ಸೆಕೆಂಡ್ ಹ್ಯಾಂಡ್‌‌ ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!

Smartphone

Share this post :

ಇತ್ತೀಚೆಗೆ ಹೊಸ ಹೊಸ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬರುತ್ತಿದೆ. ಆದರೆ ಈ ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸಲು ಕೆಲವರಿಗೆ ಬಜೆಟ್ ಇರಲ್ಲ. ಸ್ಮಾರ್ಟ್‌ಫೋನ್‌ಗಳ ಬೆಲೆಗಳು ಏರಿಕೆಯಾಗುವುದರಿಂದ ಜನರು ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಕೆಲವು ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

* ನೀವು ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸಿದಾಗ, ಅರ್ಧ ಬೆಲೆಗೆ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಆತುರಪಡಬೇಡಿ. ಎಲ್ಲಾ ಟೆಕ್ನಿಕಲ್‌ ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

* ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ನೊಂದಿಗೆ ನಿಮಗೆ ಸರ್ವೀಸ್‌ ಅಥವಾ ಗ್ಯಾರಂಟಿ ಸಿಗಲ್ಲ. ಫೋನ್‌ನಲ್ಲಿ ಸಮಸ್ಯೆ ಇದ್ದರೆ, ಅದನ್ನು ದುರಸ್ತಿ ಮಾಡಲು ನೀವೇ ಹಣ ಖರ್ಚು ಮಾಡಬೇಕಾಗುತ್ತದೆ. ನೀವು ಹೊಸ ಫೋನ್ ಖರೀದಿಸಿದಾಗ, ನಿಮಗೆ ಕಂಪನಿಯಿಂದ ಗ್ಯಾರಂಟಿ ಮತ್ತು ಸರ್ವೀಸ್‌ ಸೇವೆ ಸಿಗುತ್ತದೆ. ಆದರೆ ಇದು ಸೆಕೆಂಡ್ ಹ್ಯಾಂಡ್ ಫೋನ್‌ಗಳಲ್ಲಿ ಲಭ್ಯವಿರಲ್ಲ.

* ಹಳೆಯ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬ್ಯಾಟರಿ ಸಾಮರ್ಥ್ಯವಿರುತ್ತದೆ. ಇದು ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಹಳೆಯ ಫೋನ್‌ನ ಪ್ರೊಸೆಸರ್ ಮತ್ತು ಕ್ಯಾಮೆರಾ ಕಾರ್ಯಕ್ಷಮತೆ ಹೊಸ ಸ್ಮಾರ್ಟ್‌ಫೋನ್‌ಗಿಂತ ಕಡಿಮೆಯಿರಬಹುದು.

* ಸೆಕೆಂಡ್ ಹ್ಯಾಂಡ್ ಫೋನ್‌ಗಳಲ್ಲಿ ಗೀರುಗಳು, ಡ್ಯಾಮೇಜ್‌‌ಗಳು ಮತ್ತು ಇತರ ಸಮಸ್ಯೆಗಳು ಇರಬಹುದು. ಈ ವಿಷಯಗಳನ್ನು ಒಂದೇ ಬಾರಿಗೆ ಕಂಡುಹಿಡಿಯಲಾಗುವುದಿಲ್ಲ. ಅದನ್ನು ಬಳಸಿದ ನಂತರವೇ ನಿಮಗೆ ತಿಳಿಯುತ್ತದೆ. ಇದು ಖರೀದಿಯ ನಂತರ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು.

* ಹಳೆಯ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್‌‌ಗಳು ಲಭ್ಯವಿರಲ್ಲ. ಇದರಿಂದಾಗಿ, ನೀವು ಹೊಸ ವೈಶಿಷ್ಟ್ಯಗಳು ಮತ್ತು ಸೆಕ್ಯುರಿಟಿ ಸಿಸ್ಟಮ್‌‌ನಂತಹ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದು ಫೋನ್ ಕ್ರಮೇಣ ನಿಧಾನವಾಗಲು ಕಾರಣವಾಗಬಹುದು ಮತ್ತು ನಿಮ್ಮ ಡೇಟಾ ಕೂಡ ಸುರಕ್ಷಿತವಾಗಿರಲ್ಲ.

* ಫೋನ್ ಸ್ಕ್ರೀನ್, ಬ್ಯಾಕ್‌ ಪ್ಯಾನೆಲ್ ಮತ್ತು ಇತರ ಭಾಗಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಫೋನ್‌ಗೆ ಏನಾದರೂ ದೊಡ್ಡ ಹಾನಿಯಾಗಿದ್ದರೆ, ಅದನ್ನು ಖರೀದಿಸುವುದನ್ನು ತಪ್ಪಿಸಿ. ಬ್ಯಾಟರಿ ಸ್ಥಿತಿಯನ್ನು ಪರಿಶೀಲಿಸಿ. ಬ್ಯಾಟರಿ ತುಂಬಾ ಬೇಗನೆ ಖಾಲಿಯಾದರೆ, ನೀವು ಬ್ಯಾಟರಿಯನ್ನು ಬದಲಾಯಿಸಬೇಕಾಗುತ್ತದೆ.

* ಹೆಚ್ಚುವರಿಯಾಗಿ, ಫೋನ್‌ನಲ್ಲಿ ಇತ್ತೀಚಿನ ಸಾಫ್ಟ್‌ವೇರ್ ಇದೆಯೇ ಮತ್ತು ಎಲ್ಲಾ ಫೀಚರ್‌‌ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಚೆಕ್ ಮಾಡಿ. ಫೋನ್‌ನ IMEI ಸಂಖ್ಯೆಯನ್ನು ಪರಿಶೀಲಿಸಿ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಖರೀದಿಸಿ. ಆನ್‌ಲೈನ್ ಅಥವಾ ಆಫ್‌ಲೈನ್ ಅಂಗಡಿಯಿಂದ ಫೋನ್ ಖರೀದಿಸುವಾಗ, ಅಂಗಡಿಯ ರೇಟಿಂಗ್‌ಗಳು ಮತ್ತು ರಿವ್ಯೂ ಅನ್ನು ನೋಡಿ.

coorg buzz
coorg buzz