ಯುವನಿಧಿ ಯೋಜನೆ: ಯಾರೆಲ್ಲಾ ಅರ್ಹ? ಅರ್ಜಿ ಸಲ್ಲಿಸೋದು ಹೇಗೆ?

Yuvanidhi Yojana

Share this post :

ಮಡಿಕೇರಿ:- ಯುವನಿಧಿ ಯೋಜನೆಯಡಿ (Yuvanidhi Yojana) ಅರ್ಜಿ ಸಲ್ಲಿಸದ ಅರ್ಹರ ಅನುಕೂಲಕ್ಕಾಗಿ ಜುಲೈ, 07 ರಿಂದ ಆಗಸ್ಟ್, 07 ರವರೆಗೆ ವಿಶೇಷ ನೋಂದಣಿ ಅಭಿಯಾನ (Campaign) ನಡೆಯಲಿದೆ. 2024-25 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಯುವನಿಧಿ ಯೋಜನೆಯ ಫಲಾನುಭವಿಗಳು ತ್ರೈಮಾಸಿಕ ಆನ್‍ಲೈನ್‍ನಲ್ಲಿ ಲಾಗಿನ್ ಆಗಿ ಸ್ವ ಘೋಷಣೆ ನೀಡಬೇಕು.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005997154 ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಡಿಕೇರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ ಅವರು ತಿಳಿಸಿದ್ದಾರೆ.

coorg buzz
coorg buzz