ಕಾಂಗ್ರೆಸ್‌ಗೆ ಪ್ರತೀಕ್ ಪೊನ್ನಣ್ಣ ಗುಡ್ ಬೈ? – ಉಸಿರುಗಟ್ಟಿಸುವ ವಾತಾವರಣದಲ್ಲಿ ನಾನು ಇರಲ್ಲ ಎಂದ ಯುವ ನಾಯಕ..!

ಮಡಿಕೇರಿ : ಕೆಲ ವರ್ಷದ ಹಿಂದಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಇದೀಗ ದಿಢೀರ್ ಆಗಿ ಕಾಂಗ್ರೆಸ್ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ತಾನು ಈ ನಿರ್ಧಾರಕ್ಕೆ ಬರಲು ಕಾರಣ ಏನು ಅನ್ನೋದನ್ನೂ ಉಲ್ಲೇಖಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಕೊಡವ ಸಮಾಜದಕ್ಕೆ ಜಮೀನು ನೀಡಿದ್ದಕ್ಕಾಗಿ ಶಾಸಕರು ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿರುವ ಕಾರ್ಯಕ್ರಮದ ವಿಚಾರವೇ ಈಗ ಪ್ರತೀಕ ಈ ನಿರ್ಧಾರಕ್ಕೆ ಕಾರಣವಾಗಿದೆ. ಈ […]
ಕೊಡಗಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ – ಸೋಮವಾರ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ ಘೋಷಣೆ..!

ಮಡಿಕೇರಿ : ಕೊಡಗು ಜಿಲ್ಲೆಯ ಬಹುತೇಕ ಕಡೆ ಭಾನುವಾರ ನಿರಂತರ ಮಳೆಯಾಗಿದೆ. ಮಳೆ ಬಿರುಸಿನಿಂದ ಮುಂದುವರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾಳೆ (ಜೂನ್ 16) ಜಿಲ್ಲೆ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂತರ್ ಗೌಡ ಮತ್ತು ಪೊನ್ನಣ್ಣರಿಗೆ ಉತ್ತಮ ರಾಜಕೀಯ ಭವಿಷ್ಯ ಇದೆ – ಎ.ಎಸ್.ಪಿ ಫೈರ್ ಬ್ರಾಂಡ್ ಆಗ್ತಾರೆ : ಸಿ.ಎಂ ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರು : ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪೊನ್ನಣ್ಣ ಕೊಡವ ಸಮಾಜದ ಆಸ್ತಿ ಆಗಿದ್ದಾರೆ. ಮುಂದೆ ರಾಜ್ಯದ ಆಸ್ತಿ ಆಗ್ತಾರೆ ಎಂದ ಅವರು, ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, […]
CSIR-NIIST ಮತ್ತು ಕೊಡಗು ವಿಶ್ವವಿದ್ಯಾಲಯದ ನಡುವೆ ಒಪ್ಪಂದಕ್ಕೆ ಸಹಿ – ಏನಿದರ ವಿಶೇಷತೆ..?

ಕುಶಾಲನಗರ : ಮುಂದಿನ ಪೀಳಿಗೆಯ ಆಹಾರ ಸಂಸ್ಕರಣೆಯು ಸ್ಮಾರ್ಟ್, ಸ್ವಚ್ಛ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಯತ್ತ ಒಂದು ಹೆಜ್ಜೆಯಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರರವರು ಅಭಿಪ್ರಾಯ ವ್ಯಕ್ತಪಡಿಸಿದರು. ತಿರುವನಂತಪುರಂನ ಸಿಎಸ್ಐಆರ್-ರಾಷ್ಟ್ರೀಯ ಅಂತರಶಿಸ್ತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಎಸ್ಐಆರ್-ಎನ್ಐಐಎಸ್ಟಿ)ಯಲ್ಲಿ ಎನ್ಐಐಎಸ್ಟಿಯ ಸುವರ್ಣ ಮಹೋತ್ಸವ ಆಚರಣೆಗಾಗಿ ಆಯೋಜಿಸಿದ್ದ ‘ಮುಂದಿನ ಪೀಳಿಗೆಯ ಆಹಾರ ತಂತ್ರಜ್ಞಾನಗಳು: ಸುಸ್ಥಿರ ನಾಳೆಗಾಗಿ ಸಂಸ್ಕರಣೆ’ ಕುರಿತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಯ ಆಹಾರ ಸಂಸ್ಕರಣೆ ಕೇವಲ ತಾಂತ್ರಿಕ […]
ʼಕೊಡವ ಮುಸ್ಲಿಂ ಅಸೋಸಿಯೇಷನ್ ದಫ್ ಮುಟ್ಟ್’ ತಂಡ ಅಸ್ತಿತ್ವಕ್ಕೆ – ದೂರದರ್ಶನ ಕೇಂದ್ರದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ…

