ವಿಜ್ಞಾನ ಮತ್ತು ಸೃಜನಾತ್ಮಕತೆಯ ಕಲೆ ಛಾಯಾಗ್ರಹಣ – ಹಿರಿಯ ಛಾಯಾಗ್ರಾಹಕ ರವಿ ಪೊಸವಣಿಕೆ

ಮಡಿಕೇರಿ : ಛಾಯಾಚಿತ್ರ ಎನ್ನುವುದು ಒಂದು ಭಾಷೆ. ಇದು ಸಾವಿರ ಪದಗಳಿಗೆ ಸಮವಾಗಿದ್ದು, ಒಂದು ಚಿತ್ರದ ಮೂಲಕ ಕಥೆಯನ್ನು ಹೇಳಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆಯ ಮಂಗಳೂರು ಆವೃತ್ತಿಯ ಹಿರಿಯ ಛಾಯಾಚಿತ್ರ ಪತ್ರಕರ್ತ ರವಿ ಪೊಸವಣಿಕೆ ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಪತ್ರಿಕೋದ್ಯಮ ವಿಭಾಗ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿಚಾರ ಸಂಕಿರಣ ಕೊಠಡಿಯಲ್ಲಿ ನಡೆದ ಛಾಯಾಚಿತ್ರ ಪತ್ರಿಕೋದ್ಯಮದ ವ್ಯಾಪ್ತಿ […]
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಮಡಿಕೇರಿ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ 2025-26 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯ ಉದ್ದೇಶ; ಈ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ನೇರವಾಗಿ ಸಾಲ- ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿದೆ. ಹಲವು ವೃತ್ತಿಗಳಾದ ಹಸು ಸಾಕಾಣಿಕೆ, ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು […]
ಹಾವುಗಳನ್ನು ಹಿಡಿದು ಫೋಟೋ ಶೂಟ್ ಮಾಡಿದರೆ ಕೇಸ್ ಬೀಳುತ್ತೆ ಎಚ್ಚರ..!

ಬೆಂಗಳೂರು : ಇತ್ತೀಚಿನ ದಿನದಲ್ಲಿ ಉರಗ ರಕ್ಷಣೆ ಹೆಸರಿನಲ್ಲಿ ಹಾವುಗಳಿಗೆ ಹಿಂಸೆ ನೀಡುತ್ತಿರುವುದು ಹಾಗೂ ಅವುಗಳನ್ನು ಬಳಸಿಕೊಂಡು ಫೋಟೋಶೂಟ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೊನೆಗೂ ಎಚ್ಚೆತ್ತಿದೆ. ಹಾವು ಹಾಗೂ ಅವುಗಳ ಮೊಟ್ಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು, ವಿಷ ತೆಗೆಯುವುದು, ಅನುಮತಿ ಇಲ್ಲದೆ ಅರಣ್ಯ ಪ್ರವೇಶಿಸಿದ ಸಂಶೋಧನೆ ಮಾಡುವವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ಕೊಟ್ಟಿದ್ದಾರೆ. ರಾಜ್ಯದ ಮಲೆನಾಡು ಭಾಗದಲ್ಲಿ ಅನಧಿಕೃತವಾಗಿ ಕಾಳಿಂಗ […]
ಏನಿದು ಮೆದುಳು ತಿನ್ನುವ ಅಮೀಬಾ – ಡಾ. ಕೆ.ಬಿ. ಸೂರ್ಯಕುಮಾರ್ ಅವರ ಸಕಾಲಿಕ ಬರಹ

