ಗೋಡಾ ಹೈ – ಮೈದಾನ್‌ ಹೈ, ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ : ದಸರಾ ವೇದಿಕೆಯಲ್ಲಿ ಸಿಎಂ ಬಹಿರಂಗ ಸವಾಲು..!

ಮೈಸೂರು : ಗೋಡಾ ಹೈ-ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷಗಳಿಗೆ ಸವಾಲು ಎಸೆದರು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದಸರಾ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರಿಗೆ ವಿರೋಧಿಸಿದ್ದರು. ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ. ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ […]

ಮೈಸೂರು ದಸರಾಗೆ ವಿಧ್ಯುಕ್ತ ಚಾಲನೆ – ಆರತಿ ಸ್ವೀಕರಿಸಿ ಭಾವುಕರಾದ ಬಾನು ಮುಷ್ತಾಕ್..!

ಮೈಸೂರು : ನಾಡಹಬ್ಬ ಮೈಸೂರು ದಸರಾಗೆ ಚಾಲನೆ ಸಿಕ್ಕಿದೆ. ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ದಸರಾಗೆ ಚಾಲನೆ ನೀಡಿದರು. ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿದ ಬಾನು ಮುಷ್ತಾಕ್‌ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಂಗಳಾರತಿ ಸ್ವೀಕರಿಸಿದರು. ಇದರೊಂದಿಗೆ ದೇವಿಯ ಸೀರೆಯನ್ನೂ ಪಡೆದುಕೊಂಡರು. ಅರ್ಚಕರು ಹೂವಿನ ಹಾರ ನೀಡಿ ಗೌರವಿಸಿದರು. ಕೆಲ ಕ್ಷಣ ಅವರು ಭಾವುಕರಾದಂತೆ ಕಂಡುಬಂದರು. ಬಾನು ಮುಷ್ತಾಕ್‌ ದಸರಾ ಉದ್ಘಾಟಿಸುವದಕ್ಕೆ ಪ್ರತಾಪ್‌ ಸಿಂಹ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ದೇವಿಜೆ ಪೂಜೆ ಮಾಡುತ್ತಾರಾ? […]

ವೇಶ್ಯಾವಾಟಿಕೆ ದಂಧೆ ಪ್ರಕರಣ – ಕೊಡಗಿನ ಒಬ್ಬ, ಕೇರಳದ ಮೂವರನ್ನು ಬಂಧಿಸಿದ ಕೊಡಗು ಪೊಲೀಸರು

ವೀರಾಜಪೇಟೆ : ಗಾಂಧಿನಗರದಲ್ಲಿನ ಆರೆಂಜ್ ಫ್ಯಾಮಿಲಿ ಬ್ಯೂಟಿ ಪಾಲರ್ & ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರದೀಪನ್ ಪಿ.ಪಿ, (48), ಕಲೇಶ್ ಕುಮಾರ್(45), ಶಾಜಿ(38), ವಿರಾಜಪೇಟೆ ತಾಲೂಕು ಅಮ್ಮತ್ತಿ ಗ್ರಾಮದ ನೆಲ್ಲಮಕ್ಕಡ ಎ. ಪೊನ್ನಣ್ಣ(48) ಬಂಧನಕ್ಕೊಳಗಾದವರು. ಖಚಿತ ಮಾಹಿತಿ ಮೇರೆಗೆ ಸೆ.18ರಂದು ದಾಳಿ ನಡೆಸಿದ್ದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಮಹೇಶ್ […]

ಕೊಡವರದ್ದು ಹಿಂದು ಧರ್ಮ – ಹಿಂದುಗಳನ್ನು ವಿಭಜಿಸುವ ಷಡ್ಯಂತ್ರಕ್ಕೆ ಬಲಿಯಾಗದಿರಿ : ನಾಪಂಡ ರವಿ ಕಾಳಪ್ಪ

