ಮಡಿಕೇರಿ : ಜಿಲ್ಲೆಗೆ ಬರುತ್ತಿರುವ ಪ್ರವಾಸಿ ಬಸ್‌ಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕೊಡಗು ಅಭಿವೃದ್ಧಿ ಸಮಿತಿ ನಿಯೋಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನ ಸೆಳೆಯಿತು. ಕೊಡಗಿಗೆ ಸಾಕಷ್ಟು ಅಂತಾರಾಜ್ಯ ಬಸ್‌ಗಳು ಬರುತ್ತಿವೆ. ಹೆಚ್ಚಾಗಿ ಕೇರಳ ಭಾಗದಿಂದ ಬಸ್‌ಗಳು ಬರುತ್ತಿವೆ. ಇವುಗಳ ಬಗ್ಗೆ ನಿಗಾ ಇಡಬೇಕು ಎಂದು ಮನವಿ ಮಾಡಲಾಯಿತು.
ಪ್ರವಾಸಿಗರನ್ನು ಕರೆದುಕೊಂಡು ಬರುವ ಬಸ್‌ಗಳು ಅತಿಯಾದ ಶಬ್ಧ, ಧ್ವನಿವರ್ದಕವನ್ನು ಬಳಸಿ ಜನರಿಗೆ ತೊಂದರೆ ಕೊಡುತ್ತಿವೆ. ಈ ಬಗ್ಗೆಯೂ ಗಮನಹರಿಸಬೇಕು. ಜೊತೆಗೆ ಪರವಾನಗಿ ಇಲ್ಲದೆ ಸಂಚರಿಸುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಿತಿಯ ಪ್ರಮುಖರಾದ ದಾವೂದ್, ಪ್ರಸನ್ನ ಭಟ್, ಲವ ಕುಮಾರ್, ಸಂದೀಪ್ ಮತ್ತು ವಿನೋದ್ ಕೆ ನಿಡುಗಣೆ ಈ ಸಂದರ್ಭ ಇದ್ದರು.



