ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಮೊಂಬತ್ತಿ ಹಿಡಿದು ಹಿಂದೂ ಮಲಯಾಳಿ ಸಮಾಜ ಪ್ರತಿಭಟನೆ

Hindu Malayali

Share this post :

coorg buzz

ವಿರಾಜಪೇಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಉಗ್ರರು ನಡೆಸಿದ ಪೈಶಾಚಿಕ ಕ್ರೌರ್ಯವನ್ನು ಖಂಡಿಸಿ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ, ಹಿಂದೂ ಮಲಯಾಳಿ (Hindu Malayali) ಅಸೋಶಿಯೇಷನ್, ಹಿಂದೂ ಮಲಯಾಳಿ ಅಸೋಶಿಯೇಷನ್ ಮಹಿಳಾ ಘಟಕ ವಿರಾಜಪೇಟೆ ಮತ್ತು ಎಸ್.ಎನ್.ಡಿ.ಪಿ ವಿರಾಜಪೇಟೆ ಶಾಖೆಯ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು

ಶ್ರೀ ಮುತ್ತಪ್ಪ ಮಲಯಾಳಿ ಸಮಾಜ ಅದ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ, ಉಗ್ರರ ಧಾಳಿಯನ್ನು ನಾವು ಖಂಡಿಸುತ್ತೇವೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ಜಾರಿಗೆ ಮಾಡಿರುವುದನ್ನು ಸಹಿಸಲಾರದ ಪಾಕಿಸ್ತಾನವು ಪ್ರತಿಕಾರವಾಗಿ ಉಗ್ರರಿಂದ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಉಗ್ರರ ಧಮನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಿಂದಿರುವ ಶಕ್ತಿಗಳ ವಿರುದ್ದ ಹೋರಾಡಲು ಪ್ರಧಾನ ಮಂತ್ರಿಗೆ ಮತ್ತು ರಕ್ಷಣಾ ಸೇನೆಪೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

ಹಿಂದೂ ಮಲಯಾಳಿ ಅಸೋಶಿಯೇಷನ್ ವಿರಾಜಪೇಟೆ ಅದ್ಯಕ್ಷರಾದ ಎ. ವಿನೂಪ್ ಕುಮಾರ್ ಅವರು ಮಾತನಾಡಿ ಪಾಕಿಸ್ತಾನದ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿರುವ ಕೃತ್ಯ ರಾಕ್ಷಸ ಪ್ರವೃತ್ತಿಯಾಗಿದ್ದು, ಪ್ರವಾಸಿಗರನ್ನು ವಿವಸ್ತೃಗೊಳಿಸಿ ಹಿಂದೂ ಎನ್ನುವ ಕಾರಣಕ್ಕೆ ಭಿಬಿತ್ಸವಾಗಿ ಹತ್ಯೆ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಅಂತಾರಿಕ ಭಿನ್ನಭಿಪ್ರಾಯಗಳಿವೆ ಎಂದು ಹೇಳಿಕೆ ನೀಡುತ್ತಿರುವ ರಾಜಕಾರಣಿಗಳ ಹೇಳಿಕೆಯನ್ನು ನಿಲ್ಲಬೇಕು. ನಾವು ಭಾರತೀಯರು ಎನ್ನುವ ಮನೋಭಾವ ಬೆಳಸಿಕೊಂಡು ಕೇಂದ್ರ ಸರ್ಕಾರದೋಂದಿಗೆ ಎಲ್ಲಾ ಸಮೂದಾಯಗಳು ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಸ್.ಎನ್.ಡಿ.ಪಿ. ವಿರಾಜಪೇಟೆ ಶಾಖೆಯ ಅದ್ಯಕ್ಷರಾದ ಟಿ.ಎನ್. ನಾರಾಯಣ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜನಾಂಗ ಬಾಂದವರು ಇದ್ದರು.