ಕೇರಳದಲ್ಲಿ ಕೆಲವರಿಗೆ ಮೆದುಳಿನಲ್ಲಿ ಅಮೀಬಾ ಸೋಂಕು ಪತ್ತೆಯಾಗಿದ್ದು, ಜನ ಆತಂಕಕ್ಕೀಡಾಗುಂತೆ ಮಾಡಿದೆ. ಇದರ ಆತಂಕ ನೆರೆಯ ರಾಜ್ಯಗಳಲ್ಲೂ ಮೂಡಿದೆ. ಈ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ. ಕೆ.ಬಿ. ಸೂರ್ಯಕುಮಾರ್ ಅವರು ಎರಡು ವರ್ಷದ ಹಿಂದೆ ಬರೆದ ಲೇಖನ ಸಕಾಲಿಕವಾಗಿದೆ. ಈ ಲೇಖನ ನಿಮ್ಮ ಮಾಹಿತಿಗಾಗಿ ಮಾತ್ರ. ಇದು ಅಪರೂಪದ ರೋಗವಾಗಿದ್ದು ಯಾವುದೋ ಒಂದು ಲಕ್ಷಣ ಕಂಡ ಕೂಡಲೇ ತನಗೆ ಆ ರೋಗವಿದೆ ಎಂದು ತಪ್ಪಾಗಿ ಯಾರೂ ತಿಳಿದುಕೊಳ್ಳಬೇಡಿ!. ಇತ್ತೀಚಿಗೆ ಕೇರಳದಿಂದ ಬಂದ ಒಂದು ವರದಿಯ ಪ್ರಕಾರ ಕಲುಷಿತ […]
ಪಂಚ ಗ್ಯಾರಂಟಿ ಯೋಜನೆಗೆ ಈವರೆಗೆ ಖರ್ಚಾಗಿದ್ದು 97,813 ಕೋಟಿ ರೂ..! – ಯಾವ್ಯಾವ ಯೋಜನೆಗೆ ಎಷ್ಟೆಷ್ಟು ಖರ್ಚಾಯ್ತು? ಇಲ್ಲಿದೆ ಮಾಹಿತಿ

ಬೆಂಗಳೂರು : ಪಂಚ ಗ್ಯಾರಂಟಿ ಯೋಜನೆ ಅಡಿ ಇದುವರೆಗೆ ರೂ. 97,813 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.24ಕೋಟಿ ಫಲಾನುಭವಿಗಳಿಗೆ ಒಟ್ಟು ರೂ.50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನುಭವಿಗಳಿಗೆ ರೂ. 18,139 ಕೋಟಿ, ಯುವನಿಧಿ ಯೋಜನೆಯಡಿ 2.55ಲಕ್ಷ ಫಲಾನುಭವಿಗಳಿಗೆ ರೂ.623 ಕೋಟಿ, ಶಕ್ತಿ ಯೋಜನೆಯಡಿ 544ಕೋಟಿ ಫಲಾನುಭವಿಗಳಿಗೆ ರೂ.13,903ಕೋಟಿ ಹಾಗೂ ಅನ್ನಭಾಗ್ಯ ಯೋಜನೆಯಡಿ 72.02ಕೋಟಿ ಫಲಾನುಭವಿಗಳಿಗೆ ಒಟ್ಟು 11,821.17 ಕೋಟಿ ವೆಚ್ಚ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ನಡೆದ […]
ಮೈಸೂರು ದಸರಾ ಉದ್ಘಾಟನೆ ವಿವಾದ : ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ವಿರೋಧಿಸುತ್ತಿಲ್ಲ – ಮಾಜಿ ಸಂಸದ ಪ್ರತಾಪ್ ಸಿಂಹ

ಮೈಸೂರು : ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ದಸರಾ ಉದ್ಘಾಟನೆಗೆ ವಿರೋಧ ಪಡಿಸುತ್ತಿಲ್ಲ. ಹಿಂದುಗಳ ಅರಿಶಿಣ ಕುಂಕುಮದ ಕುರಿತಾಗಿನ ಅವರ ನಿಲುವಿನ ಬಗ್ಗೆ ನಮ್ಮ ಆಕ್ಷೇಪ ಇರುವುದು ಅಂತ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಗೆದ್ದಾಗ ನಾವೆಲ್ಲ ಅವರನ್ನು ಅಭಿನಂದಿಸಿದ್ದೇವೆ. ಆದರೆ ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದು, ವಿರೋಧವನ್ನೂ ವ್ಯಕ್ತಪಡಿಸಿದ್ದೇವೆ. ಅವರಿಗೆ ಹಿಂದುಗಳ ಆಚರಣೆ, […]
ಬಾನು ಮುಷ್ತಾಕ್ ದಸರಾ ಉದ್ಘಾಟಿಸದಂತೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರತಾಪ್ ಸಿಂಹ..!

ಮೈಸೂರು : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ವಿಚಾರವಾಗಿ ನಡೆಯುತ್ತಿರುವ ಪರ-ವಿರೋಧ ವಿಚಾರ ಈಗ ನ್ಯಾಯಾಲಯ ಮೆಟ್ಟಿಲೇರಿದೆ. ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುತ್ತಾರೆಂದು ಸರ್ಕಾರ ಹೇಳಿದಾಗಿನಿಂದ ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಇದೀಗ ಅವರಿಂದ ದಸರಾ ಉದ್ಘಾಟನೆಗೆ ತಡೆ ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ದಿನದ ಹಿಂದೆ ಸರ್ಕಾರ ಹಾಸನದ ಬಾನು ಮುಷ್ತಾಕ್ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿತ್ತು. […]
ಡಾ. ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಿದ ಹಿರಿಯ ನಟಿಯರು..!

ಬೆಂಗಳೂರು : ಸಾಹಸ ಸಿಂಹ ಡಾ. ವಿಷ್ಣುವರ್ಧನ್(Dr VIshnuvardhan) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಆಗ್ರಹ ಕೇಳಿಬರುತ್ತಿದೆ. ಕನ್ನಡ ಚಲನಚಿತ್ರ ರಂಗದ ಹಿರಿಯ ನಟಿಯರಾದ ಜಯಮಾಲ, ಶ್ರತಿ ಮತ್ತು ಮಾಳವಿಕ ಅವಿನಾಶ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು. ಜೊತೆಗೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಸ್ಥಳಕ್ಕೆ ನಾಮಕರಣ ಮಾಡುವಂತೆಯೂ ಮನವಿ ಮಾಡಿದರು.
26 ವರ್ಷದ ಪ್ರೇಯಸಿಯನ್ನು ಬೆಂಕಿ ಹಚ್ಚಿ ಕೊಂದ 52 ವರ್ಷದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು..!

ಬೆಂಗಳೂರು : ತನ್ನಿಂದ ದೂರವಾಗಲು ಮುಂದಾದ 26 ವರ್ಷದ ಪ್ರೇಯಸಿಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಿರರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 52 ವರ್ಷದ ವಿಠ್ಠಲ ಎಂಬಾತನೇ ಪ್ರೇಯಸಿಯನ್ನು ಹತ್ಯೆಗೈದ ವ್ಯಕ್ತಿ. ಇಬ್ಬರು ಕೂಡಾ ಆನೇಕಲ್ ಮಳೆನಲ್ಲಸಂದ್ರ ನಿವಾಸಿಗಳಾಗಿದ್ದು, ವನಜಾಕ್ಷಿ ವಿಧವೆಯಾಗಿದ್ದು, ವಿಠ್ಠಲನ ಪತ್ನಿಯೂ ತೀರಿಕೊಂಡಿದ್ದಳು. ಇಬ್ಬರು ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ವರ್ಷದಿಂದ ಇಬ್ಬರು ಸಹಜೀವನ ನಡೆಸುತ್ತಿದ್ದರು ಅಂತ ಹೇಳಲಾಗಿದೆ. ಹೀಗಿರುವಾಗ ವನಜಾಕ್ಷಿ ಬೇರೊಬ್ಬನ ಜೊತೆ ಸ್ನೇಹ ಬೆಳೆಸಿ ಈತನಿಂದ ದೂರವಾಗಲು ಮುಂದಾಗಿದ್ದಾಳೆ. ಈ ವಿಷಯವಾಗಿ ಇಬ್ಬರ […]
ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ದೊಡ್ಡ ಸಾಧನೆ : ಸಿ.ಎಂ.ಸಿದ್ದರಾಮಯ್ಯ

ಮೈಸೂರು : ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ ದೊಡ್ಡ ಸಾಧನೆ. ಇದಕ್ಕಾಗಿ ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆ ಅಭಿನಂದನೀಯವಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ (ಆಯಿಷ್) ಮೈಸೂರು ಇವರ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ “ವಜ್ರ ಮಹೋತ್ಸವ ಕಾರ್ಯಕ್ರಮ”ದಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಈಗಾಗಲೇ 10 ಎಕರೆ […]