ಸಿದ್ದಾಪುರ : ಕಾರಿನಲ್ಲಿ ಮಹಿಳೆಯ ಶ*ವ ಸಾಗಿಸುತ್ತಿದ್ದ ಪ್ರಕರಣ ಮಾಲ್ದಾರೆ ಚೆಕ್‌ಪೋಸ್ಟ್‌ನಲ್ಲಿ ಬೆಳಕಿಗೆ ಬಂದಿದೆ. ಮಾಲ್ದಾರೆ ಲಿಂಗಾಪುರ ಚೆಕ್ ಪೋಸ್ಟ್ ಮೂಲಕ ನಿನ್ನೆ ನಡುರಾತ್ರಿ ಕಾರೊಂದರಲ್ಲಿ ಮಹಿಳೆಯೊಬ್ಬರ ಮೃ*ತದೇಹವನ್ನು ಸಾಗಿಸಲು ಪ್ರಯತ್ನ ನಡೆದಿತ್ತು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ತಪಾಸಣೆ ನಡೆಸುವ ವೇಳೆ ಶ*ವ ಇರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಶಕ್ಕೆ ಪಡೆದವರ ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರಿನಿಂದ ಕೊಡಗಿಗೆ ಪ್ರವೇಶಕ್ಕೆ ಮುಂದಾಗಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಹರಿಯಾಣ ನೋಂದಣಿಯ ಕಾರ್ ಆಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.





