ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿ ಸುನೀಲ್‌ ಪೊನ್ನೇಟಿ ನೇಮಕ

Share this post :

ಮಡಿಕೇರಿ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾಗಿ ಸುನಿಲ್ ಪೊನ್ನೇಟಿ ಅವರನ್ನು ನೇಮಕ ಮಾಡಲಾಯಿತು.
ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಖಾಲಿಯಿದ್ದ ಖಜಾಂಚಿ ಹಾಗೂ ವಿವಿಧ ಸ್ಥಾನಗಳಿಗೆ ನೇಮಕಾತಿ ಮಾಡಲಾಯಿತು. ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಪಳೆಯಂಡ ಪಾರ್ಥ ಚಿಣ್ಣಪ್ಪ, ಖಜಾಂಚಿ ಆಯ್ಕೆಯಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಕೆ. ಶಿವಕುಮಾರ್, ನಾಮನಿರ್ದೇಶಿತ ಸದಸ್ಯರುಗಳಾಗಿ ಬೊಳ್ಳಜಿರ ಅಯ್ಯಪ್ಪ, ರಾಜು ರೈ ಹಾಗೂ ವಿ.ವಿ. ಅರುಣ್ ಕುಮಾರ್ ಅವರನ್ನು ನೇಮಿಸಲಾಯಿತು.
ಉಪಸಮಿತಿ ರಚನೆ : ಸಂಘದ ಕ್ರೀಡಾ ಸಮಿತಿ ಸಂಚಾಲಕರಾಗಿ ಸಂತೋಷ್ ರೈ, ಸಹ ಸಂಚಾಲಕರಾಗಿ ರಿಜ್ವಾನ್ ಹುಸೈನ್, ಪತ್ರಕರ್ತರ ಸಾಂಸ್ಕೃತಿಕ ವೇದಿಕೆ ಸಂಚಾಲಕರಾಗಿ ಟಿ.ಆರ್. ಪ್ರಭುದೇವ್, ಸಹ ಸಂಚಾಲಕರಾಗಿ ಮಲ್ಲಿಕಾರ್ಜುನ್, ಪ್ರವಾಸ ಸಮಿತಿ ಸಂಚಾಲಕರಾಗಿ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಹ ಸಂಚಾಲಕರಾಗಿ ರೆಜಿತ್ ಕುಮಾರ್, ಆರ್. ಸುಬ್ರಮಣಿ, ಕಾರ್ಯಚಟುವಟಿಕೆ ಸಮಿತಿ ಸಂಚಾಲಕರಾಗಿ ಜಿ.ಆರ್. ಪ್ರಜ್ವಲ್, ಸಹ ಸಂಚಾಲಕರಾಗಿ ಜೈರುಸ್ ಥೋಮಸ್ ಅಲೆಗ್ಸಾಂಡರ್ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಸವಿತಾ ರೈ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್ ಸೇರಿದಂತೆ ಪದಾಧಿಕಾರಿಗಳು, ನಿರ್ದೇಶಕರುಗಳು, ತಾಲೂಕು ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

coorg buzz
coorg buzz