ಮಡಿಕೇರಿ : ರಾಜ್ಯ ಸರ್ಕಾರ ಸೆ.22ರಿಂದ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕೊಡವರು ಗೊಂದಲಕ್ಕೀಡಾಗಬಾರದು. ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕೊಡವ ಎಂದು ನಮೂದಿಸುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮನವಿ ಮಾಡಿದ್ದಾರೆ. ಕೆಲವು ಸಂಘಟನೆಗಳು ಕೊಡವ ಧರ್ಮ ಎಂದು ನಮೂದಿಸುವಂತೆ ಹೇಳಿಕೆ ನೀಡುತ್ತಿದೆ. ಇದರಿಂದ ಜನರಲ್ಲಿ ಗೊಂದಲ ಮೂಡುವಂತಾಗಿದೆ. ಹಿಂದಿನಿಂದಲೂ ಕೊಡವರು ಹಿಂದು ಧರ್ಮದ ಭಾಗವಾಗಿದ್ದಾರೆ. ಇದೀಗ ಕೊಡವ ಧರ್ಮ ಎಂದು ಹೇಳುವ ಮೂಲಕ ಹಿಂದು ಧರ್ಮವನ್ನು ಒಡೆಯುವ ಷಡ್ಯಂತ್ರ […]

ಮಿತ ಆಹಾರ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ – ಮಂಜುನಾಥ್‌

ಮಡಿಕೇರಿ : ಮಿತವಾದ ಆಹಾರ ಸೇವನೆ, ಆರೋಗ್ಯಕರ ಚಟುವಟಿಕೆಯಿಂದ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯವೆಂದು ಆಹಾರ ಸುರಕ್ಷತಾ ಸಹಾಯಕ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು. ಕೋಪಟ್ಟಿ ಸಮೀಪದ ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನದ ಅಡಿಯಲ್ಲಿ ಅರಿವು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮತೋಲನ ಆಹಾರದ ಕುರಿತು ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿದಿನದ ಬದುಕಿನ ಭಾಗವಾಗಬೇಕು ಎಂದು ತಿಳಿಸಿದರು. ಮಡಿಕೇರಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಮಾತನಾಡಿ ಪ್ರತಿದಿನದ ಆಹಾರದಲ್ಲಿ ಸಮತೋಲನ ಆಹಾರ ಸೇವನೆ ಅಗತ್ಯವಾಗಿದ್ದು, […]

ಹೆಸರಿಗೆ ಬ್ಯೂಟಿ ಪಾರ್ಲರ್, ಮಸಾಜ್‌ ಸೆಂಟರ್‌ – ಆದ್ರೆ ಅಲ್ಲಿ ಆಗುತ್ತಿದ್ದ ಮಸಾಜ್‌ ಬೇರೆಯದ್ದೇ..!

ವೀರಾಜಪೇಟೆ : ಬ್ಯೂಟಿ ಪಾರ್ಲರ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಪ್ರದೀಪನ್‌ ಮತ್ತು ಶಿಜು ಬಂಧಿತರು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಇಬ್ಬರ ವಿರುದ್ಧ ವೀರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಧಿನಗರದಲ್ಲಿ ಖಾಸಗಿ ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿದ್ದ ಇಬ್ಬರು ಆರೇಂಜ್ ಫ್ಯಾಮಿಲಿ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಸೆಂಟರ್ ನಡೆಸುತಿದ್ದರು. ಆದರೆ ಅಲ್ಲಿ ಬೇರೆಯದ್ದೇ ಚಟುವಟಿಕೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಇತ್ತು. ಕೆಲವರು ಐಶಾರಾಮಿ ಕಾರಿನಲ್ಲಿ ಬಂದು […]

ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗೆ ವೀರಾಜಪೇಟೆಯ ಮುಹಮ್ಮದ್‌ ಅಶ್ಹದ್‌ ಆಯ್ಕೆ

