ವೀರಾಜಪೇಟೆ ಸೆಂಟ್ ಆನ್ಸ್ ಕಾಲೇಜಿನಲ್ಲಿ ಎಂ.ಕಾಂ ಪ್ರವೇಶಾತಿ ಆರಂಭ

ವೀರಾಜಪೇಟೆ : ವೀರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನಲ್ಲಿ ಎಂ.ಕಾಂ. ಸ್ನಾತಕೋತ್ತರ ವಿಭಾಗಕ್ಕೆ 2025 -26ನೇ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ. ನುರಿತ ಉಪನ್ಯಾಸಕರು, ಸುಸಜ್ಜಿತ ಕೊಠಡಿ, ಐಸಿಟಿ ತರಗತಿ, ಗ್ರಂಥಾಲಯ ವ್ಯವಸ್ಥೆ, ವೈಫೈ, ಕೆ ಸೆಟ್ ಹಾಗೂ ನೆಟ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಜೊತೆಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡನೆ, ಇಂಡಸ್ಟ್ರಿಯಲ್ ವಿಸಿಟ್, ಹಾಗೂ ಇಂಟರ್ನ್‌ಶಿಪ್‌, ಬೋಧನಾ ಕೌಶಲ್ಯ ತರಬೇತಿ, ಸೆಮಿನಾರ್, ಫೆಸ್ಟ್‌ಗಳಲ್ಲಿ ಪಾಲ್ಗೊಳ್ಳುವಿಕೆ, ಹಾಗೂ ಪ್ರಾಯೋಗಿಕ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. […]

ಗೋಣಿಕೊಪ್ಪ ದಸರಾ : ಕೊಪ್ಪ ಮಂಟಪ ಸಮಿತಿ ಅಧ್ಯಕ್ಷರಾಗಿ ಸುದೀಶ್‌ ರೈ ಆಯ್ಕೆ

ಗೋಣಿಕೊಪ್ಪ : ಇಲ್ಲಿನ ಸ್ನೇಹಿತ ಬಳಗ ಕೊಪ್ಪದ 36ನೇ ವರ್ಷದ ಮಂಟಪ ಸಮಿತಿ ಅಧ್ಯಕ್ಷರಾಗಿ ಸುದೀಶ್‌ ರೈ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಸುದೀಶ್‌ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಕಾಡ್ಯಮಾಡ ಚೇತನ್‌, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್‌, ಖಜಾಂಚಿಯಾಗಿ ಅನೀಸ್‌ ಆಯ್ಕೆಯಾಗಿದ್ದಾರೆ.

ನಾಡಹಬ್ಬ ಮೈಸೂರು ದಸರಾ 2025 – ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಸುಪ್ರೀಂ ಅಸ್ತು..!

ಬೆಂಗಳೂರು : ನಾಡಹಬ್ಬ ಮೈಸೂರು ದಸರಾ 2025 ಮಹೋತ್ಸವವನ್ನು ಸಾಹಿತಿ ಬಾನು ಮುಷ್ತಾಕ್‌ ಉದ್ಘಾಟಿಸುವುದಕ್ಕೆ ತಡೆ ನೀಡಬೇಕೆಂದು ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅದನ್ನು ವಜಾಗೊಳಿಸಿದ ಕೋರ್ಟ್ ದಸರಾ ಉದ್ಘಾಟಿಸಲು ಬಾನು ಮುಷ್ತಾಕ್ ಅವರಿ​ಗೆ ಅನುಮತಿ ನೀಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್​ ಮತ್ತು ನ್ಯಾ.ಸಂದೀಪ್​ ಮೆಹ್ತಾ ಅವರಿದ್ದ ಪೀಠ ಕರ್ನಾಟಕ ಹೈಕೋರ್ಟ್​ ಆದೇಶವನ್ನು […]

ಮಡಿಕೇರಿ ನಗರಸಭೆಗೆ ಲೋಕಾಯುಕ್ತ ದಿಢೀರ್‌ ದಾಳಿ..!

ಮಡಿಕೇರಿ : ಮಡಿಕೇರಿ ನಗರಸಭೆಗೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದ್ದಾರೆ. ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಇಂದು ದಿಢೀರ್‌ ದಾಳಿಯಾಗಿದೆ. ನಗಸಭೆಯ ವಿವಿಧ ವಿಭಾಗದ ಕಚೇರಿಗಳಿಗೆ ದಾಳಿ ನಡೆಸಿದ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಗರ್ಭದೊಳಗಿನ ಕಂದನಿಗೆ ಕಂಟಕವಾಗದಿರಲಿ ಅಬ್ಬರದ ಸಂಗೀತ..!

