ಮಡಿಕೇರಿ : ಬಂಟ್ವಾಳದ ಯುವವಾಹಿನಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯಲ್ಲಿ ಕೊಡಗಿನ ಸಾಹಿತಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರಿಗೆ ಪ್ರಶಸ್ತಿ ಲಭಿಸಿದೆ. ಕವಿ, ಸಾಹಿತಿ ಬಿ. ತಮ್ಮಯ್ಯ ಅವರ ನೆನಪಿಗಾಗಿ ಅತೀ ಸಣ್ಣ ಕಥೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.
ಅತೀ ಸಣ್ಣ ಕಥೆ ವಿಭಾಗದಲ್ಲಿ ಸ್ಮಿತಾ ಅವರ ʼಸ್ಪೋಟʼ ಕಥೆಗೆ ದ್ವಿತೀಯ ಬಹುಮಾನ ಸಿಕ್ಕಿದೆ. ಪ್ರಥಮ ಬಹುಮಾನ ಸುಲ್ತಾನ್ ಮನ್ಸೂರು ಮಂಚಿ(ಜಾಥಾ) ಪಾಲಾಗಿದೆ. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಅವರ ಬೂಬು ಎಂಬ ಮರಿಮೊಮ್ಮಗಳುʼ ಪ್ರಬಂಧ ಪ್ರಥಮ, ನಳಿನಿ ಭೀಮಪ್ಪ ಧಾರವಾಡ ಅವರ ‘ಮುಡಿಯಿಂದ ಜಾರುತಿಹವೋʼ ಪ್ರಬಂಧ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.




