ವಾಲಿಬಾಲ್‌ ಪಂದ್ಯಾವಳಿ – ಬೇಟೋಳಿ ಸ.ಹಿ.ಪ್ರಾ. ಶಾಲೆ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ವೀರಾಜಪೇಟೆ : ಗುಂಡಿಕೆರೆ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಲಿಬಾಲ್ ತಂಡ ಪ್ರಾಥಮಿಕ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದೆ. ಮಾಯಮುಡಿಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶ್ರೀಮಂಗಳ ಸಮೀಪದ ಕಾಕೂರಿನ ಜೆ. ಸಿ. ಶಾಲಾ ತಂಡವನ್ನು 21-15 ಮತ್ತು 21-12 ನೇರ ಸೆಟ್ಟುಗಳಿಂದ ಸೋಲಿಸಿ ವಿನ್ನರ್ಸ್ ಪ್ರಶಸ್ತಿಯನ್ನು ತನ್ನದಾಗಿಸುವ ಮೂಲಕ ಬೇಟೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದೆ. […]

ಸೆ.07 ರಂದು ಚಂದ್ರಗ್ರಹಣ – ಈ ದೇವಾಲಯದಲ್ಲಿ ದೇವರ ದರ್ಶನ ಇರಲ್ಲ..!

ಮಡಿಕೇರಿ : ಸೆಪ್ಟೆಂಬರ್ ೦೭ ರಂದು ಸಂಭವಿಸುವ ಭಾದ್ರಪದ ಶುಕ್ಲ ಪೌರ್ಣಮಿ ರಾಹುಗ್ರಸ್ತ ಚಂದ್ರಗ್ರಹಣ ಪ್ರಯುಕ್ತ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ಸಂಜೆ ೫ ಗಂಟೆಯಿಂದ ಭಕ್ತರಿಗೆ ದೇವರ ದರ್ಶನ ಮತ್ತು ಹುಣ್ಣಿಮೆಯ ಸಾಮೂಹಿಕ ಸತ್ಯನಾರಾಯಣ ಪೂಜೆ ಇರುವುದಿಲ್ಲ. ಆದ್ದರಿಂದ ಭಕ್ತಾಧಿಕಾರಿಗಳು ಸಹಕರಿಸುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾರಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ. ಚಂದ್ರಶೇಖರ್ ಕೋರಿದ್ದಾರೆ.

ಸೆ.12 ರವರೆಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮ

ಮಡಿಕೇರಿ : ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ೨೦೨೫-೨೬ನೇ ಸಾಲಿನ ಅಂತರರಾಷ್ಟೀಯ ಸಾಕ್ಷರತಾ ದಿನಾಚರಣೆ ಮತ್ತು ಕೇಂದ್ರ ಪುರಷ್ಕೃತ ಯೋಜನೆಯ “ಉಲ್ಲಾಸ್ ನವ ಭಾರತ ಸಾಕ್ಷರತಾ ಸಪ್ತಾಹ”ವನ್ನು ಸೆಪ್ಟಂಬರ್ ೦೧ ರಿಂದ ೧೨ ರವರೆಗೆ ಆಚರಿಸುತ್ತಿದೆ. ಕರ್ನಾಟಕ ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ನಾಡನ್ನಾಗಿ ಮಾಡುವ ನಿಟ್ಟಿನಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯವು ಅನಕ್ಷರಸ್ಥರಲ್ಲಿ ಅಕ್ಷರ ಜ್ಞಾನ ಮೂಡಿಸಿ ನವ ಸಾಕ್ಷರರನ್ನಾಗಿ ಮಾಡುವ ಉದ್ದೇಶ ಕರ್ನಾಟಕ ಸರ್ಕಾರದ್ದಾಗಿದೆ. ಮೂಲ ಶಿಕ್ಷಣದಿಂದ ವಂಚಿತರಾಗಿರುವವರನ್ನು ಗುರುತಿಸಿ ಅಂತವರಿಗೆ ಬುನಾದಿ ಶಿಕ್ಷಣ, ಸುಲಭ […]

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸದಂತೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪ್ರತಾಪ್‌ ಸಿಂಹ..!

