ಕನ್ನಡ ಪಯಸ್ವಿನಿ ಅಚೀವ್ಮೆಂಟ್‌ ಅವಾರ್ಡ್ 2026- ಯುವ ಬಂಟ್ಸ್ ಅಸೋಸಿಯೇಷನ್‌ನಿಂದ ಸನ್ಮಾನ..!

Share this post :

ಮಡಿಕೇರಿ : ಕನ್ನಡ ಭವನದ ವತಿಯಿಂದ ನೀಡಲಾಗುವ ʼಕನ್ನಡ ಪಯಸ್ವಿನಿ ಅಚೀವ್ಮೆಂಟ್‌ ಅವಾರ್ಡ್-2026ʼಗೆ ಭಾಜನರಾಗಿರುವ ಸಾಧಕರನ್ನು ಕೊಡಗು ಜಿಲ್ಲಾ ಯುವ ಬಂಟ್ಸ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇತ್ತೀಚೆಗೆ ಮಡಿಕೇರಿಯ ಹೋಟೆಲ್‌ ಸಮುದ್ರ ಸಭಾಂಗಣದಲ್ಲಿ ಜರುಗಿದ ಕೊಡಗು ಜಿಲ್ಲಾ ಬಂಟರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿಗೆ ಭಾಜನರಾದ ಉಪನ್ಯಾಸಕಿ ಪ್ರತಿಮಾ ಹರೀಶ್‌ ರೈ, ಪತ್ರಕರ್ತ ಕಿಶೋರ್‌ ರೈ ಕತ್ತಲೆಕಾಡು, ನಿರೂಪಕಿ ಹರ್ಷಿತಾ ಶೆಟ್ಟಿ ಅವರನ್ನು ಅತಿಥಿಗಳು ಸನ್ಮಾನಿಸಿ, ಅಭಿನಂದಿಸಿದರು. ಜಿಲ್ಲೆಯ ಹೆಸರಾಂತ ಚಿತ್ರ ಕಲಾವಿದ ಬಿ.ಕೆ. ಗಣೇಶ್‌ ರೈ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್‌ ರೈ, ಕಾರ್ಯದರ್ಶಿ ರವೀಂದ್ರ ವಿ.ರೈ, ಖಜಾಂಚಿ ರತ್ನಾಕರ ರೈ, ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ಯುವ ಬಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಸದಾನಂದ ರೈ ಹಾಗೂ ಇನ್ನಿತರರು ಈ ಸಂದರ್ಭ ಇದ್ದರು.
ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮದ ಪ್ರಯುಕ್ತ ನಾಡಿನ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಜ.18ರಂದು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

coorg buzz
coorg buzz