ಬಸ್‌ಗಳಲ್ಲಿ ಎಲ್ಲಿ ನೋಡಿದ್ರೂ ಮಹಿಳೆಯರೇ… ನಾಲ್ಕು ಜನ ಗಂಡಸ್ರು ಹೋಗೋದು ಕಷ್ಟ – ಗ್ಯಾರಂಟಿ ಯೋಜನೆ ಬಗ್ಗೆ ಆರ್.ವಿ. ದೇಶಪಾಂಡೆ ಲೇವಡಿ..!

ಬೆಂಗಳೂರು( coorgbuzz.com ) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷ ಬಿಜೆಪಿ ಟೀಕೆ ಮಾಡುತ್ತಲೇ ಇದೆ. ಈಗ ಈ ಸಾಲಿಗೆ ಆಡಳಿತ ಪಕ್ಷದ ಶಾಸಕರು ಕೂಡಾ ಕೈಜೋಡಿಸಿದಂತಿದೆ. ಸ್ವಪಕ್ಷೀಯರಿಂದಲೇ ಗ್ಯಾರಂಟಿ ಯೋಜನೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ. ದೇಶಪಾಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ತಮ್ಮದೇ ದಾಟಿಯಲ್ಲಿ ಯೋಜನೆಗಳನ್ನು ವ್ಯಂಗ್ಯವಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ದೇಶಪಾಂಡೆ, ಸರ್ಕಾರ ಜಾರಿಗೆ ತಂದಿರುವ ಯೋಜನೆ ಒಂದಾ ಎರಡಾ… ಉಚಿತ ಬಸ್‌ನಿಂದಾಗಿ ಮಹಿಳೆಯರೇ ಎಲ್ಲಿ ನೋಡಿದ್ರೂ […]
RSS ವಿರುದ್ಧ ಮುಂದುವರೆದ ಕಾಂಗ್ರೆಸ್ಸಿಗರ ಆಕ್ರೋಶ – ಪ್ರಿಯಾಂಕ್ ಖರ್ಗೆ ಹೇಳಿಕೆಗೆ ದಿನೇಶ್ ಗುಂಡೂರಾವ್ ಬೆಂಬಲ…

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ವಿರುದ್ಧ ಕಾಂಗ್ರೆಸ್ ನಾಯಕರ ಟೀಕೆ, ವಾಗ್ದಾಳಿ ಮುಂದುವರೆದಿದೆ. ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅ.12ರಂದು ರಾಜ್ಯಾದ್ಯಂತ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಲಕ್ಷಾಂತರ ಕಾರ್ಯಕರ್ತರು ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗೆ ಪತ್ರಬರೆದಿದ್ದು, ಅದಕ್ಕೆ ಸರ್ಕಾರದಿಂದ ಪ್ರತಿಕ್ರಿಯೆ ಸಿಕ್ಕ ವಿಚಾರ ಬಹಿರಂಗವಾಗಿತ್ತು. ಇದಾದ ಬೆನ್ನಲ್ಲೇ ಮತ್ತೊಬ್ಬ ನಾಯಕ ದಿನೇಶ್ ಗುಂಡೂರಾವ್ ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ್ದಾರೆ. . ಆರ್‌ಎಸ್‌ಎಸ್ […]
ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಿ – ಸಿಎಂಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಶತಮಾನದ ಸಂಭ್ರಮದಲ್ಲಿದೆ. ಈ ನಡುವೆ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ನಡೆಸುವ ಎಲ್ಲಾ ರೀತಿಯ ಚಟುವಟಿಕೆಗಳ ಮೇಲೆ ನಿಷೇಧ ಹೇರಬೇಕೆಂದು ರಾಜ್ಯದ ಪ್ರಭಾವಿ ಸಚಿವರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ. ಈ ಸಂಬಂಧಿತವಾಗಿ ಸಿಎಂಗೆ ಪತ್ರವನ್ನೂ ಬರೆದಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂದು ಆಗ್ರಹಿಸಿರುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ. ಅವರು ಬರೆದಿರುವ ಪತ್ರದಲ್ಲಿನ ಅಂಶಗಳು ಇಂತಿವೆ. ಆರ್‌ಎಸ್‌ಎಸ್ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು, ಸರ್ಕಾರಿ […]
ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ – ಸರ್ಕಾರದ ವಿರುದ್ಧ ಸಂಸದ ಯದುವೀರ್ ಆಕ್ರೋಶ

