ಈ ಬಾರಿ ೧೧ ದಿನ ನಾಡಹಬ್ಬ ದಸರಾ ಆಚರಣೆ – ವಿಜೃಂಭಣೆಯ ಉತ್ಸವಕ್ಕೆ ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನ..!

ಬೆಂಗಳೂರು : ಈ ಬಾರಿಯ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ-2025 ಆಚರಣೆ ಕುರಿತು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ‌ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು. ಈ ಬಾರಿ […]

ಚಾಮರಾಜನಗರ : ಐದು ಹುಲಿ ಸಾವು ಪ್ರಕರಣ – ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ..!

ಚಾಮರಾಜನಗರ : ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ವಿಷವಿಕ್ಕಿದ್ದ ಮಾದರಾಜು, ನಾಗರಾಜು ಇಬ್ಬರನ್ನು ಮೊದಲು ಬಂಧಿಸಲಾಗಿತ್ತು. ಇದೀಗ ಪೊಲೀಸರು ಕೋನಪ್ಪ ಅಲಿಯಾಸ್ ಕೂನಯ್ಯ ಎಂಬಾತನನ್ನ ಬಂಧಿಸಿದ್ದಾರೆ. ಈತನನ್ನು ಮೃತ ಹಸುವಿನ ಮಾಲೀಕ ಎನ್ನಲಾಗಿದೆ. ಕಳ್ಳಬೇದೊಡ್ಡಿಯ ಮಾದುರಾಜ್ ಸೇರಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇಂದು ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

ಇಂತಹ ಪಡಿತರ ಚೀಟಿದಾರರಿಗೆ ಶಾಕ್ :‌ ಇವರದ್ದು ರೇಷನ್‌ ಕಾರ್ಡ್‌ ರದ್ದು!

Ration card

ರಾಜ್ಯದಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಪಡೆದಿದ್ದ ಬಿಪಿಎಲ್‌ ಕಾರ್ಡ್‌ಗಳನ್ನು (BPL Card ) ರದ್ದುಗೊಳಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಅಕ್ರಮವಾಗಿ ಬಿಪಿಎಲ್‌ ಕಾರ್ಡ್ ಪಡೆದುಕೊಂಡಿದ್ದವರು ಎಪಿಎಲ್‌ಗೆ ವರ್ಗಾಯಿಸಲ್ಪಟ್ಟಿದ್ದು, ಈ ಕ್ರಮದ ಪರಿಣಾಮವಾಗಿ ನಿಜವಾಗಿ ಬಡವರಾಗಿ ಪರಿಗಣಿಸಲ್ಪಟ್ಟಿದ್ದ ಹಲವರ ಕಾರ್ಡ್‌ಗಳು ಕೂಡ ರದ್ದಾದವು. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಪ್ರತಿಭಟನೆಗಳಿಗೆ ಕಾರಣವಾಯಿತು. ಈ ಸಮಸ್ಯೆ ಅರಿತ ಸರ್ಕಾರ, ತಪ್ಪುಗಳನ್ನು ತಿದ್ದುಕೊಳ್ಳುವ ಭರವಸೆ ನೀಡಿತ್ತು. ಇದರ ಜೊತೆಗೆ ಇನ್ನೊಂದು ಒಂದೇ ಮನೆಗೆ ಸೇರಿರುವ ಸದಸ್ಯರು ವಿಭಿನ್ನ ಹೆಸರುಗಳಲ್ಲಿ ಎರಡು […]

ಸಾಂಸ್ಕೃತಿಕ ನಗರಿಯಲ್ಲಿ ಕೊಡವ ಹಾಕಿ ಪ್ರೀಮಿಯರ್‌ ಲೀಗ್‌ – ಜೂ. 27ರಿಂದ ಮೈಸೂರಿನಲ್ಲಿ ಚೊಟ್ಟಲ ಟೂರ್ನಿ