ಪೊನ್ನಂಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧೀನದಲ್ಲಿ ‘ಕೆ.ಎಂ.ಎ. ದಫ್ ಮುಟ್ಟ್ (ರಾತೀಬ್)’ ತಂಡವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ‘ದಫ್ ಮುಟ್ಟ್’ ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದೆ. ಹೊಸದಾಗಿ ರಚನೆಯಾದ ಈ ತಂಡ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ದಫ್ ಮುಟ್ಟ್ ಪ್ರದರ್ಶನವನ್ನು ಪ್ರಸ್ತುತಪಡಿಸಿತು. ಈ ಮೂಲಕ ಕೊಡವ ಮುಸ್ಲಿಮರ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಬೆಂಗಳೂರು ದೂರದರ್ಶನ ಚಂದನ […]
ಕ್ಲೋಸ್‌ಬರ್ನ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಕೊಡುಗೆಯಾಗಿ ನೀಡಿದ ಬೆಳೆಗಾರ…

ಮಡಿಕೇರಿ : ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಬೆಳೆಗಾರರಾದ ಜೆ. ಶರತ್ ಬಾಬುರವರು ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ಖರೀದಿಸಿ ಶಿಕ್ಷಕರಿಗೆ ತಲುಪಿಸಿದ್ದರು. ಶಿಕ್ಷಕರು ಅದನ್ನು ಇತ್ತೀಚೆಗೆ ವಿದ್ಯಾರ್ಥಿಗಳಿಗೆ ವಿತರಿಸಿದರು. ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ನೆರವಾದ ಶರತ್ ಬಾಬು ಅವರ ಕಾರ್ಯಕ್ಕೆ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ […]
16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿದ ಮುಖ್ಯಮಂತ್ರಿ – ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಲು ಒತ್ತಾಯ

ನವದೆಹಲಿ : 16 ನೇ ಹಣಕಾಸಿನ ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಗೆ ಜೊತೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಿ ಹೇಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು 16 ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ ನಂತರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 16 ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪರಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು. ಯಾರಿಗೂ ಅನ್ಯಾಯವಾಗಬಾರದು […]
ಜೂ.16 ರಂದು ನವೋದಯ ಶಾಲೆಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಡಿಕೇರಿ : ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪಿಜಿಟಿ(ಕಂಪ್ಯೂಟರ್ ಸೈನ್ಸ್/ಐಟಿ) 1, ಪಿಜಿಟಿ(ಗಣಿತ) 1, ಟಿಜಿಟಿ ಕನ್ನಡ 1, ಕೌನ್ಸಿಲರ್(ಮಹಿಳೆ) 1, ಜೆಆರ್. ಕ್ಲಕ್ರ್ಸ್ 2, ವಾಹನ ಚಾಲಕರು 1, ಮೆಟ್ರಾನ್ 1, ಆಫೀಸ್ ಅಸಿಸ್ಟೆಂಟ್ 2, ಎಂಟಿಎಸ್ 2 ಮತ್ತು ಸೆಕ್ಯುರಿಟಿ ಗಾರ್ಡ್ 6 ಹುದ್ದೆಗಳಿಗೆ ಜೂನ್, 16 ರಂದು ಬೆಳಗ್ಗೆ 10.30 ಗಂಟೆಗೆ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9447136164 ಮತ್ತು 9448215623 ನ್ನು ಸಂಪರ್ಕಿಸಬಹುದು ಎಂದು […]
ಕೊಡಗು ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗಳಿಗೆ ಅಜಿ೯ ಆಹ್ವಾನ

ಮಡಿಕೇರಿ : ಕೊಡಗು ಪತ್ರಕತ೯ರ ಸಂಘ(ರಿ)ದ ವತಿಯಿಂದ ವಾರ್ಷಿಕ ಪ್ರಶಸ್ತಿಗಳಿಗೆ ಅಜಿ೯ ಆಹ್ವಾನಿಸಲಾಗಿದೆ. ಸಂಘದಿಂದ 8 ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದ್ದು ಮುದ್ರಣ ಮಾಧ್ಯಮಕ್ಕೆ ಅತ್ಯುತ್ತಮ ಕ್ರೀಡೆ, ರಾಜಕೀಯ, ಕೃಷಿ ಹಾಗೂ ಗ್ರಾಮೀಣ ವರದಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಸಂಘದ ಹಿರಿಯ ಸಲಹೆಗಾರರಾದ ಶಕ್ತಿ ದಿನ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ತಮ್ಮ ತಾಯಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿ, 2. ಗ್ರಾಮೀಣ ವರದಿ – ಕೊಡಗು ಚೇಂಬರ್ ಆಫ್ ಕಾಮಸ್೯ […]
ಶರಣರು ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳು – ಡಾ. ಜಮೀರ್ ಅಹ್ಮದ್

ಕುಶಾಲನಗರ : ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಈ ಜಗತ್ತಿಗೆ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳು ಮತ್ತು ವಿಶ್ವ ಮೌಲಿಕವಾದ ಸಂದೇಶಗಳು ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಅಭಿಪ್ರಾಯಪಟ್ಟರು. ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮದ ಅಂಗವಾಗಿ ಜರುಗಿದ ʼವಚನಗಳಲ್ಲಿ ಜೀವನ ಮೌಲ್ಯʼ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸಾಮಾನ್ಯ ಜನರ ಜೀವನ ವಿಧಾನವನ್ನು ಪ್ರಧಾನವಾಗಿರಿಸಿಕೊಂಡು ಜನತೆಗೆ ಹತ್ತಿರವಾಗಿ ಅವರ […]