಸಿ. ದಯಾನಂದ

ವೀರಾಜಪೇಟೆ(Virajpet) : ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನಮಾನ ಪಡೆಯುವುದರೊಂದಿಗೆ ಸಹಕಾರ ಮನೋಭಾವನೆ ಬೆಳೆಸಲು ಎನ್.ಎಸ್.ಎಸ್(NSS) ಸಹಕಾರಿ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕೊಡಗು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ನೋಡಲ್ ಅಧಿಕಾರಿ ಡಾ.ಕೆ.ಸಿ. ದಯಾನಂದ ಅಭಿಪ್ರಾಯಪಟ್ಟರು. ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಮಂಗಳವಾರ ನಡೆದ ಎನ್.ಎಸ್.ಎಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬೆಳೆಸುವುದರೊಂದಿಗೆ ಸಮಸ್ಯೆ ಬಗೆಹರಿಸಲು ಹೇಗೆ ಒಗ್ಗೂಡಬೇಕು […]

ಏನಿದು ಮೆದುಳು ತಿನ್ನುವ ಅಮೀಬಾ – ಡಾ. ಕೆ.ಬಿ. ಸೂರ್ಯಕುಮಾರ್‌ ಅವರ ಸಕಾಲಿಕ ಬರಹ

ಕೇರಳದಲ್ಲಿ ಕೆಲವರಿಗೆ ಮೆದುಳಿನಲ್ಲಿ ಅಮೀಬಾ ಸೋಂಕು ಪತ್ತೆಯಾಗಿದ್ದು, ಜನ ಆತಂಕಕ್ಕೀಡಾಗುಂತೆ ಮಾಡಿದೆ. ಇದರ ಆತಂಕ ನೆರೆಯ ರಾಜ್ಯಗಳಲ್ಲೂ ಮೂಡಿದೆ. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಕೆ.ಬಿ. ಸೂರ್ಯಕುಮಾರ್‌ ಅವರು ಎರಡು ವರ್ಷದ ಹಿಂದೆ ಬರೆದ ಲೇಖನ ಸಕಾಲಿಕವಾಗಿದೆ. ಈ ಲೇಖನ ನಿಮ್ಮ ಮಾಹಿತಿಗಾಗಿ ಮಾತ್ರ. ಇದು ಅಪರೂಪದ ರೋಗವಾಗಿದ್ದು ಯಾವುದೋ ಒಂದು ಲಕ್ಷಣ ಕಂಡ ಕೂಡಲೇ ತನಗೆ ಆ ರೋಗವಿದೆ ಎಂದು ತಪ್ಪಾಗಿ ಯಾರೂ ತಿಳಿದುಕೊಳ್ಳಬೇಡಿ!. ಇತ್ತೀಚಿಗೆ ಕೇರಳದಿಂದ ಬಂದ ಒಂದು ವರದಿಯ ಪ್ರಕಾರ ಕಲುಷಿತ […]

ಗಬ್ಬದ ಹಸು ಹತ್ಯೆ – ಮೂವರ ಸದಸ್ಯತ್ವ ರದ್ದುಪಡಿಸಿದ ಜಮಾಅತ್‌ – ವಹಿವಾಟು ನಡೆಸದಂತೆ ಇತರೆ ಸದಸ್ಯರಿಗೆ ಎಚ್ಚರಿಕೆ..!

ಮಡಿಕೇರಿ : ವಿರಾಜಪೇಟೆ ಬಳಿಯ ಮೈತಾಡಿ ಗ್ರಾಮದಲ್ಲಿ ಗಬ್ಬದ ಹಸು ಹತ್ಯೆಗೈದ ಪ್ರಕರಣ ಸಂಬಂಧ ಬಂಧಿತರಾಗಿರುವ ಮೂವರನ್ನು ಕೊಂಡಂಗೇರಿ ಜಮಾ-ಅತ್‌ ಸದಸ್ಯತ್ವದಿಂದ ಹೊರಹಾಕಲಾಗಿದೆ. ಕೊಂಡಂಗೇರಿ ನಿವಾಸಿಗಳಾದ ಮೊಹಮ್ಮದ್ ಆಶಿಕ್(22), ಶಾಹಿದ್(25), ಹ್ಯಾರೀಸ್ (34) ಗೋಹತ್ಯೆ ಕೇಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ಬೆಳವಣಿಗೆ ಬಳಿಕ ಪ್ರಕಟಣೆ ಹೊರಡಿಸಿರುವ ಸುನ್ನಿ ಮುಸ್ಲಿಂ ಜಮಾಅತ್‌, ಇವರು ಶರೀಅರ್‌ಗೆ ವಿರುದ್ಧವಾದ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರೊಂದಿಗೆ ಜಮಾಅತ್‌ನ ಸದಸ್ಯರು ಯಾವುದೇ ಚಟುವಟಿಕೆ ನಡೆಸುಂತಿಲ್ಲ. ಯಾರಾದರು ಈ ಮೂವರೊಂದಿಗೆ ಗುರುತಿಸಿಕೊಂಡಲ್ಲ, ಯಾವುದೇ ವಹಿವಾಟು ನಡೆಸಿದಲ್ಲಿ, ಅಂಥವರ ವಿರುದ್ಧವೂ […]

ಬಿಜೆಪಿ ಮುಖಂಡ ಕೆದಂಬಾಡಿ ಎಸ್.ಪ್ರಕಾಶ್ ನಿಧನ

ಮಡಿಕೇರಿ : ಬಿಜೆಪಿಯ ಹಿರಿಯ ಮುಖಂಡ ಕೆದಂಬಾಡಿ ಎಸ್.ಪ್ರಕಾಶ್(76) ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ನಾಳೆ ನಡೆಯಲಿದೆ. ಇವರು ನಗರ ಬಿಜೆಪಿ ಅಧ್ಯಕ್ಷರಾಗಿ, ದೇಚೂರು ದೇವಾಲಯದ ಸ್ಥಾಪಕ ಅಧ್ಯಕ್ಷರಾಗಿ, ಜನತಾ ಬಜಾರ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಾಲಭವನದ ಅಧ್ಯಕ್ಷರಾಗಿದ್ದರು.