ವರದಿ : ಚೆಯ್ಯಂಡ ಬನೀತ್ ಬೋಜಣ್ಣ ಮೈಸೂರು : ಕೊಡಗು ಅಥವಾ ಕೊಡವರು ಎಂದಾಗ ನಮಗೆ ನೆನಪಿಗೆ ಬರುವ ಹಲವು ವಿಷಯಗಳಲ್ಲಿ ಕ್ರೀಡೆಯು ಒಂದು. ಅದರಲ್ಲೂ ಹಾಕಿ ಕ್ರೀಡೆ ಕೊಡಗಿನಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತದ ಹಾಕಿ ತಂಡಕ್ಕೆ ನಮ್ಮ ಜಿಲ್ಲೆಯ ಅಸಂಖ್ಯಾತ ಆಟಗಾರರು ಆಡಿದ್ದಾರೆ. ಇದರಿಂದ ಕೊಡಗನ್ನು ಭಾರತದ ಹಾಕಿಯ ತೊಟ್ಟಿಲು ಎಂದು ಕರೆಯುತ್ತಾರೆ. ಹಾಕಿಯ ಮೂಲಕ ಕೊಡವ ಜನಾಂಗವನ್ನು ಮತ್ತಷ್ಟು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕೊಡಗಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯುತ್ತದೆ. […]

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಕೊಡಗಿನ ಯುವ ಸಾಹಿತಿ ಮೂಕೊಂಡ ನಿತಿನ್‌ ಕುಶಾಲಪ್ಪ..!

ಬೆಂಗಳೂರು : ಕೇಂದ್ರ ಸಾಹಿತ್ಯ ಅಕಾಡೆಮಿ 2025ನೇ ಸಾಲಿನ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರವನ್ನು ಪ್ರಕಟಿಸಿದ್ದು, ಕೊಡಗಿನ ಮೂಕೊಂಡ ನಿತಿನ್‌ ಕುಶಾಲಪ್ಪ ಸೇರಿದಂತೆ ಮೂವರು ಕನ್ನಡಿಗರಿಗೆ ಪ್ರಶಸ್ತಿ ಲಭಿಸಿದೆ. ಮೂಕೊಂಡ ನಿತಿನ್‌ ಅವರ ‘ದಕ್ಷಿಣ್ ಸೌಥ್ ಇಂಡಿಯನ್ ಮಿಥ್ಸ್‌ & ಫೇಬಲ್ಸ್ ರೀಟೋಲ್ಡ್’ ಕಥಾಸಂಕಲನಕ್ಕೆ ‘ಇಂಗ್ಲಿಷ್’ ವಿಭಾಗದಲ್ಲಿ ಬಾಲ ಸಾಹಿತ್ಯ ಪುರಸ್ಕಾರ ದೊರಕಿದೆ. ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಯುವ ಪುರಸ್ಕಾರ ಲಭಿಸಿದೆ. ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್’ […]

ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ಕೊಡಗಿನ ಯಶಸ್‌ ರೈ..

ಮಡಿಕೇರಿ : ದೆಹಲಿಯಲ್ಲಿ(Delhi) ನಡೆಯಲಿರುವ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಕೊಡಗು ಜಿಲ್ಲೆಯ ಪ್ರತಿನಿಧಿಯಾಗಿ ಮೂರ್ನಾಡುವಿನ ಯಶಸ್‌ ರೈ(Yashas Rai) ಆಯ್ಕೆಯಾಗಿದ್ದಾರೆ. 15ರಿಂದ 28 ವರ್ಷದೊಳಗಿನವರಿಗೆ ಈ ಅವಕಾಶ ಕಲ್ಪಿಸಲಾಗಿತ್ತು. ನೆಹರು ಯುವ ಕೇಂದ್ರದ ಮೈ ಭಾರತ್‌ ಪೋರ್ಟಲ್‌ ಮೂಲಕ ಈ ಆಯ್ಕೆ ನಡೆದಿದೆ. ದೇಶಾದ್ಯಂತ ಸಹಸ್ರಾರು ಮಂದಿ ಯುವಕರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕೊಡಗಿನ ಯಶಸ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬರು ಆಯ್ಕೆಯಾಗಿದ್ದಾರೆ. ಯಶಸ್‌ ರೈ ಮೂರ್ನಾಡುವಿನ ಅಂಗನವಾಡಿ ಕಾರ್ಯಕರ್ತೆ ಬಿ.ಬಿ. ಜಯಂತಿ […]

ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ – ಸ್ಮಿತಾ ಅಮೃತರಾಜ್‌ ಅವರ ಅತೀ ಸಣ್ಣ ಕಥೆಗೆ ಪ್ರಶಸ್ತಿ..!

