ವಾಹನ ಚಾಲನೆ ಕಲಿಸುವುದು ಮುಖ್ಯವಲ್ಲ ಸುರಕ್ಷಿತ ಚಾಲನೆಯನ್ನು ಕಲಿಸುವುದು ಅತಿ ಮುಖ್ಯ: ಎಸ್ ಟಿ ಸತೀಶ್

Share this post :

ವಾಹನ ಚಲಾವಣೆಯನ್ನು ಆಸಕ್ತಿಯಿಂದ ಪ್ರತಿಯೊಬ್ಬರು ಕಲಿಯುತ್ತಾರೆ. ಆದರೆ ಸುರಕ್ಷಿತ ಚಾಲನೆಯನ್ನು ಕಲಿಯುವುದು ಅತಿ ಮುಖ್ಯ ಎಂದು ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್ ಟಿ ಸತೀಶ್ ಅಭಿಪ್ರಾಯಪಟ್ಟರು.

ವಿರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಲಾರ್ಡ್ಸ್ ಡ್ರೈವಿಂಗ್ ಶಾಲೆಯ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದವರು ಸಮಾಜದಲ್ಲಿ ಬೆಳವಣಿಗೆಯನ್ನು ಹೊಂದಿದ ಪ್ರತಿಯೊಬ್ಬರಲ್ಲಿಯೂ ಸಮಾಜದ ಕುರಿತಾ ಕೃತಜ್ಞತಾ ಭಾವನೆ ಇರಬೇಕು. ಸೌಜನ್ಯಯುತ ಹಾಗೂ ಮನುಷ್ಯತ್ವದಿಂದ ನೀಡುವ ಕಲಿಕೆ ಇತರರಿಗೂ ಪ್ರೇರಣೆಯಾಗುತ್ತದೆ . ಅದರಂತೆ ವಿರಾಜಪೇಟೆ ಲಾರ್ಡ್ಸ್ ಡ್ರೈವಿಂಗ್ ಶಾಲೆಯು ಸಹ ಹೆಚ್ಚು ಜನ ಮನ್ನಣೆಯನ್ನು ಹೊಂದಿದ್ದು ಡ್ರೈವಿಂಗ್ ಶಾಲೆಯ ಕಚೇರಿಯನ್ನು ನೋಡಿದಂತಹ ಸಂದರ್ಭದಲ್ಲಿ ಇಲ್ಲಿರುವ ಚಿತ್ರಪಟಗಳು ವಾಹನ ಚಾಲನೆ ಕಲಿಯಲು ಬರುವ ಪ್ರತಿಯೊಬ್ಬರಿಗೂ ಸಂಚಾರಿ ನಿಯಮದ ಬಗ್ಗೆ ಉತ್ತಮವಾದ ಜ್ಞಾನವನ್ನು ನೀಡುತ್ತದೆ . ರಸ್ತೆ ಅಪಘಾತದಿಂದ ವಾರ್ಷಿಕ ಒಂದು ಲಕ್ಷಕ್ಕೂ ಹೆಚ್ಚು ಜನ ಮೃತಪಡುತ್ತಿದ್ದು ಆದ್ದರಿಂದ ಜನರಿಗೆ ಕೇವಲ ವಾಹನ ಚಲಾವಣೆಯನ್ನು ಕಳಿಸದೆ ಸುರಕ್ಷಿತ ಚಾಲನೆ ಯೊಂದಿಗೆ ಎಲ್ಲಾ ರೀತಿಯ ಸಂಚಾರಿ ನಿಯಮಗಳನ್ನು ಕಲಿಸುತ್ತಿರುವ ಈ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸೈಂಟ್ ಆನ್ಸ್ ಚರ್ಚಿನ ಪ್ರಧಾನ ಧರ್ಮ ಗುರು ರೆ.ಫಾ . ಜೇಮ್ಸ್ ಡೊಮಿನಿಕ್ ಈ ಸಂಸ್ಥೆಯು ಸುಧೀರ್ಘವಾಗಿ 30 ವರ್ಷದಿಂದ ಜನಮನ್ನಣೆಯನ್ನು ಪಡೆಯುವುದರೊಂದಿಗೆ ಉತ್ತಮ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದೆ. ಇದೇ ರೀತಿ ಇನ್ನು ಮುಂದೆ ನಿರಂತರವಾಗಿ ಈ ಸೇವೆ ಸಾಗಲಿ ಎಂದು ಶುಭ ಹಾರೈಸಿದ .

ಪ್ರಾಸ್ತಾವಿಕವಾಗಿ ಲಾರ್ಡ್ಸ್ ಡ್ರೈವಿಂಗ್ ಶಾಲೆಯ  ವ್ಯವಸ್ಥಾಪಕರಾದ ಬೆನೆಡಿಕ್ಟ್ ಆರ್ ಸಲ್ಡಾನಾ ಮಾತನಾಡಿ ಡ್ರೈವಿಂಗ್ ಶಾಲೆಯನ್ನು ಆರಂಭಿಸಿಲು ಸಹಕರಿಸಿದ ಸರ್ವರಿಗೂ ಧನ್ಯವಾದ ಸಮರ್ಪಿಸಿ , 30 ವರ್ಷದಿಂದ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಮೆಲಕು ಹಾಕಿದರು. ಮಾರ್ಚ್‌ ತಿಂಗಳಿನ  13 , 14 , 15 ರಂದು ಲಾರ್ಡ್ಸ್ ಕ್ರಿಕೇಟ್ ಕಫ್ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ನಡೆಸಲಾಗುದು ಹಾಗೂ  15 ರಂದು  150 ಕ್ಕೂ ಹೆಚ್ಚಿನ ವಿಂಟೇಜ್  ಕಾರ್ , ಬೈಕ್ ಪ್ರದರ್ಶ ನ ಹಾಗೂ  ಸ್ವರ್ಧೆ ನಡೆಯಲಿದೆ ಎಂದರು.

ಹಿರಿಯ ಧರ್ಮ ಗುರುಗಳಾದ  ರೆ.ಫಾ. ವಿನ್ಸೆಂಟ್ ಫರ್ನಾಂಡಿಸ್ ,  ಡಾ. ಪಾತಿಮಾ ಕಾರ್ಯಪ್ಪ , ಹಿರಿಯ ವಾಹನ ನಿರೀಕ್ಷಕ ಮೋಹನ್ ಕುಮಾರ್  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶುಭಕೋರಿದರು. ವೇದಿಕೆಯ ಮೇಲೆ ಅಲೆಗ್ಸಾಂಡರ್  ಸಲ್ಡಾನ , ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಳೆಯ , ಪ್ರಸ್ತುತ ವಿದ್ಯಾರ್ಥಿಗಳು  , ಬಂದು ಮಿತ್ರರು , ಅಪ್ಪಯ್ಯ ಸ್ವಾಮಿ ಲೇಔಟ್ ನ ನಿವಾಸಿಗಳು ಹಾಜರಿದ್ದರು.

coorg buzz
coorg buzz