ಮೈಸೂರು : ಇತ್ತೀಚಿನ ದಿನದಲ್ಲಿ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಹಬ್ಬದ ವಾತಾವರಣ ಈಗಲೂ ಇದೆ. ಆದರೆ ಇಲ್ಲಿ ನಡೆದ ಘಟನೆಗಳು ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸುತ್ತಿದೆ. ಹಿಂದೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಯಿತು. 340 ಕೋಟಿ ರೂಪಾಯಿಯ ಡ್ರಗ್ಸ್ ಪತ್ತೆಯಾಯಿತು. ಇದನ್ನ ಮಹಾರಾಷ್ಟ್ರದ ಪೊಲೀಸರು ಪತ್ತೆ ಮಾಡಬೇಕಾಯಿತು. ಇದೀಗ ಅರಮನೆ ಬಳಿಯಲ್ಲೇ ಕೊಲೆ […]
ಬಾಲಕಿಯ ಅ*ತ್ಯಾಚಾರ, ಕೊ*ಲೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು..!

ಮೈಸೂರು : ದಸರಾದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಸಿದ್ದಲಿಂಗಪುರದ ಕಾರ್ತಿಕ್ ಬಂಧಿತ ಆರೋಪಿ. ಅತ್ಯಾಚಾರ ಮಾಡಿ, ಕೊಲೆಗೈದು ಬಸ್‌ನಲ್ಲಿ ಕೊಳ್ಳೇಗಾಲಕ್ಕೆ ಎಸ್ಕೇಪ್ ಆಗಿದ್ದ. ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಬಂಧಿಸಿ ಕರೆತರುವ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಈತ ಯತ್ನಿಸಿದ್ದು, ಪೊಲೀಸರು ಆತನ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ಮಂಡ್ಯದಲ್ಲಿ ಮಹಿಳೆ ಮೇಲೆ […]
ಅನ್ನ ಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ – ಅಕ್ಕಿಯ ಬದಲು ಸಿಗಲಿದೆ ʼಇಂದಿರಾ ಫುಡ್ ಕಿಟ್ʼ..!

ಬೆಂಗಳೂರು : ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಈವರೆಗೆ ಅನ್ನಭಾಗ್ಯ ಯೋಜನೆಯಡಿ ವ್ಯಕ್ತಿಗೆ 05 ಅಕ್ಕಿಯನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ ಇನ್ನು ಮುಂದೆ ಅದು ರದ್ದಾಗಲಿದ್ದು, ಅದರ ಬದಲಿಗೆ ಫುಡ್ ಕಿಟ್ ನೀಡುವುದಕ್ಕೆ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದಿಂದ 05 ಕೆಜಿ ಅಕ್ಕಿ ಸಿಗಲಿದ್ದು, ರಾಜ್ಯ ಸರ್ಕಾರದ ಅಕ್ಕಿಯ ಬದಲಿಗೆ ಫುಡ್ ಕಿಟ್ ಅನ್ನು ನೀಡಲಿದೆ. ಇಂದಿರಾ ಆಹಾರ ಕಿಟ್‌ನಲ್ಲಿ ಎಎವೈ ಮತ್ತು ಪಿಎಚ್ಎಚ್ ಪಡಿತರ ಫಲಾನುಭವಿಗಳಿಗೆ ತೊಗರಿ ಬೆಳೆ 2ಕೆಜಿ, […]
ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ – ಮಹಿಳೆಯರ ʼಋತುಚಕ್ರ ರಜೆʼಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ವಿವಿಧ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ತೊಡಗಿರುವ ಮಹಿಳೆಯರಿಗೆ ಇನ್ನು ಮುಂದೆ ತಿಂಗಳಿಗೆ ಒಂದು ದಿನ ಋತುಚಕ್ರದ ರಜೆ ನೀಡುವ ನಿರ್ಧಾರಕ್ಕೆ ಸಚಿವ ಸಂಪುಟ ಸಮ್ಮತಿಸಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್ MNC ಗಳು IT ಮತ್ತು ಇತರೆ ಖಾಸಗಿ ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ […]
ಶ್ರೀಗಂಧ ಕಳ್ಳಸಾಗಣೆ – ಪತ್ರಕರ್ತ ಸೇರಿ ಇಬ್ಬರ ಬಂಧನ