ವೀರಾಜಪೇಟೆ : ಎಸ್‌ಎಸ್‌ಎಫ್‌ ಜಿಲ್ಲಾ ಘಟಕ ವತಿಯಿಂದ ಕಡಂಗದಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ನಡೆಯಿತು. ಜೂನಿಯರ್‌ ವಿಭಾಗದ ಕನ್ನಡ ಕಥೆ ಹೇಳುವ ಸ್ಪರ್ಧೆಯಲ್ಲಿ ಕಲ್ಲುಬಾಣೆಯ ಮುಹಮ್ಮದ್‌ ಅಶ್ಹದ್‌ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ಕಲ್ಲುಬಾಣೆಯ ಹ್ಯಾರಿಸ್‌, ಅಮೀನ ದಂಪತಿಯ ಪುತ್ರ. ರಾಜ್ಯಮಟ್ಟದ ಸ್ಪರ್ಧೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ತುರ್ಕಳಿಕೆಯಲ್ಲಿ ಸೆ.26ರಿಂದ 28ರವರೆಗೆ ನಡೆಯಲಿದೆ.

ಮರಗೋಡುವಿನಲ್ಲಿ ʼದುರ್ಗಾಷ್ಟಮಿ ಮತ್ತು ಗೋಪೂಜೆʼ ಸೆ. 26ಕ್ಕೆ

ಮರಗೋಡು : ವಿಶ್ವ ಹಿಂದು ಪರಿಷತ್‌, ಬಜರಂಗದಳ, ಮಾತೃಶಕ್ತಿ ದುರ್ಗಾವಾಗಿನಿ ಮರಗೋಡು ಘಟಕ ವತಿಯಿಂದ ದುರ್ಗಾಷ್ಟಮಿ ಮತ್ತು ಗೋಪೂಜೆ ಸೆ.26ರಂದು ನಡೆಯಲಿದೆ. ಮರಗೋಡುವಿನ ಶಿವಪಾರ್ವತಿ ದೇವಾಲಯದಲ್ಲಿ ಬೆಳಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾತೃಶಕ್ತಿ ಪ್ರಮುಖ್‌ ಗುಡ್ಡೆಮನೆ ರೋಹಿಣಿ ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಶಿಕ್ಷಕಿ ಭಾಗೀರಥಿ ಹುಲಿತಾಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಮಡಿಕೇರಿ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯಡಿ 2025-26 ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆಯ ಉದ್ದೇಶ; ಈ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ನೇರವಾಗಿ ಸಾಲ- ಸಹಾಯಧನ ಮಂಜೂರು ಮಾಡಲು ಉದ್ದೇಶಿಸಿದೆ. ಹಲವು ವೃತ್ತಿಗಳಾದ ಹಸು ಸಾಕಾಣಿಕೆ, ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಇತ್ಯಾದಿ ವ್ಯಾಪಾರ ವಹಿವಾಟುಗಳನ್ನು ಕೈಗೊಳ್ಳಲು […]

ಮಡಿಕೇರಿ ಜನೋತ್ಸವ ದಸರಾ : ಸೆ.28 ರಂದು ಮಹಿಳಾ ದಸರಾ ಸಂಭ್ರಮ – ಹೆಂಗಳೆಯರಿಗಾಗಿ ಹಲವು ಸ್ಪರ್ಧೆಗಳು

ಮಡಿಕೇರಿ : ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ 8 ನೇ ವರ್ಷದ ಮಹಿಳಾ ದಸರಾ ಆಯೋಜಿಸಲಾಗಿದ್ದು, ಸೆಪ್ಟೆಂಬರ್ 28 ರಂದು ನಡೆಯಲಿದೆ. ವೈವಿಧ್ಯಮಯ ಸ್ಪರ್ಧೆಗಳನ್ನು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್‌ ತಿಳಿಸಿದ್ದಾರೆ. ಮೆಹಂದಿ ಹಾಕುವುದು, ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಕೇಶವಿನ್ಯಾಸ, ಸೀರೆಗೆ ನಿಖರ ಬೆಲೆ ಹೇಳುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಮಾಡುವುದು, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಕೆರೆ ದಡ ಆಟ, ಹಣೆಯಲ್ಲಿ […]