ಮೈಸೂರು : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ವಿಚಾರವಾಗಿ ನಡೆಯುತ್ತಿರುವ ಪರ-ವಿರೋಧ ವಿಚಾರ ಈಗ ನ್ಯಾಯಾಲಯ ಮೆಟ್ಟಿಲೇರಿದೆ. ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟನೆ ಮಾಡುತ್ತಾರೆಂದು ಸರ್ಕಾರ ಹೇಳಿದಾಗಿನಿಂದ ಮಾಜಿ ಸಂಸದ ಪ್ರತಾಪ್‌ ಸಿಂಹ ತಮ್ಮ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಇದೀಗ ಅವರಿಂದ ದಸರಾ ಉದ್ಘಾಟನೆಗೆ ತಡೆ ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ದಿನದ ಹಿಂದೆ ಸರ್ಕಾರ ಹಾಸನದ ಬಾನು ಮುಷ್ತಾಕ್‌ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿತ್ತು. […]

ದಕ್ಷಿಣ ವಲಯ ಮಟ್ಟದ ಬ್ಯಾಡ್ಮಿಂಟನ್ – ಕೊಡಗಿನ ದಿಯಾ ಭೀಮಯ್ಯಗೆ ಪ್ರಶಸ್ತಿ

ತೆಲಂಗಾಣ : ಹೈದರಾಬಾದ್‌ನ ಹಾರ್ಟ್ಫುಲ್ನೆಸ್ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ಯೋನೆಕ್ಸ್ ಸನ್ ರೈಸ್ 79ನೇ ದಕ್ಷಿಣ ವಲಯ ಅಂತಾರಾಜ್ಯ ಬ್ಯಾಡ್ಮಿಂಟನ್ 2025 ಸ್ಪರ್ಧೆಯಲ್ಲಿ ಕೊಡಗಿನ ದಿಯಾ ಭೀಮಯ್ಯ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ 19 ವರ್ಷದ ಬಾಲಕಿಯರ ಸಿಂಗಲ್ಸ್‌ನಲ್ಲಿ ದ್ವಿತೀಯ ಹಾಗೂ ತಂಡ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಸೆಪ್ಟೆಂಬರ್ 2 ರಿಂದ 5ನೇ ತಾರೀಖಿನವರೆಗೆ ಸ್ಪರ್ಧೆ ನಡೆಯಿತು. ದೇಶದ ವಿವಿಧ ಕಡೆಗಳಿಂದ ಸ್ಪರ್ಧಿಗಳು ಹಾಗೂ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ದುಬೈಯಲ್ಲಿ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಅದ್ಧೂರಿಯಾಗಿ ಜರುಗಿದ ಮೀಲಾದುನ್ನಭಿ

ಅಬುದಾಬಿ : ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕೊಡಗಿನ ಕುಂಜಿಲ ಜಮಾತ್ ಅನಿವಾಸಿ ಗ್ರಾಮಸ್ಥರ ಸಂಘಟನೆಯಾದ ಕುಂಜಿಲ ಪೈನೆರಿ ಯುಎಇ ಸಮಿತಿ ವತಿಯಿಂದ ಮೀಲಾದುನ್ನಭಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಆಗಸ್ಟ್ 30 ರಂದು ದೇರಾ ದುಬೈಯಲ್ಲಿರುವ ಟ್ರಿಪಲ್ ಹೈಟ್ ಹೋಟೆಲ್ ಸಭಾಂಗಣದಲ್ಲಿ ಇಬ್ರಾಹಿಂ ಉಸ್ತಾದ್ ಕುಂಜಿಲ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸಯ್ಯದ್ ಮೊಹಮ್ಮದ್ ಹೈದ್ರೋಸಿ ಹುದವಿ ತಂಗಳ್ ಅವರ ದುಆದೊಂದಿಗೆ ಮೀಲಾದ್ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು, ಹಮೀದ್ ಸಖಾಫಿ ಉಸ್ತಾದ್ ಪುದರೇಕಾರಂಡ, ಮುನೀರ್ ಮಿಸ್ಬಾಯ್ ಉಸ್ತಾದ್ ಬಾರಿಕೇರ, […]

ಹೃದಯಾಘಾತದಿಂದ ಮೃತಪಟ್ಟ ಪಿಡಿಒ..!

