ಕುಶಾಲನಗರ : ಬಾಳುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ CISCO ಹಾಗೂ ʼಜಾಗೃತಿʼ ಸರ್ಕಾರೇತರ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಸ್ಥೆ ಪ್ರತಿನಿಧಿಗಳಾದ ನೋಯಲ್ ಹಾಗೂ ಕಣ್ಣನ್ ನೇತೃತ್ವದಲ್ಲಿ ಮಕ್ಕಳ ದಿನಾಚರಣೆಯ ಉಡುಗೊರೆಯಾಗಿ ಎಕ್ಸಾಂ ಪ್ಯಾಡ್(exam pad) ಮತ್ತು ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಕಿಟ್(sanitary kit) ವಿತರಿಸಲಾಯಿತು. ಜಾಗೃತಿ ಹಾಗೂ CISCO ಸಂಸ್ಥೆಯ ಸಿಬ್ಬಂದಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಸ್ಥಳೀಯ ಉದ್ಯಮಿ ದಿನೇಶ್ ಹಾಗೂ ಹಳೆ ವಿದ್ಯಾರ್ಥಿ ಬಳಗದ ರವಿಕುಮಾರ್ ಬಿ.ಎನ್. ಅವರ ಪ್ರಯತ್ನದಿಂದಾಗಿ ಪ್ರತಿಷ್ಠಿತ ಸಂಸ್ಥೆಗಳು ಬಾಳುಗೋಡು ಶಾಲೆಗೆ ಕೊಡುಗೆ ನೀಡಿದ್ದು, ಅವರಿಗೆ ಶಾಲೆ ಶಿಕ್ಷಕರು ಧನ್ಯವಾದ ಅರ್ಪಿಸಿದ್ದಾರೆ.