ಮೂಡಿಗೆರೆ : ಶ್ರೀಗಂಧದ ತುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಮೂಡಿಗೆರೆ ವಲಯದ ಅರಣ್ಯಾಧಿಕಾರಿಗಳು ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ. ಮೂಡಿಗೆರೆ ಪ್ರಾದೇಶಿಕ ವಲಯ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಶ್ರೀಗಂಧ ತುಂಡುಗಳನ್ನು ಅಕ್ರಮವಾಗಿ ಸಾಗಣೆ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಯೂಸುಫ್ ಹಾಗೂ ಮನ್ಸೂರ್ ಎಂಬಿಬ್ಬರು ಬೈಕ್‌ನಲ್ಲಿ ಗಂಧದ ತುಂಡುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರನ್ನು ಅಧಿಕಾರಿಗಳು ಬಂದಿಸಿದ್ದು, ಬೈಕ್, ಶ್ರೀಗಂಧದ ತುಂಡು, ತುಂಡು […]
Breaking News : ಮನೆ ಮನೆ ಸಮೀಕ್ಷೆ – ಅಕ್ಟೋಬರ್ 18 ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 18ರವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶಿಕ್ಷಕರ ಸಂಘದ ಮನವಿಯಂತೆ ರಜೆ ವಿಸ್ತರಣೆ ಮಾಡಲಾಗಿದೆ. 19ರ ಒಳಗೆ ಸಮೀಕ್ಷೆ ಮುಗಿಯಲಿದೆ ಅಂತ ಶಿಕ್ಷಕರ ಸಂಘದವರು ತಿಳಿಸಿದ್ದಾರೆ. ಈ ಅವಧಿಯಲ್ಲಿ ನಷ್ಟವಾಗುವ ತರಗತಿಗಳನ್ನು ವಿಶೇಷ ಬೋಧನಾ ತರಗತಿಗಳ ಮೂಲಕ ಪೂರ್ಣಗೊಳಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸೆಪ್ಟೆಂಬರ್ 2 ರಿಂದ ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ […]
ಕೊಡಗು ಜಿಲ್ಲೆಯಲ್ಲಿ ಜಾತಿ ಗಣತಿಗೆ ಹತ್ತಾರು ಅಡೆತಡೆ – ಕೈಕೊಡುತ್ತಿರುವ App – ಕೇಳುವವರಿಲ್ಲ ಸಿಬ್ಬಂದಿಯ ಗೋಳು..!

ವಿಶೇಷ ವರದಿ : ಕ-ವನ ಮಡಿಕೇರಿ : ರಾಜ್ಯ ಸರ್ಕಾರ ಹಲವು ಆಕ್ಷೇಪ, ವಿರೋಧಗಳ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ ಜಾತಿ ಗಣತಿಯನ್ನು ಆರಂಭಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಆರಂಭದಲ್ಲೇ ಹಲವು ರೀತಿಯ ಅಡೆತಗಳು ಎದುರಾಗಿದ್ದು, ಸಮೀಕ್ಷೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ತಲೆಬಿಸಿ ತಂದೊಡ್ಡಿದೆ. ಇಂದಿನಿಂದ ಸಮೀಕ್ಷೆ ಆರಂಭಿಸುವುದಕ್ಕೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಶಿಕ್ಷಕರು ಸೇರಿದಂತೆ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಮಂದಿ ಬೆಳಗ್ಗೆಯೇ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಮೀಕ್ಷೆಗೆ ಬಳಸುವ ತಂತ್ರಾಂಶ ಓಪನ್ ಆಗಲೇ […]