ಕುಶಾಲನಗರದಲ್ಲಿ ವಿದ್ಯುತ್ ತಗುಲಿ ವ್ಯಕ್ತಿ ದುರ್ಮರಣ

electric wire

Share this post :

coorg buzz

ನೆಲಕ್ಕೆ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿ (Electric wire) ತುಳಿದು ವ್ಯಕ್ಯಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಕುಶಾಲನಗರದ ಬೈಚನಹಳ್ಳಿಯಲ್ಲಿ ನಡೆದಿದೆ. ಮೃತ ದುರ್ದೈವಿ ಕುಶಾಲನಗರದ ಕಾವೇರಿ ಬಡಾವಣೆ ನಿವಾಸಿ ಬಿ.ಬಿ.ಮೋಹನ್ (63). ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕೆಇಬಿ ಇಂಜಿನಿಯರ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆಇಬಿ ಇಂಜಿನಿಯರ್ ಮಂಜುನಾಥ್ ಮೂರು ತಿಂಗಳೊಳಗೆ ಪರಿಹಾರದ ಭರವಸೆ ನೀಡಿದ್ದಾರೆಂದು ವರದಿಯಾಗಿದೆ.