ಮಡಿಕೇರಿ : ತಾಲೂಕಿನ ಸಾಧಕ ಅಂಗನವಾಡಿ ಕಾರ್ಯಕರ್ತೆಯರಿಗೆ ರೆಡ್‌ಕ್ರಾಸ್ ಕೊಡಗು ಘಟಕ ವತಿಯಿಂದ ಸನ್ಮಾನ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.
ನಗರದ ರೆಡ್‌ಕ್ರಾಸ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಉದ್ಘಾಟಿಸಿದರು. ಶಿಕ್ಷಕರಿಯರೆಂದರೆ ಮಕ್ಕಳ ಪಾಲಿನ ದೇವರಂತೆ. ಮಕ್ಕಳನ್ನು ಪ್ರೀತಿಯಿಂದ ಬೆಳೆಸುವಂತೆ ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಸಮಾಜದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯವಾದದ್ದು. ಪುಟ್ಟ ಮಕ್ಕಳ ಏಳಿಕೆಯಲ್ಲಿ ಮಹತ್ತರ ಪಾತ್ರವನ್ನು ಅವರು ನಿರ್ವಹಿಸುತ್ತಾರೆ ಎಂದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಮತ್ತು ಸವಾಲಿನ ಬಗ್ಗೆ ವಿವರಿಸಿದರು. ಸರ್ಕಾರ ಹಲವು ಕೆಲಸಗಳನ್ನು ಕಾರ್ಯಕರ್ತೆಯರಿಗೆ ನೀಡುತ್ತದೆ. ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹಲವು ಅಂಗನವಾಡಿಗಳ ಏಳಿಗೆಗೆ ಸಂಘಸಂಸ್ಥೆಗಳು ಕೂಡಾ ಉತ್ತಮ ನೆರವು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೆಡ್‌ಕ್ರಾಸ್ ಕೊಡಗು ಸಭಾಪತಿ ಬಿ.ಕೆ. ರವೀಂದ್ರ ರೈ, ಉಪಾಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿದರು.
ಸನ್ಮಾನಿತ ಕಾರ್ಯಕರ್ತೆಯರು
ಮರಗೋಡು ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ (21 ವರ್ಷ ಸೇವೆ), ಬಾಣೆಮೊಟ್ಟೆ ಅಂಗನವಾಡಿ ಕೇಂದ್ರದ ಟಿ.ಇ. ಅಮುದ (25 ವರ್ಷ ಸೇವೆ), ತಾವೂರು ಅಂಗನವಾಡಿ ಕೇಂದ್ರದ ಹೆಚ್.ಆರ್. ಹೇಮಾವತಿ (26 ವರ್ಷ ಸೇವೆ), ಕೊಚ್ಚಿ ಅಂಗನವಾಡಿ ಕೇಂದ್ರದ ಕೆ.ಯಶೋಧ (32 ವರ್ಷ ಸೇವೆ), ಮಡಿಕೇರಿ ಭಗವತಿ ನಗರ ಅಂಗನವಾಡಿ ಕೇಂದ್ರದ ಕೆ.ಯು. ಶಶಿ (33 ವರ್ಷ ಸೇವೆ), ಹೂಕಾಡು ಪೈಸಾರಿ ಅಂಗನವಾಡಿ ಕೇಂದ್ರದ ಜಯಶ್ರೀ ರೈ (8 ವರ್ಷ ಸೇವೆ), ಪರಂಬು ಪೈಸಾರಿ ಅಂಗನವಾಡಿ ಕೇಂದ್ರದ ಎಂ.ಕೆ. ಭವಾನಿ (35 ವರ್ಷ ಸೇವೆ), ವಣಚಲು ಅಂಗನವಾಡಿ ಕೇಂದ್ರದ ಪಿ.ಆರ್. ಧರಣಿ (6 ವರ್ಷಗಳ ಸೇವೆ), ಬಿಳಿಗೇರಿ ಅಂಗನವಾಡಿ ಕೇಂದ್ರದ ಎಚ್.ಪಿ. ದೇವಕಿ (36 ವರ್ಷಗಳ ಸೇವೆ), ಅಯ್ಯಂಗೇರಿ ಅಂಗನವಾಡಿ ಕೇಂದ್ರದ ಜಮೀಲಾ ಐ.ಎ.(30 ವರ್ಷ ಸೇವೆ), ಐವತ್ತೋಕ್ಲು ಅಂಗನವಾಡಿ ಕೇಂದ್ರದ ಎ.ಟಿ. ಇಂದಿರಾ(37 ವರ್ಷ ಸೇವೆ), ಅರಪಟ್ಟು ಪೈಸಾರಿ ಅಂಗನವಾಡಿಯ ಟಿ.ಕೆ. ಕವಿತಾ (31 ವರ್ಷ ಸೇವೆ), ಚಟ್ಟೆಕಾಡು ಅಂಗನವಾಡಿ ಕೇಂದ್ರದ ಹರಿಣಿ ಟಿ. (26 ವರ್ಷ ಸೇವೆ), ಜೋಡುಪಾಲ ಅಂಗನವಾಡಿ ಕೇಂದ್ರದ ಎಂ.ಮನೋಹರಿ (34 ವರ್ಷ ಸೇವೆ), ಮಡಿಕೇರಿ ರಾಜೇಶ್ವರಿ ನಗರದ ಅಂಗನವಾಡಿಯ ಕೆ.ಸಿ. ಇಂದಿರಾ (20 ವರ್ಷ ಸೇವೆ) ಇವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.