ಮಡಿಕೇರಿ : ಬಂಟ್ವಾಳದ ಯುವವಾಹಿನಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯಲ್ಲಿ ಕೊಡಗಿನ ಸಾಹಿತಿ ಸ್ಮಿತಾ ಅಮೃತರಾಜ್‌ ಸಂಪಾಜೆ ಅವರಿಗೆ ಪ್ರಶಸ್ತಿ ಲಭಿಸಿದೆ.‌ ಕವಿ, ಸಾಹಿತಿ ಬಿ. ತಮ್ಮಯ್ಯ ಅವರ ನೆನಪಿಗಾಗಿ ಅತೀ ಸಣ್ಣ ಕಥೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅತೀ ಸಣ್ಣ ಕಥೆ ವಿಭಾಗದಲ್ಲಿ ಸ್ಮಿತಾ ಅವರ ʼಸ್ಪೋಟʼ ಕಥೆಗೆ ದ್ವಿತೀಯ ಬಹುಮಾನ ಸಿಕ್ಕಿದೆ. ಪ್ರಥಮ ಬಹುಮಾನ ಸುಲ್ತಾನ್‌ ಮನ್ಸೂರು ಮಂಚಿ(ಜಾಥಾ) ಪಾಲಾಗಿದೆ. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಅವರ ಬೂಬು […]

ಬೆಂಗಳೂರು : ಬೈಕ್‌ ಮತ್ತು ಲಾರಿ ಡಿಕ್ಕಿ – ಇಬ್ಬರು ಯುವ ನೃತ್ಯ ಕಲಾವಿದರ ದುರ್ಮರಣ..!

ಬೆಂಗಳೂರು :  ಬೈಕ್‌ ಮತ್ತು ಬೈಕ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ನೆಲಮಂಗಲ ಬಳಿಯ ಕುಣಿಗಲ್ದ‌ನಲ್ಲಿ  ನಡೆದಿದೆ. ಕುಣಿಗಲ್ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ.  ಶ್ರೀರಾಂಪುರದ ಪ್ರಜ್ವಲ್‌ ಹಾಗೂ ಸಹನಾ ಮೃತ ದುರ್ದೈವಿಗಳು. ಇಬ್ಬರು ಕೂಡಾ ನೃತ್ಯ ಕಲಾವಿದರು ಎಂದು ತಿಳಿದುಬಂದಿದೆ. ಬೈಕ್‌ಗೆ ಡಿಕ್ಕಿಪಡಿಸಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಮಂತರ್ ಗೌಡ ಮತ್ತು ಪೊನ್ನಣ್ಣರಿಗೆ ಉತ್ತಮ ರಾಜಕೀಯ ಭವಿಷ್ಯ ಇದೆ – ಎ.ಎಸ್.ಪಿ ಫೈರ್ ಬ್ರಾಂಡ್ ಆಗ್ತಾರೆ : ಸಿ.ಎಂ ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರು : ವೀರಾಜಪೇಟೆ ಶಾಸಕ ಎ.ಎಸ್.‌  ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಅವರಿಗೆ ರಾಜಕೀಯದಲ್ಲಿ ಉತ್ತಮ‌ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪೊನ್ನಣ್ಣ ಕೊಡವ ಸಮಾಜದ ಆಸ್ತಿ ಆಗಿದ್ದಾರೆ. ಮುಂದೆ ರಾಜ್ಯದ ಆಸ್ತಿ ಆಗ್ತಾರೆ ಎಂದ ಅವರು, ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, […]

16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಮುಖ್ಯಮಂತ್ರಿ – ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಲು ಒತ್ತಾಯ 

ನವದೆಹಲಿ : 16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಗೆ ಜೊತೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು 16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 16 ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು. ಯಾರಿಗೂ ಅನ್ಯಾಯವಾಗಬಾರದು […]