  ವಿಶೇಷ ಲೇಖನ : ಡಾ. ಕೆ.ಬಿ. ಸೂರ್ಯಕುಮಾರ್‌ ಮಹಾಭಾರತದಲ್ಲಿ ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ವಿವರಿಸುವಾಗ ಗರ್ಭದಲ್ಲಿದ್ದ ಅಭಿಮನ್ಯು ಅದನ್ನು ಕೇಳಿ ತಿಳಿದು, ಮುಂದೆ ಧನುರ್ವಿದ್ಯಾಪಾರಂಗತನಾದ. ವೈಜ್ಞಾನಿಕ ಸಂಶೋಧನೆಯ ಪ್ರಗತಿಯಿಂದ ಗರ್ಭಾಶಯವು ಶಬ್ದರಹಿತವಲ್ಲ ಎಂಬುದು ತಿಳಿದುಬಂದಿದೆ. ಗರ್ಭದೊಳಗಿನ ಮಗುವಿಗೆ ಹೊರ ಜಗತ್ತಿನಿಂದ ಬರುವ ಜೋರಾದ ಶಬ್ದಗಳು ಗರ್ಭರಸದ ( ಅಮ್ನಿಯೋಟಿಕ್ ಫ್ಲೂಯಿಡ್) ಮೂಲಕ ತಲುಪಬಹುದು ಮತ್ತು ನೇರವಾಗಿ ಹಾನಿಕರ ಪರಿಣಾಮ ಬೀರಬಹುದು ಎಂಬುದು ಸಾಬೀತಾಗಿದೆ. ಗರ್ಭದಲ್ಲಿ ಮಗು ಶಬ್ದವನ್ನು ಹೇಗೆ ಕೇಳುತ್ತದೆ?… […]

ಸಾಮಾಜಿಕ ಜಾಲತಾಣದಲ್ಲಿ ಸಚಿವ ಸಂತೋಷ್‌ ಲಾಡ್‌ಗೆ ನಿಂದನೆ – ಯುವ ಕಾಂಗ್ರೆಸ್‌ನಿಂದ ಎಸ್ಪಿಗೆ ದೂರು

ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ಗೆ ಅವಾಚ್ಯ ಶಬ್ದಗಳಿಂದ ವ್ಯಕ್ತಿಯೊಬ್ಬರು ನಿಂದಿಸಿದ್ದಾರೆಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ಎಸ್ಪಿ ಕೆ. ರಾಮರಾಜನ್‌ ಅವರಿಗೆ ದೂರು ನೀಡಲಾಯಿತು. ಇತ್ತೀಚೆಗೆ ಸಂತೋಷ್‌ ಲಾಡ್‌ ಕೊಡಗು ಜಿಲ್ಲೆಗೆ ಸಂತೋಷ್‌ ಲಾಡ್‌ ಭೇಟಿ ನೀಡಿದ ಸಂದರ್ಭದ ಫೋಟೋವನ್ನು ಶಾಸಕ ಎ.ಎಸ್.‌ ಪೊನ್ನಣ್ಣ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ವ್ಯಕ್ತಿಯೊಬ್ಬರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್‌, ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಎಸ್ಪಿ ಕೆ. ರಾಮರಾಜನ್‌ ಅವರಿಗೆ […]

ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣು ಕಾಡಾನೆ ಸಾವು

ಕುಶಾಲನಗರ : ಕಾವೇರಿ ನದಿಯಲ್ಲಿ ಮುಳುಗಿ ಹೆಣ್ಣಾನೆಯೊಂದು ಮೃತಪಟ್ಟ ಪ್ರಕರಣ ಮೀನುಕೊಲ್ಲಿ ಅರಣ್ಯದಲ್ಲಿ ವರದಿಯಾಗಿದೆ. ವಾಲ್ನೂರು-ಮಾಲ್ದಾರೆ ನಡುವೆ ಹರಿಯುವ ಕಾವೇರಿ ನದಿಯಲ್ಲಿ ಸೆ.17ರಂದು ಆನೆಯ ಮೃತದೇಹ ಕಂಡುಬಂದಿತ್ತು. ನದಿಯ ಮಧ್ಯ ಭಾಗದಲ್ಲಿ ಮೃತದೇಹವಿದ್ದ ಕಾರಣ ನಿನ್ನೆ ಹೊರಗೆಳೆಯಲು ಸಾಧ್ಯವಾಗಲಿಲ್ಲ. ಇಂದು ಬೋಟ್‌ ಹಾಗೂ ಸಾಕಾನೆಗಳ ನೆರವಿನಿಂದ ಆನೆಯ ಮೃತದೇಹವನ್ನು ನದಿಯಿಂದ ಹೊರತರಲಾಯಿತು. ಮರಣೋತ್ತರ ಪರೀಕ್ಷೆ ವೇಳೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಇದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ಇಲಾಖೆಯ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅಲ್ಲೇ […]

ಮಡಿಕೇರಿ ಜನೋತ್ಸವ ದಸರಾ 2025 : ಸೆ. 24 ರಂದು ಕಾಫಿ ದಸರಾ – ನೀವೂ ಭಾಗವಹಿಸಬಹುದು…

  ಮಡಿಕೇರಿ : ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಸೆ 24 ರಂದು ಬುಧವಾರ ಆಯೋಜಿತ ಎರಡನೇ ವಷ೯ದ ಕಾಫಿ ದಸರಾ ಸಂದಭ೯ ಕಾಫಿಯಿಂದ ತಯಾರಿಸಲ್ಪಡುವ ವೈವಿಧ್ಯಮಯ ಖಾದ್ಯಗಳ ಸ್ಪಧೆ೯ ಆಯೋಜಿಸಲಾಗಿದೆ ಎಂದು ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮತ್ತು ಕಾಫಿ ದಸರಾ ಸಮಿತಿ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ಕಾಫಿಯ ಮಹತ್ವ ತಿಳಿಸಲು ಮಾಹಿತಿಯುಕ್ತ ಸ್ಪಧೆ೯ಯನ್ನು ಸೆ.24 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾಫಿ […]

ಜಿಲ್ಲಾಮಟ್ಟದ ಫುಟ್ಬಾಲ್‌ ಪಂದ್ಯಾವಳಿ – ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜು ಬಾಲಕಿಯರ ತಂಡ ರನ್ನರಪ್‌

ಗೋಣಿಕೊಪ್ಪ : ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪಿ.ಯು. ಕಾಲೇಜಿನ ಬಾಲಕಿಯರ ತಂಡ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಫುಟ್ಬಾಲ್‌ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪಂದ್ಯಾವಳಿಯಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿತ್ತು. ಗೋಣಿಕೊಪ್ಪ ಕಾಪ್ಸ್‌ನಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ರನ್ನರಪ್‌ ಆಗಿ ಹೊರಹೊಮ್ಮಿದೆ. ಶಾಲೆಯ ವಿದ್ಯಾರ್ಥಿನಿಯರಾದ ನಷ್ಮಾ ನೀಲಮ್ಮ, ನಿವೇದಾ ದೇಚಮ್ಮ, ಸಿಯಾ ಗಂಗಮ್ಮ, ಆಕೃತಿ ಬಿ.ಎಂ, ಪ್ರಜ್ಞಾ ಪೊನ್ನಮ್ಮ ಎಂ.ಬಿ, ಪೊನ್ನಮ್ಮ ಎ.ಎಸ್, ಸೃಜಲ್ ಬೋಜಮ್ಮ, […]

ಹಾವುಗಳನ್ನು ಹಿಡಿದು ಫೋಟೋ ಶೂಟ್ ಮಾಡಿದರೆ ಕೇಸ್‌ ಬೀಳುತ್ತೆ ಎಚ್ಚರ..!

ಬೆಂಗಳೂರು : ಇತ್ತೀಚಿನ ದಿನದಲ್ಲಿ ಉರಗ ರಕ್ಷಣೆ ಹೆಸರಿನಲ್ಲಿ ಹಾವುಗಳಿಗೆ ಹಿಂಸೆ ನೀಡುತ್ತಿರುವುದು ಹಾಗೂ ಅವುಗಳನ್ನು ಬಳಸಿಕೊಂಡು ಫೋಟೋಶೂಟ್‌ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೊನೆಗೂ ಎಚ್ಚೆತ್ತಿದೆ. ಹಾವು ಹಾಗೂ ಅವುಗಳ ಮೊಟ್ಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು, ವಿಷ ತೆಗೆಯುವುದು, ಅನುಮತಿ ಇಲ್ಲದೆ ಅರಣ್ಯ ಪ್ರವೇಶಿಸಿದ ಸಂಶೋಧನೆ ಮಾಡುವವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ಕೊಟ್ಟಿದ್ದಾರೆ. ರಾಜ್ಯದ ಮಲೆನಾಡು ಭಾಗದಲ್ಲಿ ಅನಧಿಕೃತವಾಗಿ ಕಾಳಿಂಗ […]