ಸೋಮವಾರಪೇಟೆ : ಹೃದಯಾಘಾತದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು(PDO) ಕೊನೆಯುಸಿರೆಳೆದಿದ್ದಾರೆ. ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮನಮೋಹನ್ ಮೃತ ಅಧಿಕಾರಿ. ಇವರು ಪ್ರಸ್ತುತ ನಿಯೋಜನೆ ಮೇಲೆ ವಿರಾಜಪೇಟೆ ತಾಲೂಕು ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸರ್ಕಾರದ ಸವಲತ್ತು ಪಡೆಯಲು ವಿಕಲಚೇತನರಿಂದ ಅರ್ಜಿ ಆಹ್ವಾನ… 

ಮಡಿಕೇರಿ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೧೩ ಫಲಾನುಭವಿ ಆಧಾರಿತ ಯೋಜನೆಗಳನ್ನು ೨೦೨೫-೨೬ ನೇ ಸಾಲಿನಲ್ಲಿ ಸೇವಾ ಸಿಂಧು, ಆನ್‌ಲೈನ್ ತಂತ್ರಾಂಶದಡಿ ಅಳವಡಿಸಲಾಗಿರುತ್ತದೆ.  ಆದ್ದರಿಂದ ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರ ಯೋಜನೆ, ಮರಣ ಪರಿಹಾರ ನಿಧಿ, ಸಾಧನೆ ಯೋಜನೆ, ಪ್ರತಿಭೆ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ […]

ಕೆ. ನಿಡುಗಣೆ ಗೋಶಾಲೆ – 08 ಎಕರೆ ಜಾಗಕ್ಕೆ ಒಂದು ತಿಂಗಳಲ್ಲಿ ತಂತಿ ಬೇಲಿ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ : ತಾಲ್ಲೂಕಿನ ಕೆ.ನಿಡುಗಣೆ ಬಳಿ ಸರ್ಕಾರಿ ಗೋಶಾಲೆಯಲ್ಲಿ ೩೭ ಜಾನುವಾರುಗಳ ಸಂರಕ್ಷಣೆಗೆ ಮಾತ್ರ ಅವಕಾಶವಿದ್ದು, ಇನ್ನೂ ಹೆಚ್ಚಿನ ಜಾನುವಾರುಗಳ ಸಂರಕ್ಷಣೆಗೆ ಒತ್ತು ನೀಡುವಲ್ಲಿ ಸರ್ಕಾರಕ್ಕೆ ಪತ್ರ ಬರೆಯಲು ಪ್ರಾಣಿ ದಯಾಸಂಘ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ನಡೆದ ಪ್ರಾಣಿ ದಯಾಸಂಘ ಮಹಾಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈ ಕುರಿತು ವಿಷಯ ಪ್ರಸ್ತಾಪಿಸಿದ ಪ್ರಾಣಿ ದಯಾ ಸಂಘದ ಸಮಿತಿ ಸದಸ್ಯರಾದ ಹರೀಶ್ ಆಚಾರ್ಯ, ಕೆ.ನಿಡುಗಣೆ ಬಳಿಯ ಸರ್ಕಾರಿ ಗೋಶಾಲೆಯಲ್ಲಿ […]

ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗಣೇಶೋತ್ಸವ – ಶೋಭಾಯಾತ್ರೆಗೆ ಮೆರುಗು ನೀಡಿದ ಕುಣಿತ ಭಜನೆ

ವಿರಾಜಪೇಟೆ : ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಗಣಪತಿ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ಬಾರಿ 43ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಿತು. ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಏಳು ದಿವಸಗಳ ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆಗಳೊಂದಿಗೆ ಆರಾಧಿಸಲಾಯಿತು. ವಿಸರ್ಜನೋತ್ಸವದಂದು ಮಧ್ಯಾಹ್ನ ಮಹಾಪೂಜೆ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ […]